ದಲಿತರ ಮೇಲೆ ಲಾಠಿ ಪ್ರಹಾರ: ರಾಮಣ್ಣ ಖಂಡನೆ

7

ದಲಿತರ ಮೇಲೆ ಲಾಠಿ ಪ್ರಹಾರ: ರಾಮಣ್ಣ ಖಂಡನೆ

Published:
Updated:

ಕಂಪ್ಲಿ: ಬೆಳಗಾವಿ ವಿಕಾಸಸೌಧ ಬಳಿ ಒಳ ಮೀಸಲಾತಿಗಾಗಿ ದಲಿತಪರ ಸಂಘಟನೆಗಳು ನ್ಯಾ.ಸದಾಶಿವ ಆಯೋಗ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಶಾಂತಿಯುತ ಹೋರಾಟ ನಡೆಸುತ್ತಿದ್ದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಯನ್ನು ಮಾದಾರ ಚನ್ನಯ್ಯ ಸಂಘದ ಕ್ಷೇತ್ರ ಅಧ್ಯಕ್ಷ ಜಿ. ರಾಮಣ್ಣ ಖಂಡಿಸಿದ್ದಾರೆ.ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ವಿನಾ ಕಾರಣ ಲಾಠಿ ಪ್ರಹಾರ ನಡೆಸಿ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ದಲಿತರ ದಮನ ನೀತಿಗೆ ಸರ್ಕಾರ  ಮುಂದಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ  ತಿಳಿಸಿದರು.ಪುರಸಭೆ ಸದಸ್ಯ ಎಂ.ಸಿ.ಮಾಯಪ್ಪ, ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಸಿ. ದಾನಪ್ಪ, ಭಾವೈಕ್ಯ ಸಿ. ವೆಂಕಟೇಶ್,  ಗುಂಡಪ್ಪ,  ಚನ್ನಬಸವ,  ರೇಣುಕಪ್ಪ,  ರಾಮಯ್ಯ, ನಾಗೇಶ್ವರರಾವ್, ಹುಲುಗಪ್ಪ, ರಾಘು, ಶಿವಣ್ಣ, ನಾಗೇಂದ್ರ, ದೇವೇಂದ್ರ, ಸಣ್ಣಕ್ಕಿ ವಿರೂಪಾಕ್ಷಿ,  ಯಂಕಪ್ಪ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry