ದಲಿತ ಸಾಹಿತ್ಯ ಪರಿಷತ್: ಪುಸ್ತಕ ಪ್ರಶಸ್ತಿ ಪ್ರಕಟ

ಶುಕ್ರವಾರ, ಜೂಲೈ 19, 2019
23 °C

ದಲಿತ ಸಾಹಿತ್ಯ ಪರಿಷತ್: ಪುಸ್ತಕ ಪ್ರಶಸ್ತಿ ಪ್ರಕಟ

Published:
Updated:

ಮೈಸೂರು: ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಅವರ ವೈಚಾರಿಕ ಕೃತಿ `ನೀಲ~ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ರಚನೆಯಾಗಿರುವ 13 ಅತ್ಯುತ್ತಮ ಕೃತಿಗಳಿಗೆ ರಾಜ್ಯ ದಲಿತ ಸಾಹಿತ್ಯ ಪರಿಷತ್ `ಪುಸ್ತಕ ಪ್ರಶಸ್ತಿ~ ನೀಡಿ ಗೌರವಿಸಿದೆ.

ಕೊಪ್ಪಳದಲ್ಲಿ ಜೂನ್ 18ರಂದು ನಡೆಯಲಿರುವ ಮೂರನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅತ್ಯುತ್ತಮ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು. ಇದರಲ್ಲಿ 12 ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ.

ಇದರಲ್ಲಿ ಮಹದೇವ ಶಂಕರನಪುರ ಅವರ `ಉರಿಗದ್ದಿಗೆ ಮೇಲೆ ಬೋಳು ಜಂಗಮನ ತಂಬೂರಿ ಪದ~ ( ಕಾವ್ಯ), ಬಿ.ಟಿ. ಮುನಿರಾಜಯ್ಯ ಅವರ `ಕಾಟಮಲ್ಲ~ (ನಾಟಕ), ಉಮೇಶ್ ತಿಮ್ಮಾಪುರ ಅವರ `ನಡುಹಗಲ ಸಂಜೆ~ (ಕಥೆ), ಡಾ. ನಲ್ಲಿಕಟ್ಟೆ ಸಿದ್ದೇಶರ `ವೃಕ್ಷಮಾತೆ ಸಾಲುಮರದ ತಿಮ್ಮಕ್ಕ~ (ಜೀವನಚರಿತ್ರೆ), ಡಾ. ಹನುಮಂತರಾವ್ ದೊಡ್ಡಮನಿ ಅವರ `ಪಂಚಮ~ (ಆತ್ಮಕತೆ), ಡಾ. ಶಿವಾನಂದ ಕೆಳಗಿನಮನಿ ಅವರ `ಮಾದಿಗ ಲಿಂಗಾಯಿತರು-ಸಾಂಸ್ಕೃತಿಕ ಅಧ್ಯಯನ~ (ಸಂಶೋಧನೆ), ಡಾ. ಇಂದಿರಮ್ಮ ಎಸ್. ಅವರ `ಮಾತುಪ್ರತಿಮಾತು~ (ವಿಮರ್ಶೆ), ಡಾ.ಎಸ್.ನರೇಂದ್ರಕುಮಾರ್‌ರ `ಬೋಧಿ ನೆಲದ ಮಾತು~ (ಸಂಕೀರ್ಣ), ಡಾ. ಸೂರ್ಯಕಾಂತ ಸುಜ್ಯಾತ್‌ರ `ಗುಲಾಮಗಿರಿ~ (ಅನುವಾದ) ಹಾಗೂ ಡಾ. ಸಣ್ಣವೀರಪ್ಪ ದೊಡ್ಡಮನಿ ಅವರ `ಕಂಗಳ ಮುಂದಣ ಕತ್ತಲೆ~ (ಲೇಖಕರ ಮೊದಲ ಕೃತಿ) ಆಯ್ಕೆಯಾಗಿದೆ. ಈ ಪ್ರಶಸ್ತಿಗಳನ್ನು  ಕೊಪ್ಪಳ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್‌ನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನಲಗೆರೆ ಹೊಂಬಯ್ಯ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry