ಗುರುವಾರ , ಮೇ 13, 2021
18 °C

ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಿ: ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯನ್ನು ದಲಿತ ದೌರ್ಜನ್ಯ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ದಲಿತಪರ ಸಂಘಟನೆಗಳ ಒಕ್ಕೂಟದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.ಜಿಲ್ಲೆಯಲ್ಲಿ ಸಾಮಾಜಿಕ ಹಾಗೂ ಆಡಳಿತಾತ್ಮಕ ದೌರ್ಜನ್ಯಗಳು ನಿರಂತರ ವಾಗಿ ನಡೆದಿದ್ದು, ಅಸ್ಪ್ರಶ್ಯತೆ ಇಂದಿಗೂ ಜೀವಂತವಾಗಿದೆ. ಅನೇಕ ದೇವಾಲಯ ಗಳಲ್ಲಿ ದಲಿತರನ್ನು ಪ್ರತ್ಯೇಕಿಸಿ ತಾರತಮ್ಯ ಎಸಗುವ ಘಟನೆಗಳು ಜರುಗಿವೆ.

 

ಗ್ರಾಮೀಣ ಭಾಗದಲ್ಲಿ ಅನೇಕ ದಲಿತರು ಅತಿಕ್ರಮಣ ಪ್ರದೇಶದಲ್ಲಿ ನಿವೇಶನ ಕಟ್ಟಿಕೊಂಡು ಜೀವನ ನಡೆಸುತ್ತಿದ್ದು ಕಾಯ್ದಿಟ್ಟ ಅರಣ್ಯ ಭೂಮಿಯ ನೆಪ ಹೇಳಿ ನಿವೇಶನ ಸಕ್ರಮಗೊಳ್ಳುತ್ತಿಲ್ಲ. ಮೇಲ್ವರ್ಗದವರು ಸೊಪ್ಪಿನ ಬೆಟ್ಟದ ಹೆಸರಿನಲ್ಲಿ ಹಲವು ಎಕರೆಗಳಷ್ಟು ಅರಣ್ಯ ಪ್ರದೇಶವನ್ನು ತಮ್ಮ ಸುಪರ್ದಿಗೆ ಇಟ್ಟುಕೊಂಡಿದ್ದು ದಲಿತರಿಗೆ ಉರುವಲು ಕಟ್ಟಿಗೆ ತರಲು ಅವಕಾಶ ನೀಡುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.ಸುಮಾರು 14 ವಿವಿಧ ಹಿಂದುಳಿದ ವರ್ಗದವರು ಪರಿಶಿಷ್ಟ ಜಾತಿಯವ ರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ದಲಿತರ ರಾಜಕೀಯ, ಆರ್ಥಿಕ ಸವಲತ್ತುಗಳನ್ನು  ಕೊಳ್ಳೆಹೊಡೆಯು ತ್ತಿದ್ದಾರೆ. ಜಿಲ್ಲೆಯ ಅನೇಕ ದೇವಾಲಯ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿ ಸಿದ್ದರೂ ಇನ್ನೂ ಕ್ರಮವಾಗಿಲ್ಲ.ಜಿಲ್ಲೆಯಲ್ಲಿ ಒಂದೇ ಒಂದು ಕ್ಷೇತ್ರವನ್ನು ದಲಿತರಿಗೆ ಮೀಸಲಿಡದೇ ದಲಿತರ ರಾಜಕೀಯ ಪ್ರಾತಿನಿಧ್ಯ ವಂಚಿಸಿದಂತಾ ಗಿದೆ. ಕಾರವಾರದ ಶಿರವಾಡ, ಬಂಗಾ ರಪ್ಪನಗರ, ಹಬ್ಬುವಾಡ, ಪಂಚರೇಶ ವಾಡ, ರಾಮನಗರ, ಸದಾ ಶಿವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಸಿಸುತ್ತಿರುವ ದಲಿತರನ್ನು ಒಕ್ಕಲೆಬ್ಬಿ ಸುವ ವ್ಯವಸ್ಥಿತ ಹುನ್ನಾರ ನಡೆದಿದ್ದು ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಮುಂಡಗೋಡ ತಾಲ್ಲೂಕಿನಲ್ಲಿ ಚಿದಾ ನಂದ ಹರಿಜನ ನೇತೃತ್ವದಲ್ಲಿ ಅಕ್ರಮ- ಸಕ್ರಮದ ಹೋರಾಟಗಳು ನಡೆದರೂ ಗಾಂಧಿನಗರ ಸೇರಿದಂತೆ ಹಲವೆಡೆ ಕೆ.ಜಿ.ಪಿ ಆಗಿಲ್ಲ ಎಂದು ದೂರಿದರು.ದಲಿತರ ಪ್ರಾಣ, ಆರೋಗ್ಯ, ಉದ್ಯೋಗ ಸೇರಿದಂತೆ ರಾಜಕೀಯ, ಶೈಕ್ಷಣಿಕ, ಆರ್ಥಿಕ ಪ್ರಗತಿ ಕಾಣಲು ಪ್ರಾಯೋಗಿಕವಾಗಿ ದಲಿತ ದೌರ್ಜನ್ಯ ಪೀಡಿತ ಜಿಲ್ಲೆ ಎಂದು ಘೋಷಿಸಿ ವಿಶೇಷ ಅನು ದಾನ ನೀಡಬೇಕು ಎಂದು ಒತ್ತಾಯಿ ಸಲಾಗಿದೆ.ರಾಜ್ಯ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜೇಶ ದೇಶ ಭಾಗ, ಚಂದ್ರಕಾಂತ ಕಾದ್ರೊಳ್ಳಿ, ಅಶೋಕ ಚಲವಾದಿ, ಚಿದಾನಂದ ಹರಿ ಜನ, ಎಲಿಷಾ ಎಲಕಪಾಟಿ, ದ್ಯಾಮಣ್ಣ ಭೋವಿ ವಡ್ಡರ, ಹನಮಂತ ಕೊರವರ, ಗಣೇಶ ಪಾಟಣಕರ, ಘನಶ್ಯಾಮ ರೇವಣಕರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.