ಶುಕ್ರವಾರ, ಜನವರಿ 24, 2020
28 °C

ದಲಿತರ ಓಣಿಗೆ ಸೌಲಭ್ಯ ಒದಗಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಡೆಗೊಂಡು ಪುನರ್ವಸತಿಗೊಂಡ ಗ್ರಾಮಗಳ ದಲಿತರ ಓಣಿಗಳು ಮೂಲ ಸೌಕರ್ಯದಿಂದ ವಂಚಿತಗೊಂಡಿದ್ದು, ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ಆಗ್ರಹಿಸಿದೆ.ಪುನರ್ವಸತಿ ಕೇಂದ್ರಗಳಾದ ಬೇನಾಳ, ಸಿದ್ಧನಾಥ, ಗಣಿ, ಚಿಮ್ಮಲಗಿ, ಗೋನಾಳ, ಮುಜರೇಕೊಪ್ಪ, ಬಳೂತಿ ಮೊದಲಾದ ಗ್ರಾಮಗಳ ದಲಿತರ ಓಣಿಯಲ್ಲಿ ರಸ್ತೆ ಬದಿಯಲ್ಲಿ ಚರಂಡಿಗಳಿಲ್ಲ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗುತ್ತದೆ. ಬಡ ಕೃಷಿ ಕಾರ್ಮಿಕರಿಗೆ ಹೆಚ್ಚುವರಿ ಯೋಜನೆ ಅಡಿಯಲ್ಲಿ ಸಾಕಷ್ಟು ಅನುದಾನ ಇದ್ದರೂ ಕೂಡಾ ಮೇಲಾಧಿಕಾರಿಗಳು ಈ ಕುರಿತು ಗಮನ ಹರಿಸುತ್ತಿಲ್ಲ ಎಂದು ದಲಿತ ಪ್ಯಾಂಥರ್ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಭಾಗದ ಜನಪ್ರತಿನಿಧಿಗಳು ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಯೋಜನೆಗಳ ಮಂಜೂರಿಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಬಡ ಕೂಲಿ ಕಾರ್ಮಿಕರಿಗೆ, ದಲಿತರಿಗೆ ಅನುಕೂಲವಾಗುವ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ವಿಫಲರಾಗಿದ್ದರೆ. ದಲಿತರ ಬೀದಿಗಳು ಮೂಲ ಸೌಕರ್ಯದಿಂದ ವಂಚಿತವಾಗಿವೆ ಎಂದು ಆರೋಪಿಸಿದ್ದಾರೆ.ದಲಿತ ಪ್ಯಾಂಥರ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಾದರ, ವಿಭಾಗೀಯ ಅಧ್ಯಕ್ಷ ಬಾಳೇಶ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗುಡಿಮನಿ, ರಮೇಶ ಆಲಮಟ್ಟಿ ಸೌಲಭ್ಯಕ್ಕೆ ಒತ್ತಾಯಿಸಿದ್ದಾರೆ.

ಎಸ್‌ಡಿಎಂಸಿ ರಚನೆಆಲಮಟ್ಟಿ: ಸಮೀಪದ ಬೇನಾಳ ಎನ್. ಎಚ್. ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ರಚನೆ ಮಾಡಲಾಗಿದೆ.

ಅಧ್ಯಕ್ಷರಾಗಿ ಗ್ಯಾನಪ್ಪಗೌಡ ಬಿರಾದಾರ, ಉಪಾಧ್ಯಕ್ಷರಾಗಿ ಶ್ರಿಶೈಲ ಕಟ್ಟಿಮನಿ, ಸದಸ್ಯರಾಗಿ ಶಾಂತಮ್ಮೋ ತೆಳಗಡಿ, ಹೊನ್ನವ್ವ ಯಾಳವಾರ, ವಿಠ್ಠಲ ದಳವಾಯಿ, ಚನ್ನಪ್ಪ ವಗ್ಗರ, ಬಾಬುಲಾಲ ಸಾಲಿಮನಿ, ಸಿದ್ದಪ್ಪ ಹಡಪದ, ಹುಲಿಗೆವ್ವ ತಳವಾರ ಆಯ್ಕೆಯಾಗಿದ್ದಾರೆ.ಸನ್ಮಾನ:ನೂತನ ಎಸ್‌ಡಿಎಂಸಿ ಸದಸ್ಯರ ಅಧಿಕಾರ ಪದಗ್ರಹಣ ಮತ್ತು ಸನ್ಮಾನ ಸಮಾರಂಭ ಜರುಗಿತು. ಗ್ರಾಮದ ಮುಖಂಡರಾದ ಬಸನಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಶ್ರಿಶೈಲ ಹೆಂಡಿ, ಚನ್ನಪ್ಪ ತೆಳಗಡಿ, ಬಸವರಾಜ ದಂಡಿನ, ಶಂಕರೆಪ್ಪ ಕೊಳ್ಳಿ, ನಿಂಗಪ್ಪ ವಡಗೇರಿ ಉಪಸ್ಥಿತರಿದ್ದರು. ಮಹೇಶ ಗಾಳಪ್ಪಗೋಳ ಸ್ವಾಗತಿಸಿದರು. ಎನ್.ಎಸ್. ಹೆಬ್ಬಾಳ ವಂದಿಸಿದರು.

ಫೆ. 12ರಂದು ನವೋದಯ ವಿದ್ಯಾಲಯ ಪರೀಕ್ಷೆಆಲಮಟ್ಟಿ: ಸ್ಥಳೀಯ ಜವಾಹರ ನವೋದಯ ವಸತಿ ವಿದ್ಯಾಲಯದ ಪ್ರಸಕ್ತ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶಕ್ಕಾಗಿ ನಡೆಯುವ ಲಿಖಿತ ಪ್ರವೇಶ ಪರೀಕ್ಷೆಯು ಫೆ. 12ರಂದು ನಡೆಯಲಿದೆ.

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಸಂಬಂಧಿಸಿದ ಪಾಲಕರು  ಪ್ರವೇಶ ಪತ್ರಗಳನ್ನು ಜಿಲ್ಲೆಯ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಜವಾಹರ ನವೋದಯ ವಿದ್ಯಾಲಯ, ಆಲಮಟ್ಟಿ (08426-281088) ಇವರನ್ನು ಸಂಪರ್ಕಿಸಲು ಕೋರಿದೆ.ರಸಪ್ರಶ್ನೆ ಕಾರ್ಯಕ್ರಮ

ಆಲಮಟ್ಟಿ: ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿದ್ದರೇ ಇಂತಹ ಪಠ್ಯಾಧಾರಿತ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿದ್ಧರಾದಂತೆ ಹಾಗೂ ಭಯ ದೂರವಾಗುತ್ತದೆ ಎಂದು ಉಪನ್ಯಾಸಕ ಎಂ.ಎಸ್. ಭಾವಿಕಟ್ಟಿ ಹೇಳಿದರು.ಮಣಗೂರ ಪುನರ್ವಸತಿ ಕೇಂದ್ರದ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್.ಎಫ್. ಜಾಲಿಹಾಳ ಅಧ್ಯಕ್ಷತೆ ವಹಿಸಿದ್ದರು. ರಸಪ್ರಶ್ನೆ ನಿರ್ಣಾಯಕಾರಿ ಎಸ್.ಎಸ್. ದೇವೂರ, ಎಸ್.ಬಿ

. ಪಾಟೀಲ, ಪಿ.ಆರ್. ದಾಸರ ಆಗಮಿಸಿದ್ದರು. ಜೆ.ಎನ್. ರೂಗಿ, ಸಮೀರ ಕುಡಚಿ ಉಪಸ್ಥಿತರಿದ್ದರು.

ಅಕ್ಷತಾ ಈಳಗೇರ ಸ್ವಾಗತಿಸಿದರು, ಜಯಶ್ರಿ ಚಿಕ್ಕಮಠ ವಂದಿಸಿದರು. ಅಶೋಕ ಗುಂಡಿನಮನಿ ನಿರೂಪಿಸಿದರು.

 

ಪ್ರತಿಕ್ರಿಯಿಸಿ (+)