ಸೋಮವಾರ, ಏಪ್ರಿಲ್ 19, 2021
31 °C

ದಶಕಗಳ ಹೋರಾಟಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ಶೈಕ್ಷ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಒದಗಿಸುವ ನಿಟ್ಟಿನಲ್ಲಿ ನಡೆದ 2 ದಶಕಗಳ ಹೋರಾಟಕ್ಕೆ ಜಯ ಸಂದಿದೆ ಎಂದು ನೂತನ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ ಕೋಡ್ಲಾ ಸಂತಸ ವ್ಯಕ್ತಪಡಿಸಿದರು.ನಗರದಲ್ಲಿ ಶನಿವಾರ ಆಯೋಜಿಸಿದ್ದ 371 ಕಲಂ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಮುಕ್ರಂಖಾನ 371 ಕಲಂ ತಿದ್ದುಪಡಿಗೆ ರಾಜಕೀಯ ವ್ಯವಹಾರಗಳ ಸಂಪುಟದ ಉಪ-ಸಮಿತಿ ಸಭೆ ಒಪ್ಪಿಗೆ ಸೂಚಿಸಿರುವುದು ಹೋರಾಟಗಾರರಿಗೆ ಸಂದ ಜಯವೇ ಹೊರತು ಯಾವುದೇ ಪಕ್ಷಕ್ಕೆ ಸೀಮಿತವಲ್ಲ ಎಂದರು. ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜೃಂಭಣೆಯ ವಿಜಯೋತ್ಸವವನ್ನು ಆಚರಿಸಿದರು.ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಆರ್.ಎಸ್. ಪಾಟೀಲ, ಶಿವಕುಮಾರ ಪಾಟೀಲ ತೆಲ್ಕೂರ, ಸತೀಶ ಪಾಟೀಲ ರಂಜೋಳ, ಪ್ರಗತಿ ಪರ ರೈತ ಅನಂತರೆಡ್ಡಿಪಾಟೀಲ ಹಾಸನಪಲ್ಲಿ ಮಾತನಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಮಹೇಶ ಪಾಟೀಲ ತರ‌್ನಳ್ಳಿ, ವಿಜಯಕುಮಾರ ರೆಡ್ಡಿ ಮಳಖೇಡ, ವೆಂಕಟೇಶ ಪಾಟೀಲ, ವಿಜಯಕುಮಾರ ಆಡಕಿ, ಜೈ ಕರವೇ ತಾಲೂಕಾಧ್ಯಕ್ಷ ಶಿವಕುಮಾರ ನೂಲಾ, ಮಂಜುನಾಥ ಮದ್ದೂರ, ರಾಘವೇಂದ್ರ ಅಗನೂರ, ವೀರಣ್ಣಗೌಡ ರೆಮ್ಮಣ್ಣಿ, ಸೈಯದ್ ಮಣಿಯಾರ್, ಅಬ್ದುಲ್ ಹಮಿದ್, ಬಸವರಾಜ ಪಂಚಾಳ, ಮೌಲನಸಾಬ, ಕಾಶಿನಾಥ ಎನ್. ತೆಲ್ಕೂರ, ಚಂದ್ರರೆಡ್ಡಿ ನಿರಟಿ, ಶರಣಪ್ಪಾ ಮದಿರೆ, ಸಾಯಬಣ್ಣ ಭೂತಪೂರ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.