ದಶಲಕ್ಷ ಪೌಂಡ್‌ಗೆ ಟೆಸ್ಟ್ ಫಿಕ್ಸ್!

7

ದಶಲಕ್ಷ ಪೌಂಡ್‌ಗೆ ಟೆಸ್ಟ್ ಫಿಕ್ಸ್!

Published:
Updated:

ಲಂಡನ್ (ಪಿಟಿಐ): ಟೆಸ್ಟ್ ಪಂದ್ಯದ ಫಲಿತಾಂಶ ಬುಕ್ಕಿ ಬಯಸಿದ ರೀತಿಯಲ್ಲಿ ಹೊರಹೊಮ್ಮಲು ಆಗುವ ವೆಚ್ಚ ದಶಲಕ್ಷ ಪೌಂಡ್! ಹೌದು; ಆದರೆ ಇಂಥ ನಿರೀಕ್ಷಿತ ಪರಿಣಾಮ ಪಾಕಿಸ್ತಾನ ಕ್ರಿಕೆಟ್ ತಂಡ ಆಡುವಾಗ ಮಾತ್ರ ಸಾಧ್ಯ.

ಈ ರೀತಿಯ ಅಚ್ಚರಿಯ ಅಂಶವೊಂದು ಲಂಡನ್ ನ್ಯಾಯಾಲಯದಲ್ಲಿ ಸೋಮವಾರ ಬಹಿರಂಗವಾಯಿತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆದ `ಸ್ಪಾಟ್ ಫಿಕ್ಸಿಂಗ್~ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಈ ಕುರಿತು ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಇಡಲಾಯಿತು.

ಪತ್ರಕರ್ತನೊಬ್ಬ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಕ್ರಿಕೆಟಿಗರು ದಶಲಕ್ಷ ಪೌಂಡ್‌ಗೆ ಟೆಸ್ಟ್ ಪಂದ್ಯವನ್ನೇ ಸೋಲಲು ಒಪ್ಪಿಕೊಂಡಿದ್ದರು ಎನ್ನುವ ಸತ್ಯ ಅರಿವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಪೂರ್ಣ ತನಿಖೆ ನಡೆಸಿರುವ ಲಂಡನ್ ಪೊಲೀಸರಿಗೂ ಈ ಅಂಶವು ಅರಿವಾಗಿದೆ. ಅದಕ್ಕೆ ಸಂಬಂಧಿಸಿದ ಧ್ವನಿ ಮುದ್ರಿಕೆಗಳನ್ನು ಕೂಡ ಇಲ್ಲಿನ ಸೌತ್‌ವಾರ್ಕ್ ಕ್ರೌನ್ ಕೋರ್ಟ್‌ನಲ್ಲಿ ನ್ಯಾಯಾಧೀಶರಿಗೆ ಕೇಳಿಸಲಾಯಿತು.

ಪಾಕ್ ಮಾಜಿ ನಾಯಕ ಸಲ್ಮಾನ್ ಬಟ್ ಹಾಗೂ ಮೊಹಮ್ಮದ್ ಆಸಿಫ್ ಅವರನ್ನು ಬುಕ್ಕಿ ಮೂಲಕ ನಿಯತಕಾಲಿಕ ಪತ್ರಿಕೆಯ ವರದಿಗಾರ ಸಂಪರ್ಕಿಸಿದ್ದ. ಅದೇ ಸಂದರ್ಭದಲ್ಲಿ ಟೆಸ್ಟ್ ಪಂದ್ಯ ಸೋಲುವುದಕ್ಕೆ ಪಾಕ್ ಆಟಗಾರರು ದಶಲಕ್ಷ ಡಾಲರ್ ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲ ಈ ಕ್ರಿಕೆಟಿಗರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಆ ಪ್ರಕರಣದ ವಿಚಾರಣೆಯು ಈಗ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry