ದಲೈಲಾಮ ಆರೋಪಕ್ಕೆ ನಕಾರ

5

ದಲೈಲಾಮ ಆರೋಪಕ್ಕೆ ನಕಾರ

Published:
Updated:

ಬೀಜಿಂಗ್ (ಪಿಟಿಐ): `ಮೋಸದಿಂದ ವಿಷವುಣಿಸಿ ತಮ್ಮನ್ನು ಹತ್ಯೆ ಮಾಡಲು ಚೀನಾ ಮಹಿಳಾ ಏಜೆಂಟರೊಬ್ಬರಿಗೆ ತರಬೇತಿ ನೀಡಲಾಗುತ್ತಿದೆ~ ಎಂಬ ಬೌದ್ಧ ಧರ್ಮ ಗುರು ದಲೈಲಾಮ ಮಾಡಿರುವ ಆರೋಪವನ್ನು ಚೀನಾ ತಳ್ಳಿ ಹಾಕಿದೆ.`ಸರ್ಕಾರಕ್ಕೆ ದಲೈಲಾಮ ಅವರನ್ನು ಹತ್ಯೆ ಮಾಡಬೇಕೆಂಬ ಉದ್ದೇಶವಿದ್ದಿದ್ದರೆ, ಇಷ್ಟು ವಯಸ್ಸಾಗುವವರೆಗೆ ಕಾಯಬೇಕಾಗಿರಲಿಲ್ಲ. ಇದೊಂದು ಮೂರ್ಖತನದ ಆರೋಪ~ ಎಂದು ಚೀನಾ ನೀಡಿದ ಪ್ರತಿಕ್ರಿಯೆಯನ್ನು ಇಲ್ಲಿನ `ಗ್ಲೋಬಲ್ ಟೈಮ್‌ಡೈಲಿ~ ತನ್ನ ಸಂಪಾದಕೀಯದಲ್ಲಿ ಬರೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry