ಬುಧವಾರ, ಮೇ 18, 2022
23 °C

ದಶಮಂಟಪಗಳ ಶೋಭಾಯಾತ್ರೆಗೆ ಸಂಭ್ರಮದ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆಗೆ  ಗುರುವಾರ ರಾತ್ರಿ ಸಂಭ್ರಮದ ಚಾಲನೆ ದೊರೆಯಿತು.ಸ್ಥಳೀಯರ ಜೊತೆ ವಿವಿಧ ನಗರಗಳಿಂದ ಆಗಮಿಸಿದ ಸುಮಾರು 2 ಲಕ್ಷ ಜನರು ಶೋಭಾಯಾತ್ರೆಗೆ ಸಾಕ್ಷಿ ಯಾದರು. ಒಂದಕ್ಕಿಂತ ಒಂದು ವಿಭಿನ್ನವಾಗಿ ರೂಪು ಗೊಂಡ ದಶಮಂಟಪಗಳು ನೋಡುಗರನ್ನು ಸೆಳೆದವು.ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಕಾಲ ದಲ್ಲಿ ಸುಮಾರು 150 ವರ್ಷಗಳಿಂದಲೂ ಆಚರಿಸಿ ಕೊಂಡು ಬಂದಂತೆ ದಶಮಂಟಪಗಳ ನೇತೃತ್ವವನ್ನು ಪೇಟೆ ಶ್ರೀ ರಾಮ ಮಂದಿರದ ಮಂಟಪವು ಈ ಬಾರಿಯೂ ವಹಿಸಿಕೊಂಡಿತು.ವರಾಹಾವತಾರಿ ಮಹಾ ವಿಷ್ಣುವಿನಿಂದ ಭೂದೇವಿ ಯ ರಕ್ಷಣೆ ಮಾಡುವ ಕಲಾಕೃತಿಯನ್ನು ಹೊತ್ತ ಪೇಟೆ ಶ್ರೀ ರಾಮ ಮಂದಿರದ ಮಂಟಪ ಅತ್ಯಾಕರ್ಷ ವಾಗಿತ್ತು.ದೇವಾಲಯದಿಂದ ಹೊರಟ ಈ ಮಂಟಪವು ಪದ್ಧತಿಯಂತೆ ಕುಂದುರುಮೊಟ್ಟೆ ಶ್ರೀ ಚೌಟಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ನಂತರ ಕುಂದುರುಮೊಟ್ಟೆ ಶ್ರೀ ಚೌಟಿ ದೇವಾಲಯದ ಭಂಡಾಸುರ ವಧೆಯ ಕಲಾಕೃತಿಯನ್ನು ಹೊಂದಿದ ಮಂಟಪವು ಹಿಂಬಾಲಿಸಿತು.ಗೌಳಿ ಬೀದಿಯ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ಮಹಾವಿಷ್ಣು ಮಾಯೆ, ಚಿಕ್ಕಪೇಟೆಯ ಶ್ರೀ ದಂಡಿನ ಮಾರಿಯಮ್ಮ ದೇವಾ ಲಯದ ಷಣ್ಮುಖನಿಂದ ತಾರ ಕಾಸುರ ವಧೆ ಕಲಾ ಕೃತಿಗಳನ್ನು ಹೊತ್ತ ಮಂಟಪ ಹಾಗೂ ಕೋಟೆ ಮಾರಿಯಮ್ಮ ದೇವಾ ಲಯಕ್ಕೆ ಸೇರಿದ ಶಿವಪುರಾಣದ ದಕ್ಷ ಯಜ್ಞ ಕಲಾಕೃತಿಗಳನ್ನು ಹೊತ್ತ ವಿದ್ಯುತ್ ಅಲಂಕೃತ ಮಂಟಪಗಳಿಗೆ ಸಂಪ್ರದಾಯದಂತೆ ಚಾಲನೆ ನೀಡಲಾಯಿತು.ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲ ಯದಿಂದ ಮಕರದುರ್ಗೆಯಿಂದ ತಿಲಾಸುರ ವಧೆ, ದೇಚೂರು ಶ್ರೀ ರಾಮ ಮಂದಿರದಿಂದ ಆಂಜನೇಯನ ಸೀತಾನ್ವೇಷಣೆ, ಕೋಟೆ ಶ್ರೀ ಮಹಾಗಣಪತಿ ದೇವಾಲಯದಿಂದ ಉಗ್ರರೂಪಿ ಗಣಪನಿಂದ ಯಮ ಧರ್ಮ ರಾಜನ ಗರ್ವಭಂಗ, ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಿಂದ ಶಿವಭಕ್ತ ಮಾರ್ಕಂಡೇಯ, ಕರವಲೆ ಬಾಡಗ ಮಹಿಷಮರ್ದಿನಿ ದೇವಾಲಯದಿಂದ ಮಹಿಷಾಸುರ ಮರ್ದಿನಿ ಹೊರಟ ಕಲಾಕೃತಿಗಳ ಮಂಟಪ ಶೋಭಾಯಾತ್ರೆಯಲ್ಲಿ ಗಮನ ಸೆಳೆದವು.ಈ ಮಧ್ಯೆ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿ ಯಮ್ಮ, ಶ್ರೀ ಕಂಚಿ ಕಾಮಾಕ್ಷಮ್ಮ, ಶ್ರೀ ದಂಡಿನ ಮಾರಿ ಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯಗಳಿಗೆ ಸೇರಿದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಪದ್ಧತಿಯಂತೆ ಮಂಟಪ ಸಮಿತಿಗಳಿಂದ ಪೂಜೆ ಸ್ವೀಕರಿಸಿದ ಬಳಿಕ ಬನ್ನಿ ಕಡಿಯಲು ಪಂಪ್‌ಕೆರೆ ಕಡೆಗೆ ಸಾಗಿದವು.ವಿದ್ಯುತ್ ದೀಪಗಳ ಅಲಂಕಾರ:

ಇತಿಹಾಸ ಪ್ರಸಿದ್ಧ ಮಡಿಕೇರಿಯ ದಶಮಂಟಪಗಳ ಶೋಭಾಯಾತ್ರೆಗೆ ಇಡೀ ನಗರವು ವಿದ್ಯುತ್ ದೀಪಗಳ ಅಲಂಕಾರದಿಂದ ನವವಧುವಿನಂತೆ ಕಂಗೊಳಿಸುತಿತ್ತು.ದೇವಸ್ಥಾನಗಳು, ಸರ್ಕಾರಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಖಾಸಗಿ ಕಟ್ಟಡಗಳಲ್ಲದೇ ಹಲವು ಮನೆಗಳು ಸಹ ವಿದ್ಯುತ್ ದೀಪಗಳಿಂದ ಅಲಂಕಾರ ಗೊಂಡಿತ್ತು.ಈ ಸಲದ ಶೋಭಾಯಾತ್ರೆಯನ್ನು ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದರು ಎಂದು ಅಂದಾಜಿಸಲಾಗಿದೆ.

ಶೋಭಾಯಾತ್ರೆಯ ಸಂದರ್ಭದಲ್ಲಿ ಉಂಟಾಗುವ ಜನಸಂದಣಿಯನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು ಎಲ್ಲೆಡೆ ಕಂಡುಬಂದಿತು.`ಮಡಿಕೇರಿ ದಸರಾ ಸಂಸ್ಕೃತಿಯ ಪ್ರತೀಕ~


ದಸರಾ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಬುಧವಾರ ಗಾಂಧಿ ಮೈದಾನದ ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಉದ್ಘಾಟಿಸಿದರು.

 ಮುಖ್ಯ ಅತಿಥಿ ದಸರಾ ಸಮಿತಿಯ ಗೌರವ ಕಾರ್ಯದರ್ಶಿ ಎಂ.ಎನ್.ಶಶಿಕುಮಾರ್ ಮಾತ ನಾಡಿ, ಮೈಸೂರು ದಸರಾದ ಅನಂತರದ ಸ್ಥಾನ ದಲ್ಲಿ ಮಡಿಕೇರಿ ದಸರಾ ಹೆಸರುವಾಸಿ ಯಾಗಿದ್ದು, ನಾಡಿನ ಉನ್ನತ ಪರಂಪರೆ, ಸಂಸ್ಕೃತಿಯ ಪ್ರತೀಕದೊಂದಿಗೆ ಅತ್ಯಂತ ಸಡಗರದೊಂದಿಗೆ ನಡೆಯುತ್ತಿದೆ ಎಂದು ಬಣ್ಣಿಸಿದರು.ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಮಾತ ನಾಡಿ, ಕೊಡಗು ಜಿಲ್ಲೆಯಲ್ಲಿ ರಂಗ ಮಂದಿರದ ಕೊರತೆ ಇದ್ದು, ನಗರಾ ಡಳಿತ ಈ ಕುರಿತು ಗಮನ ಹರಿಸುವುದು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದಸರಾ ಸಮಿತಿ ಗೌರವ ಅಧ್ಯಕ್ಷ ಎಸ್.ಸಿ.ಸುಬ್ರಮಣಿ ಮಾತನಾಡಿ, ಮಡಿಕೇರಿ ನಗರಕ್ಕೆ ಬನ್ನಿಮಂಟಪದ ಅವಶ್ಯಕತೆ ಇತ್ತು. ಕಳೆದ ಎರಡು ವರ್ಷಗಳಲ್ಲಿ ಇದಕ್ಕೆ ಚಾಲನೆ ದೊರಕಿದ್ದು, ವಿಧಾನ ಸಭಾ ಧ್ಯಕ್ಷ ಕೆ.ಜಿ.ಬೋಪಯ್ಯ ಹಾಗೂ ಶಾಸಕ ರಂಜನ್ ಅಪ್ಪಚ್ಚು ಅವರ ಶ್ರಮ ದಿಂದ ಬನ್ನಿಮಂಟಪ ಕಾಮಗಾರಿ ಮುಕ್ತಾ ಯದ ಹಂತದಲ್ಲಿದೆ ಎಂದು ಹೇಳಿದರು.  ಅತಿಥಿಗಳಾದ ಮಡಿಕೇರಿಯ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಸುರೇಶ್ ಸಹಾಫ್ ಮಾತನಾಡಿದರು. ವೇದಿಕೆಯಲ್ಲಿ ದಸರಾ ಸಮಿ ತಿಯ ಅಧ್ಯಕ್ಷ ಎಚ್.ಎಂ.ನಂದ ಕುಮಾರ್, ಇನ್ನೋರ್ವ ಗೌರವ ಅಧ್ಯಕ್ಷ ಬೈ.ಶ್ರೀ. ಪ್ರಕಾಶ್ ಇದ್ದರು. ನಗರಸಭೆಯ ಉಪಾಧ್ಯಕ್ಷೆ ವಸಂತ ಕೇಶವ ಸ್ವಾಗತ, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಕಾರ್ಯಕ್ರಮ ನಿರೂಪಣೆ, ದಸರಾ ಸಮಿತಿ ಖಜಾಂಚಿ ಬಿ.ಕೆ.ಅರುಣ್ ುಮಾರ್ ವಂದನಾರ್ಪಣೆ ನೆರವೇರಿಸಿದರು. ಮಡಿಕೇರಿಯ ನಾಟ್ಯ ನಿಕೇತನ ಸಂಗೀತ ನೃತ್ಯ ಸಂಸ್ಥೆಯ ವಿನಯ ಕೃಷ್ಣಮೂರ್ತಿ ಮತ್ತು ತಂಡದಿಂದ ಗಿರಿಜಾ ಕಲ್ಯಾಣ ನೃತ್ಯ ರೂಪಕ, ವೀರೇಂದ್ರ ಹಿರೇಮಠ ಅವರಿಂದ ಸುಗಮ ಸಂಗೀತ, ಏಂಜಲ್ ಡ್ಯಾನ್ಸ್ ಕಾರ್ಯಕ್ರಮಗಳು ನಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.