ಸೋಮವಾರ, ಜೂನ್ 21, 2021
21 °C

ದಲಿತ ಸಾಹಿತ್ಯ ಮನೋಧರ್ಮದ ಪ್ರತೀಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ದಲಿತ-ಬಂಡಾಯ ಸಾಹಿತ್ಯ ಮನೋಧರ್ಮವನ್ನು ಸೂಚಿಸುತ್ತದೆ. ರಾಜೀ ಮನೋಭಾವ ಒಪ್ಪದ ಈ ಮನೋಧರ್ಮ ನಿರಂತರವಾಗಿ ಬದಲಾಗುತ್ತಿರುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಂ. ಪುಟ್ಟಯ್ಯ ಹೇಳಿದರು.ಯುಜಿಸಿ ಪ್ರಾಯೋಜಕತ್ವದಲ್ಲಿ ಇಲ್ಲಿನ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ `ದಲಿತ-ಬಂಡಾಯ ಸಾಹಿತ್ಯದ ಸ್ವರೂಪ~ ಎಂಬ ವಿಷಯ ಕುರಿತು ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.ಬಂಡಾಯ ಸಾಹಿತಿಗಳು ಮೂರು ದಶಕಗಳ ಹಿಂದೆ ದೇವರನ್ನು ನಂಬಬೇಡಿ ಎಂದಾಗ ಸಾಮಾಜಿಕ ವಲಯದಲ್ಲಿ ಅದು ಭಾರಿ ಪರಿಣಾಮ ಬೀರಿತ್ತು. ಅದೇ ಮಾತನ್ನು ಈಗ ಹೇಳಿದರೆ ಯಾರೂ ಕಿವಿಗೊಡುವುದಿಲ್ಲ. ಆಗಿನಷ್ಟು ಪ್ರಾಮುಖ್ಯ-ಸಂಚಲನವೂ ಕಾಣುವುದಿಲ್ಲ. ಆದರೆ, ಪೋಸ್ಕೋ ವಿರುದ್ಧ ಹೋರಾಡಬೇಕು ಎಂದರೆ ಅದು ಬಂಡಾಯ ಮನೋಧರ್ಮವನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಿದರು.ಆದರೆ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರ ಇಂತಹ ಮನೋಧರ್ಮ, ಶಕ್ತಿಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ವಿಚಾರ, ಆಸಕ್ತಿ, ದೃಷ್ಟಿಕೋನಗಳನ್ನು ಭ್ರಷ್ಟಗೊಳಿಸಿರುವುದೇ ಇದಕ್ಕೆ ಕಾರಣ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಸ್.ಎಲ್. ಮಾಲಿಪಾಟೀಲ ಮಾತನಾಡಿದರು. ಉಪನ್ಯಾಸಕ ಡಾ.ಬಸವರಾಜ ಪೂಜಾರ,  ಗವಿಸಿದ್ಧೇಶ್ವರ ವಿದ್ಯಾ ವರ್ಧಕ ಟ್ರಸ್ಟ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ವೇದಿಕೆಯಲ್ಲಿದ್ದರು. ಡಾ.ಪಿ.ವಿ.ಪೂಜಾರ ಸ್ವಾಗತಿಸಿದರು. ಪ್ರೊ.ಶರಣಬಸಪ್ಪ ನಿರೂಪಿಸಿದರು, ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ವಂದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.