ಶನಿವಾರ, ಮೇ 8, 2021
27 °C

ದಲಿತರ ಮೇಲೆ ದೌರ್ಜನ್ಯ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಜಾರಿಯಲ್ಲಿದೆ. ಅದನ್ನು ತಪ್ಪಿಸಿ ದಲಿತರು ಕೂಡ ಮುಖ್ಯವಾಹಿನಿಗಳಲ್ಲಿ ಕಾಣಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಪ್ರಬುದ್ಧ ಭಾರತ ನಿರ್ಮಾಣ ವೇದಿಕೆ ಸದಸ್ಯರು ಪಟ್ಟಣದಲ್ಲಿ ಶುಕ್ರವಾರ ಮೆರವಣಿಗೆ ನಡೆಸಿದರು.ತಾಲ್ಲೂಕಿನ ಕೆಲ ಳ್ಳಿಗಳಲ್ಲಿ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಸಾಮಾಜಿಕ ಬಹಿಷ್ಕಾರಗಳಂತಹ ಅಮಾನವೀಯ ಕೃತ್ಯಗಳು ಜಾರಿಯಲ್ಲಿವೆ. ಅಂಕಹಳ್ಳಿ, ಭೀಮನಬೀಡು, ಮಾಡ್ರಹಳ್ಳಿ, ಕೆಬ್ಬೇಪುರ ಮುಂತಾದ ಹಲವಾರು ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆದಿವೆ. ಎರಡು ತಿಂಗಳ ಹಿಂದೆ ಕೆಬ್ಬೇಪುರ ಗ್ರಾಮದಲ್ಲಿ ದೇವರ ಉತ್ಸವ ನಡೆಯುವ ಸಂದರ್ಭದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದ್ದು, ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಇದರಿಂದ ಈ ಗ್ರಾಮದ ದಲಿತರಿಗೆ ಕೂಲಿಯೂ ಇಲ್ಲ. ಜೀವನ ನಡೆಸುವುದು ದುಸ್ತರವಾಗಿದ್ದು, ಭಯದ ವಾತಾವರಣ ನಿರ್ಮಾಣ ವಾಗಿದೆ ಎಂದು ದೂರಿದರು.ಭೀಮನಬೀಡು ಗ್ರಾಮದಲ್ಲಿ ಜನವರಿ 26ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡದಿರುವ ಬಗ್ಗೆ ಆ ಗ್ರಾಮದ ದಲಿತರು ಪ್ರಶ್ನಿಸಿದರು. ಇದರಿಂದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಅಲ್ಲದೇ ಗುಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಸ್.ಸಿ/ಎಸ್.ಟಿ ದೌರ್ಜನ್ಯ ಪ್ರಕರದಣದಡಿ ದೂರು ದಾಖಲಿಸಕೊಂಡಿಲ್ಲ. ದೂರು ನೀಡಲು ಬಂದವರಿಗೆ ಭಯ ಹುಟ್ಟಿಸಿದ್ದಾರೆ. ಈ ಮೂಲಕ ದೌರ್ಜನ್ಯ ಕಾಯಿದೆಯನ್ನು ಪೊಲೀಸರು ಗಾಳಿಗೆ ತೂರಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದರು.ನಮ್ಮ ಬೇಡಿಕೆಗಳು ಈಡೇರದಿದ್ದರೆ ಮುಂದೆ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ವೇದಿಕೆಯ ಸಂಚಾಲಕರಾದ ಸಂಪತ್, ಹನುಮಂತರಾಜು, ಕಾಂತರಾಜು ಅಸುರ, ಕಾಳಿಂಗಸ್ವಾಮಿ, ಸ್ವಾಮಿ ಕಣ್ಣೇಗಾಲ ಮತ್ತು ದೇವರಾಜು ಬಹುಜನ್ ಇದ್ದರು.

ಪ್ರಮುಖ ಬೇಡಿಕೆಗಳು

ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಿಗೆ ಈ ಕೂಡಲೇ ಸ್ಮಶಾನ ಭೂಮಿ ಒದಗಿಸಬೇಕು.ದಲಿತರ ಮೇಲೆ ದೌರ್ಜನ್ಯ ನಡೆದಿರುವ ಗ್ರಾಮಗಳಿಗೆ      ಎಸ್.ಸಿ/ಎಸ್.ಟಿ ದೌರ್ಜನ್ಯ ಪ್ರಕರಣ  ಕಾಯಿದೆ ಅಡಿಯಲ್ಲಿ ಸೌಲಭ್ಯಗಳನ್ನು ಈ ಕೂಡಲೇ ಒದಗಿಸಬೇಕು.ದೌರ್ಜನ್ಯಕ್ಕೆ ಒಳಗಾದ ಕೆಬ್ಬೇಪುರ ಮತ್ತು ಭೀಮನಬೀಡು ಗ್ರಾಮಗಳಿಗೆ ಭೇಟಿ ನೀಡದ ಅಧಿಕಾರಿಗಳನ್ನು ಅಮಾನತು ಮಾಡಬೇಕು.ದಲಿತರಿಗೆ ರಕ್ಷಣೆ ನೀಡಬೇಕು ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಬೇಕು.ದೌರ್ಜನ್ಯ ನಡೆದಿರುವ ಗ್ರಾಮಗಳ ಭೂರಹಿತ ದಲಿತರಿಗೆ ಭೂಮಿ ನೀಡಬೇಕು ಮತ್ತು ಈಗಾಗಲ್ಲೇ ಭೂಮಿ ಹೊಂದಿರುವ ದಲಿತರ ಜಮೀನುಗಳಿಗೆ ಕೊಳವೆ ಬಾವಿಯನ್ನು ಮಂಜೂರು ಮಾಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.