ಭಾನುವಾರ, ಜುಲೈ 25, 2021
27 °C
ಅತಿಥಿ ಉಪನ್ಯಾಸಕರಿಂದಲೇ ನಡೆಯುವ ಪ್ರಥಮ ದರ್ಜೆ ಕಾಲೇಜು

ದಶಕ ಕಳೆದರೂ ಉಪನ್ಯಾಸಕರಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಶಕ ಕಳೆದರೂ ಉಪನ್ಯಾಸಕರಿಲ್ಲ!

ಚನ್ನಗಿರಿ: ಪಟ್ಟಣದಲ್ಲಿರುವ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸದಾಗಿ ಉಪನ್ಯಾಸಕರನ್ನು ವಿಶ್ವವಿದ್ಯಾಲಯ ನೇಮಕಾತಿ ಮಾಡದೇ ಇರುವುದರಿಂದ ಅತಿಥಿ ಉಪನ್ಯಾಸಕರಿಂದಲೇ ಕಾಲೇಜು ನಡೆಯುತ್ತಿದೆ.ಹತ್ತು ವರ್ಷಗಳಿಂದ ಈ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರ ನೇಮಕಾತಿ ಮಾಡಿಲ್ಲ. ಈ ಕಾರಣವಾಗಿ ಪ್ರತಿ ವರ್ಷ 75 ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಂಡು ಪಾಠ ಪ್ರವಚನಗಳನ್ನು ಮುಂದುವರಿಸಿ ಕೊಂಡು ಬರಲಾಗುತ್ತಿದೆ. ಈ ಅತಿಥಿ ಉಪನ್ಯಾಸಕರು ಇಲ್ಲದೇ ಇದ್ದರೆ ವಿದ್ಯಾರ್ಥಿಗಳ ಸ್ಥಿತಿ ಅಧೋಗತಿಗೆ ಹೋಗುತ್ತಿತ್ತು.ನಾಲ್ಕು ವರ್ಷಗಳ ಹಿಂದೆ ಈ ಕಾಲೇಜು ಕುವೆಂಪು ವಿವಿಗೆ ಸೇರಿತ್ತು. ಈಗ ದಾವಣಗೆರೆ ವಿವಿ ವ್ಯಾಪ್ತಿಗೆ ಸೇರಿದೆ. ಆದರೂ ಹೊಸದಾಗಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ವಿವಿ ಮಾಡಿಲ್ಲ. ಪ್ರಸ್ತುತ ಈ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಗಣಕ ವಿಜ್ಞಾನ, ಎಂ.ಎ, ಎಂ.ಕಾಂ ತರಗತಿಗಳು ನಡೆಯುತ್ತಿವೆ. ಒಟ್ಟಾರೆ 2,150 ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಕನ್ನಡ 7, ಇಂಗ್ಲಿಷ್ 5, ಉರ್ದು 2, ಇತಿಹಾಸ 5, ಅರ್ಥಶಾಸ್ತ್ರ 4, ರಾಜ್ಯಶಾಸ್ತ್ರ 4, ಸಮಾಜಶಾಸ್ತ್ರ8, ವಾಣಿಜ್ಯಶಾಸ್ತ್ರ 21, ಭೌತಶಾಸ್ತ್ರ 7, ರಸಾಯನ ಶಾಸ್ತ್ರ 6, ಗಣಕ ವಿಜ್ಞಾನ 2, ಭಾರತೀಯ ಸಂವಿಧಾನ 2 ಹಾಗೂ ಪರಿಸರ ಅಧ್ಯಯನ ವಿಷಯದ 1 ಉಪನ್ಯಾಸಕ ಹುದ್ದೆಗಳು ಹತ್ತು ವರ್ಷಗಳಿಂದ ಖಾಲಿ ಇವೆ.ಈ ಎಲ್ಲಾ ಹುದ್ದೆಗಳ ಬೋಧನೆಯನ್ನು ಅತಿಥಿ ಉಪನ್ಯಾಸಕರು ಯಶಸ್ವಿಯಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಈ ಅತಿಥಿ ಉಪನ್ಯಾಸಕರಿಗೆ ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ವೇತನ ನೀಡಲಾಗುತ್ತಿದೆ. ಆದ್ದರಿಂದ ಶೀಘ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ  ಮಾಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.