ದರ್ಶನ ದರ್ಪಣ

7

ದರ್ಶನ ದರ್ಪಣ

Published:
Updated:

ಸರ್ಕಾರ ಗಮನ ಹರಿಸಲಿ

ಸೂರ್ಯ ವಜ್ರಾಂಗಿ ಅವರ `ಮಧುಗಿರಿಯ ತುದಿ ಏರಿ' ಲೇಖನ ನೋಡಿ ಅಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದೆನಿಸಿತು. ಈ ಬೆಟ್ಟವನ್ನು ಎಲ್ಲರೂ ಏರಲು ಅನುಕೂಲವಾಗುವಂತೆ ಸರಿಯಾದ ಸೌಲಭ್ಯ ಕಲ್ಪಿಸುವತ್ತ ಸರ್ಕಾರ ಗಮನ ಹರಿಸಲಿ ಎನ್ನುವುದೇ ನಮ್ಮೆಲ್ಲರ ಆಶಯ.

ಮಲ್ಲಿಕಾರ್ಜುನ ಸಂಗನಗೌಡ  ಗೌಡರ್, ಬಿಳೇಕಲ್ಲು

ಶ್ಲಾಘನಾರ್ಹ ಕಾರ್ಯ

ನೈಸರ್ಗಿಕ ಕೃಷಿಯ ಬಗ್ಗೆ ಪ್ರತಿವಾರವೂ ಉತ್ತಮ ಲೇಖನ ಮೂಡಿ ಬರುತ್ತಿದೆ. ರಾಸಾಯನಿಕಗಳ ಸಿಂಪಡನೆಗೆ ಸಾಲಸೋಲ ಮಾಡಿ ಬೆಳೆಯೂ ಬಾರದೆ ಹಲವು ರೈತರು ಸೋತು ಹೋಗಿದ್ದಾರೆ. ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಅಲ್ಪ ಖರ್ಚಿನಲ್ಲಿಯೇ ನಿಸರ್ಗದಲ್ಲಿ ಸಿಗುವ ಸಾಮಗ್ರಿ ಬಳಸಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಬಹುದು ಎಂಬ ಬಗ್ಗೆ ಯಶಸ್ವಿ ರೈತರ ಉದಾಹರಣೆ ಕೊಟ್ಟು ತಿಳಿಸಿಕೊಡುತ್ತಿರುವ `ಕರ್ನಾಟಕ ದರ್ಶನ'ದ ಕಾರ್ಯ ಶ್ಲಾಘನಾರ್ಹ. ರೈತರಲ್ಲಿ ಇದು ಆತ್ಮವಿಶ್ವಾಸ ಮೂಡಿಸಿದೆ.

  ಹನುಮಂತೇಗೌಡ, ಗೌರಿಬಿದನೂರು

ಬಿ.ಎಸ್.ರಮೇಶ್, ಬೆಂಗಳೂರು

  ಆತಿಫ್ ಬಿ, ಮೊಳಕಾಲ್ಮೂರು

ಉಪಯುಕ್ತ ಸಲಹೆ

ಕೃಷಿ ಪುರವಣಿಯ ನಾಲ್ಕನೆಯ ಪುಟದಲ್ಲಿ ಪ್ರತಿವಾರ ರೈತರಿಗೆ ನೀಡುವ ಸಲಹೆ (ಟಿಪ್ಸ್) ತುಂಬಾ ಉಪಯುಕ್ತವಾಗಿರುತ್ತವೆ. ಸಲಹೆ ಚಿಕ್ಕದಾಗಿ ಮೂಡಿಬಂದರೂ ಅದು ಬಹಳ ಪ್ರಯೋಜನಕಾರಿಯಾಗಿದೆ.

  ಸಂಗಮೇಶ ಕಾರ್ಯ, ಬಾಳೆಹೊನ್ನೂರು

  ಸಿ.ಜಿ.ಸಿದ್ದಯ್ಯ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry