ಭಾನುವಾರ, ಮೇ 29, 2022
22 °C

ದಶಲಕ್ಷ ತುಳಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಳಸಿಮಠ. ಹೆಸರೇ ಸೂಚಿಸುವಂತೆ ಇದು ತುಳಸಿಮಾತೆಯ ಕ್ಷೇತ್ರ. ಇಲ್ಲಿ ಎಲ್ಲ್ಲ್ಲೆಲೂ ತುಳಸಿ ದರುಶನ, ಭಕ್ತಿ ಚಿಮ್ಮಿಸುವ ವಾತಾವರಣ, ಹಿತಕರವಾದ ತಂಗಾಳಿ, ಎದೆ ತುಂಬ ಉಸಿರಾಡಬೇಕೆಂಬ ಸಹಜ ಪ್ರಾಣಾಯಾಮದ ಬಯಕೆ, ನಗುಮೊಗದ ಸ್ವಾಗತ, ಹಳ್ಳಿ ವಾತಾವರಣ, ಅಚ್ಚುಕಟ್ಟಾದ ತೀರ್ಥಪ್ರಸಾದ ವ್ಯವಸ್ಥೆ, ಬಂದವರಿಗೆ ತವರುಮನೆಯ ನೆನಪು ತರುವ ಉಪಚಾರ, ಅರಿಶಿನ-ಕುಂಕುಮದ ಜತೆಗೆ ಶ್ರಿರಾಮ ಜಯರಾಮ ನಾಮದೊಂದಿಗೆ ಉಚಿತ ತುಳಸಿ ಸಸಿ ವಿತರಣೆ. ಇವೆಲ್ಲವೂ ತುಳಸಿಮಠದ ವಿಶೇಷ.ನಾಡಿನಲ್ಲೇ ಮೊದಲ ಬಾರಿಗೆ ತುಳಸಿ ಅಭಿಯಾನ ಆರಂಭಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಏಕೆಂದರೆ ಧಾರ್ಮಿಕವಾಗಿ ಮಹತ್ವದ ತುಳಸಿಯ ವೈದ್ಯಕೀಯ ಗುಣಗಳು ಒಂದೊಂದಾಗಿ ಮನವರಿಕೆಯಾಗುತ್ತಿದ್ದಂತೆ ಅದಕ್ಕೆ ಮತ್ತಷ್ಟು ಬೆಲೆ ಬಂದಿದೆ. ಮನೆ ಮುಂದಿನ, ಕೈತೋಟದ ಅತ್ಯಗತ್ಯ ಸಸ್ಯವಾಗಿದೆ.ದಶಲಕ್ಷ ತುಳಸಿ ಯೋಜನೆ: ಹತ್ತು ಲಕ್ಷ ತುಳಸಿ ಸಸಿಗಳನ್ನು ಮಠದಲ್ಲೇ ಬೆಳೆದು ಉಚಿತವಾಗಿ ಭಕ್ತರಿಗೆ ಹಂಚುವುದು ದಶಲಕ್ಷ ತುಳಸಿ ಯೋಜನೆಯ ಗುರಿ. ಇದು ಮನೆಗಳಲ್ಲಿ ದೇವರ ಪೂಜೆಗೆ ಬಳಕೆಯಾಗಲಿ, ವಾತಾವರಣ ಶುದ್ಧಗೊಳ್ಳಲಿ ಎಂಬುದೇ ಶ್ರೀ ಮಠದ ಉದ್ದೇಶ.ಪ್ರತಿ ಮನೆಯ ಮುಂದೆ ಸಂಸ್ಕೃತಿಯ ಪ್ರತೀಕವಾಗಿ ಕಂಗೊಳಿಸುತ್ತಿರುವ ತುಳಸಿ ಮುಖ್ಯವಾಗಿ ನಗರಗಳಲ್ಲಿ ಕಣ್ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದು ಈ ವಿಶಿಷ್ಟ ಜಾಗೃತಿ ಆಂದೋಲನವನ್ನು ಆರಂಭಿಸಿದೆ.ತುಳಸಿಯ ಎಲೆ, ಕಾಂಡ, ರಸ ಅನೇಕ ಕಾಯಿಲೆಗಳಿಗೆ ರಾಮಬಾಣ. ಅದರ ಪರಿಮಳದಿಂದ ಸೊಳ್ಳೆ ಮತ್ತಿತರ ಕೀಟಾಣುಗಳ ಕಡಿಮೆಯಾಗುವುದನ್ನು ಜನ ಕಂಡುಕೊಂಡಿದ್ದಾರೆ.ಈ ವಿಶಿಷ್ಟ ಯೋಜನೆಯನ್ನು  ಗುರುತಿಸಿ ಶ್ರೀ ಅರಬಿಂದೋ ಕಪಾಲಿ ಶಾಸ್ತ್ರಿ ವೇದ ಸಂಸ್ಕೃತ ಸಂಸ್ಥೆ ಮತ್ತು ಸಂಸ್ಕೃತ ವಿಶ್ವವಿದ್ಯಾಲಯ ಪ್ರಶಸ್ತಿ ನೀಡಿ ಬೆನ್ನುತಟ್ಟಿವೆ.

ಇಲ್ಲಿ ತುಳಸಿ ತೋಟ ಮಾತ್ರವಲ್ಲದೇ ಶ್ರೀರಾಯರ ಮಠವೂ ಇದೆ.ಶ್ರೀ ಪ್ರಹ್ಲಾದರಾಜರ ಕನಕಾಭಿಷೇಕ ಹಾಗೂ ಪ್ರಾಕಾರೋತ್ಸವದ ಇಲ್ಲಿನ ಇನ್ನೊಂದು ವಿಶೇಷ. ಭಕ್ತರೇ ಅರ್ಪಿಸುವ ದವಸ ಧಾನ್ಯ, ಆಹಾರ ಸಾಮಗ್ರಿಗಳನ್ನು ಬಳಸಿ ನಿತ್ಯ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಭಗ್ನಗೊಂಡ, ಪೂಜೆ ಇಲ್ಲದಿರುವ ವಿಗ್ರಹಗಳನ್ನು ಸಂಗ್ರಹಿಸುವ ವ್ಯವಸ್ಥೆಯೂ ಇಲ್ಲಿದೆ.ಇಲ್ಲಿದೆ ಮಠ: ಕನಕಪುರ ರಸ್ತೆಯಲ್ಲಿ ನೈಸ್ ರಸ್ತೆ ದಾಟಿ ಕೊಂಚ ದೂರ ಸಾಗಿ ಅಗರ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ತಾತಗುಣಿಯ ಮೂಲಕ ಅಗರ ತಲುಪಿ ಗ್ರಾಮದೇವತೆ ಮಂದಿರದ ಬಳಿ ಹೋದರೆ ಸಿಗುತ್ತದೆ ಈ ಮಠ(ಬಸ್ ಮಾರ್ಗ212, 219, 337).ನಿಮ್ಮ ಆಧುನಿಕ ಜೀವನದಲ್ಲಿಯೂ ಪ್ರಾಚೀನ ಕಾಲದ ಅತಿಥಿ ಸತ್ಕಾರ, ಅನ್ನದಾನ, ತವರಿನ ಸಂಭ್ರಮದ ನೆನಪು, ಹಬ್ಬಗಳ ಆಚರಣೆ, ಭಕ್ತಿ, ತ್ಯಾಗ ಮನೋಭಾವ, ಹಾಡು, ಭಜನೆ, ಜಪ ಇವೆಲ್ಲರ ಸುಂದರ ಅನುಭವ ಇಲ್ಲಿ ದೊರೆಯುತ್ತದೆ.ಮಾಹಿತಿಗೆ: 98440 27231, 98443 50235, 97406 33005.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.