ಶುಕ್ರವಾರ, ಏಪ್ರಿಲ್ 16, 2021
20 °C

ದಸಂಸ ನೇತೃತ್ವದಲ್ಲಿ ಅಂತರ್ಜಾತಿ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲುಕೋಟೆ: ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗುರುವಾರ ಮೇಲುಕೋಟೆ ಹೋಬಳಿಯ ಚಿಟ್ಟನಹಳ್ಳಿ ಗ್ರಾಮದ ಯುವಕ ಉಮೇಶ್ ಮತ್ತು ಹಾಸನ ಜಿಲ್ಲೆಯ ದುದ್ದಹೋಬಳಿಯ ಬೈರಾಪುರ ಗ್ರಾಮದ ಜ್ಯೋತಿ ಅವರ ಅಂತರ್ಜಾತಿ ವಿವಾಹ ನಡೆಯಿತು.ಪರಿಶಿಷ್ಟ ಜಾತಿಗೆ ಸೇರಿದ ದಂಪತಿ ಪ್ರೇಮಾ, ಜಯರಾಂ ಅವರ ಪುತ್ರ ಉಮೇಶ್ ಬೆಂಗಳೂರಿನ ವಂಗಸಂದ್ರದಲ್ಲಿ ಟ್ರಾವಲ್ಸ್‌ನ ಚಾಲಕನಾಗಿದ್ದ. ಇದೇ ಸಂದರ್ಭದಲ್ಲಿ ಅದೇ ಬಡಾವಣೆಯಲ್ಲಿ ವಾಸವಾಗಿದ್ದ ಕುರುಬ ಜನಾಂಗಕ್ಕೆ ಸೇರಿದ ದಂಪತಿ ಮಂಜುಳ, ಮಂಜಪ್ಪ ಅವರ ಪುತ್ರಿ ಜ್ಯೋತಿ ಪರಿಚಯವಾಗಿ ಇಬ್ಬರಲ್ಲೂ ಪ್ರೇಮ ಉದಯಿಸಿದೆ. 2 ವರ್ಷ ಗಳಿಂದ ಪ್ರೇಮಿಸುತ್ತಿದ್ದ ಈ ಜೋಡಿ ಮದುವೆಯಾಗಲು ನಿಶ್ಚಯಿಸಿದಾಗ ಜ್ಯೋತಿ ಮನೆಯವರಿಂದ ವಿರೋಧ ವ್ಯಕ್ತವಾಗಿದೆ.ಈ ಪ್ರಕರಣ ದಲಿತ ಸಂಘರ್ಷ ಸಮಿತಿಗೆ ತಲುಪಿದಾಗ ರಾಜ್ಯ ಮುಖಂಡ ಎಂ.ಬಿ.ಶ್ರೀನಿವಾಸ್ ಎರಡೂ ಕಡೆಯ ಪೋಷಕರ ಮನ ವೊಲಿಸಿ ಗುರುವಾರ ಮೇಲುಕೋಟೆಗೆ ಕರೆತಂದು ವಿವಾಹ ನೆರವೇರಿಸಿ ಪ್ರಕರಣವನ್ನು ಸುಖಾಂತ್ಯ ಗೊಳಿಸಿದ್ದಾರೆ.  ಸರಳ ವಿವಾಹ ಕಾರ್ಯದಲ್ಲಿ ವಧು ವರರ ತಂದೆ ತಾಯಿ ಸೇರಿದಂತೆ ಡಿಎಸ್‌ಎಸ್ ಮುಖಂಡರಾದ ಎಂ.ವೈ.ಕೃಷ್ಣ, ವೈ.ಕೆ.ಪ್ರಕಾಶ್, ಪುಟ್ಟರಾಜು, ಸರೋಜ, ರವಿ, ಬೆಟ್ಟಯ್ಯ, ಮುಂತಾದವರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.