ಭಾನುವಾರ, ಜನವರಿ 26, 2020
28 °C

ದಶಕದ ಬಳಿಕ ಲೋಕಾಯುಕ್ತ ಕಂಡ ಗುಜರಾತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿನಗರ (ಪಿಟಿಐ): ಗುಜರಾತ್ ಹೈಕೋರ್ಟ್‌ನ ನಿವೃತ್ತ‌ ನ್ಯಾಯಮೂರ್ತಿ ಡಿ ಪಿ ಬುಚ್‌ ಅವರು ಗುಜರಾತ್‌ನ ನಾಲ್ಕನೇ ಲೋಕಾಯುಕ್ತರಾಗಿ ಬುಧವಾರ ಪ್ರಮಾಣ ಸ್ವೀಕರಿಸಿದ್ದಾರೆ. ಈ ಮೂಲಕ ಕಳೆದೊಂದು ದಶಕದಿಂದ ಖಾಲಿ ಇದ್ದ ಲೋಕಾಯುಕ್ತ ಸ್ಥಾನ ಭರ್ತಿಯಾದಂತಾಗಿದೆ.

ಇಲ್ಲಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಬುಚ್ ಅವರಿಗೆ ರಾಜ್ಯಪಾಲ ಕಮಲಾ ಬೇನಿವಾಲ್ ಅಧಿಕಾರ ಗೌಪ್ಯತೆ ಬೋಧಿಸಿದರು. ಈ ವೇಳೆ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ವಿಧಾನಸಭಾಧ್ಯಕ್ಷ ವಜು ವಲಾ ಉಪಸ್ಥಿತರಿದ್ದರು.

2003ರ ಡಿಸೆಂಬರ್‌ನಲ್ಲಿ ನ್ಯಾಯಮೂರ್ತಿ ಆರ್ ಎಂ ಸೋನಿ ಅವರಿಂದ ತೆರವಾಗಿದ್ದ ಲೋಕಾಯುಕ್ತ ಸ್ಥಾನ, ಈವರೆಗೂ ಖಾಲಿಯೇ ಉಳಿದಿತ್ತು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನ್ಯಾಯಮೂರ್ತಿ ಬುಚ್, ‘ನಿರ್ದಿಷ್ಟ ನಿಯಮಗಳಡಿ ದೂರುಗಳು ದಾಖಲಾದರೇ ಕಾನೂನಿನ (ಲೋಕಾಯುಕ್ತ ಕಾಯ್ದೆ) ಅನ್ವಯ ಅವುಗಳನ್ನು ಪರಿಹರಿಸಲಾಗುವುದು. ಒಂದು ವೇಳೆ ದೂರು ಕಾಯ್ದೆಯ ವ್ಯಾಪ್ತಿ ಮೀರಿದ್ದಾಗಿದ್ದರೇ, ಲೋಕಾಯುಕ್ತರು ಏನು ಮಾಡಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)