ದರ್ಶನ ದರ್ಪಣ

7

ದರ್ಶನ ದರ್ಪಣ

Published:
Updated:

ಸಂದರ್ಭೊಚಿತ ಲೇಖನ

ಕಳೆದ ವಾರದ ಮುಖಪುಟದ ಲೇಖನ  `ಕನಕ ಅರಮನೆ ಅನಾವರಣ' ಸಂದರ್ಭೋಚಿತವಾಗಿತ್ತು. ಅರಮನೆಯ ಅವಶೇಷಗಳ ಜೊತೆಗೇ ಕನಕರ ಚರಿತ್ರೆಯನ್ನು ಪುಷ್ಟಿಗೊಳಿಸುವ ಇಂತಹ ಪುನಸೃಷ್ಟಿ ಕಾರ್ಯ ಶ್ಲಾಘನೀಯ.

-  ಸಾವಿತ್ರಮ್ಮ ವಿಭೂತಿ, ಹರಿಹರ

ರೈತರಲ್ಲಿ ಆಶಾ ಭಾವನೆ

ನೈಸರ್ಗಿಕ ಕೃಷಿಯ ಕುರಿತು ಹೊಸದಾಗಿ ಅಂಕಣ ಆರಂಭಿಸಿರುವುದು ತುಂಬಾ ಸಂತಸವಾಯಿತು. ಸಾಲ ಸೋಲ ಮಾಡಿ ಹತಾಶರಾಗಿರುವ ರೈತರ ಬಾಳಿನಲ್ಲಿ ಈ ಅಂಕಣ ಹೊಸ ಆಶಾ ಭಾವನೆ ಮೂಡಿಸಿದೆ.

`ನೆರೆ-ಬರಕ್ಕೂ ಸಿದ್ಧ ಕಬ್ಬು' ಲೇಖನದಲ್ಲಿ ರೈತರು ಬೆಳೆಯುತ್ತಿದ್ದುದು `ಸಿಓ 62175' ತಳಿಯ ಕಬ್ಬು ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು. ಈ ಕಬ್ಬನ್ನು ಬೆಲ್ಲ ಮತ್ತು ಸಕ್ಕರೆಗೆ ಮಾತ್ರ ಬಳಕೆ ಮಾಡಲಾಗುತ್ತದೆ.

- ಹನುಮಂತಪ್ಪ, ಬ್ರಹ್ಮಾವರ  - ಎನ್.ಎಂ.ಎಸ್. ವಿಜಯಾ- ರಾಯಚೂರು

ಸಂಗ್ರಹ ಯೋಗ್ಯ

`ಕರ್ನಾಟಕ ದರ್ಶನ'ದಲ್ಲಿ ಪ್ರಕಟಗೊಳ್ಳುವ ಪ್ರತಿಯೊಂದು ಲೇಖನಗಳು ಸಂಗ್ರಹ ಯೋಗ್ಯವಾಗಿವೆ. ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಅಪೂರ್ವ ಮಾಹಿತಿ ದೊರಕುತ್ತಿದೆ. ಕೃಷಿ ಪುರವಣಿಯಲ್ಲಿ ಬರುವ ಎಲ್ಲ ಲೇಖನಗಳು ಕೃಷಿಕರಿಗೆ ದಾರಿದೀವಿಗೆಯಾಗಿದೆ.

- ರಾಮಲಿಂಗಯ್ಯ ಸಿದ್ಧಯ್ಯ ಸ್ವಾಮಿ ಹಿರೇಮಠ,  ಚೈತ್ರ ಕುಕನೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry