ದಲಿತರ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಗುರುವಾರ , ಜೂಲೈ 18, 2019
28 °C

ದಲಿತರ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Published:
Updated:

ಬಾದಾಮಿ: ತಾಲ್ಲೂಕಿನ ಯರಗೊಪ್ಪ ಎಸ್.ಬಿ. ಗ್ರಾಮದಲ್ಲಿ ದಲಿತರಿಂದಲೇ ಸವರ್ಣೀಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಬ್ಬಾಳಿಕೆಯನ್ನು ಪ್ರತಿಭಟಿಸಿದ್ದಕ್ಕೆ ತಮ್ಮ ಮೇಲೆ ದಲಿತರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಸವರ್ಣೀಯರು ಆರೋಪಿಸಿ ಪೊಲೀಸರಿಗೆ ಮನವಿ ಮಾಡಿದರು.ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಸವರ್ಣೀಯರು ಪೊಲೀಸ್ ಠಾಣೆಯ ಎದುರಿಗೆ ಸಾಂಕೇತಿಕ ಧರಣಿ ನಡೆಸಿದರು. ದಲಿತರ ದೌರ್ಜನ್ಯದಿಂದಾಗಿ ಮನೆಯ ಮಕ್ಕಳು ಹಾಗೂ ಮಹಿಳೆಯರು ಮನೆಯಿಂದ ಹೊರಗೆ ಬರುವಂತಿಲ್ಲ. ಅನೇಕ ವರ್ಷಗಳಿಂದ ಅನುಚಿತವಾಗಿ ವರ್ತಿಸುತ್ತಾರೆ. ದೌರ್ಜನ್ಯ ಸಹಿಸಿಕೊಂಡು ಸೌಹಾರ್ದದಿಂದ ನಡೆದುಕೊಂಡರೂ ಸುಳ್ಳು ಆಪಾದನೆ ಮಾಡಿ ಪ್ರಾಣ ಭಯ ಹಾಕುತ್ತಿದ್ದಾರೆ ಎಂದು ಆಪಾದಿಸಿದರು.ದೌರ್ಜನ್ಯ ಪ್ರಕರಣದ ಆಪಾದನೆ ಮೇಲೆ 30 ಜನ ಸವರ್ಣೀಯರ ಮೇಲೆ ಕ್ರಮ ಕೈಕೊಳ್ಳಲು ದಲಿತರು ದೂರು ನೀಡಿದ್ದಾರೆ. ಅದಕ್ಕೆ ಪೊಲೀಸರು ಮುಂದಾದರೆ ಗ್ರಾಮಸ್ಥರೆಲ್ಲರೂ ಸಾಮೂಹಿಕ ಬಂಧನಕ್ಕೆ ಒಳಗಾಗಲು ಸಿದ್ಧರಾಗಿದ್ದಾರೆ ಎಂದು ನುಡಿದರು.ಗ್ರಾಮದ ಮುಖಂಡರಾದ ರಂಗಪ್ಪ ಜಾಲಿಕಟ್ಟಿ, ದ್ಯಾಮಣ್ಣ ಮರಿಯಣ್ಣವರ, ರಂಗಪ್ಪ ಹಳ್ಳಿ, ಈರಣ್ಣ ಹುನಗುಂಡಿ ಮಾತನಾಡಿದರು.ಸಿಪಿಐ ಆರ್.ಎಸ್. ಪಾಟೀಲ ಮನವಿ ಸ್ವೀಕರಿಸಿ, ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳಲಾಗುವುದು. ಗ್ರಾಮದಲ್ಲಿ ಶಾಂತಿ ಕಾನೂನಿನ ಸುವ್ಯಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಯರಗೊಪ್ಪ ಎಸ್.ಬಿ. ಗ್ರಾಮದಲ್ಲಿ ದಲಿತರ ಹಾಗೂ ಸವರ್ಣೀಯರ ವಿರುದ್ಧ ಪರಸ್ಪರ ದೌರ್ಜನ್ಯ ಆರೋಪದ ಪ್ರಕರಣದಿಂದಾಗಿ ವಾತಾವರಣ ಬಿಗುವಿನಿಂದ ಕೂಡಿದೆ. ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಶಾಂತಿ ಸಭೆ ನಡೆಸುತ್ತಿದ್ದಾರೆ.ದಲಿತರ ಪ್ರತಿಭಟನೆ


ಇಲ್ಲಿಗೆ ಸಮೀಪದ ಯರಗೊಪ್ಪ ಎಸ್.ಬಿ. ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿದ ಸವರ್ಣೀಯರನ್ನು ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆ ಕಾರ್ಯಕರ್ತರು ಇಲ್ಲಿಯ ಪೊಲೀಸ್ ಠಾಣೆ ಎದುರು ಶನಿವಾರ ಪ್ರತಿಭಟಿಸಿದರು.ದೌರ್ಜನ್ಯ ಘಟನೆ ನಾಲ್ಕು ದಿನ ಕಳೆದರೂ ಪೊಲೀಸರು ಯಾವೊಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಗ್ರಾಮದ ದಲಿತರಿಗೆ ಜೀವಭಯವಿದೆ. ಆತಂಕ ನಿವಾರಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.`ಗ್ರಾಮದ ಅಂಗಡಿಗಳಲ್ಲಿ ನಮಗೆ ನಿತ್ಯದ ದಿನಿಸು ಹಾಗೂ ಚಹಾದ ಅಂಗಡಿಗಳಲ್ಲಿ ಮೊದಲಿನಂತೆ ದೊರೆಯಬೇಕು~ ಎಂದು ಆಗ್ರಹಿಸಿದರು.`ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ತೊಂದರೆ ಆಗದಂತೆ ಕ್ರಮ ಕೈಕೊಂಡು ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗುತ್ತದೆ~ ಎಂದು ಡಿಎಸ್‌ಪಿ ಪಿ.ಎ. ಕೊರವರ ಭರವಸೆ ನೀಡಿದರು. ನಂತರ ಪ್ರತಿಭಟನೆ ವಾಪಸ್ ಪಡೆದರು.ದಲಿತ ಮುಖಂಡರಾದ ಕ್ರಾಂತಿಪುರುಷ ಜ್ಯೋತಿ, ಆನಂದ ದೊಡಮನಿ, ಸಾಬಣ್ಣ ದೊಡಮನಿ, ಯಲ್ಲಪ್ಪ ಪೂಜಾರ, ನಾಗಪ್ಪ ದೊಡಮನಿ, ತಳವಾರ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry