ದಸರಾ ಅಥ್ಲೆಟಿಕ್ಸ್: ಮೈಸೂರು ವನಿತೆಯರ ದಾಖಲೆ

7

ದಸರಾ ಅಥ್ಲೆಟಿಕ್ಸ್: ಮೈಸೂರು ವನಿತೆಯರ ದಾಖಲೆ

Published:
Updated:

ಮೈಸೂರು: ಆತಿಥೇಯ ಮೈಸೂರು ವಿಭಾಗದ ವನಿತೆಯರು  ರಾಜ್ಯಮಟ್ಟದ ದಸರಾ ಅಥ್ಲೆಟಿಕ್ಸ್‌ನ 21 ವರ್ಷದಷ್ಟು ಹಳೆಯ ಕೂಟ ದಾಖಲೆಯನ್ನು ಸೋಮವಾರ ಅಳಿಸಿ ಹಾಕಿದರು.ಚಾಮುಂಡಿ ವಿಹಾರ ಕ್ರೀಡಾಂಗಣದ ಮಣ್ಣಿನ ಟ್ರ್ಯಾಕ್ ಮೇಲೆ ನಡೆದ  ಮಹಿಳೆಯರ 4x400 ಮೀ ರಿಲೆಯಲ್ಲಿ ಮೈಸೂರಿನ ಎಸ್.ಕೆ. ಅಫ್ಸಾನಾ, ಶ್ರದ್ಧಾರಾಣಿ ಎಸ್. ದೇಸಾಯಿ, ಬೀಬಿ ಸುಮಯಾ, ರೀನಾ ಜಾರ್ಜ್ ನೂತನ ದಾಖಲೆ ನಿರ್ಮಿಸಿದರು.

 

1990ರಲ್ಲಿ ಬೆಂಗಳೂರು ನಗರ ತಂಡದ ಓಟಗಾರ್ತಿಯರು 4ನಿಮಿಷ, 0.4ಸೆಕೆಂಡುಗಳಲ್ಲಿ ಮಾಡಿದ್ದ ಸಾಧನೆಯನ್ನು ಮೈಸೂರಿನ ಓಟಗಾರ್ತಿಯರು 3ನಿಮಿಷ,58.47ಸೆಕೆಂಡುಗಳಲ್ಲಿ ಮಾಡಿ ಹೊಸ ವಿಕ್ರಮ ಬರೆದರು.ಸೋನಿತ್, ಸುಮಯಾ ವೇಗಿಗಳು: ನೂರಾರು ಪ್ರೇಕ್ಷಕರು ಸಮ್ಮುಖದಲ್ಲಿ ಬಿರುಗಾಳಿಯಂತೆ ಓಡಿದ ಮೈಸೂರಿನ ಓಟಗಾರ ಸೋನಿತ್ ಮೆಂಡನ್ ಮತ್ತು ರಾಷ್ಟ್ರೀಯ ಅಥ್ಲೀಟ್ ಬೀಬಿ ಸುಮಾಯಾ ದಸರಾ ಅಥ್ಲೆಟಿಕ್ಸ್‌ನ 100 ಮೀಟರ್ ಓಟದ ಕ್ರಮವಾಗಿ  `ವೇಗದ ರಾಜ~ ಮತ್ತು `ವೇಗದ ರಾಣಿ~ಯಾಗಿ ಮೆರೆದರು.10.7ಸೆಕೆಂಡುಗಳಲ್ಲಿ ನೂರು ಮೀಟರ್ ಕ್ರಮಿಸಿದ ಸೋನಿತ್‌ಗೆ ಬೆಂಗಳೂರು ನಗರ ತಂಡದ ಜಿ.ಎನ್. ಬೋಪಣ್ಣ (10.8ಸೆ) ಮತ್ತು ಕೆ.ಎಂ. ಅಯ್ಯಪ್ಪ (10.9ಸೆ) ತೀವ್ರ ಪೈಪೋಟಿ ಒಡ್ಡಿದರು. ಮಹಿಳೆಯರ ವಿಭಾಗದಲ್ಲಿ ಹುಣಸೂರಿನ ಹುಡುಗಿ ಬೀಬಿ ಸುಮಯಾ 12.60ಸೆಕೆಂಡುಗಳಲ್ಲಿ ನೂರು ಮೀಟರ್ ದೂರ ಕ್ರಮಿಸಿ ಪ್ರಥಮ ಸ್ಥಾನ ಗಳಿಸಿದರು. ಇತ್ತೀಚೆಗಷ್ಟೇ ಚೆನೈನಲ್ಲಿ ನಡೆದ 52ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಮಹಿಳೆಯರ 200 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಬಂದಿದ್ದ ಸುಮಯಾ ಮೈಸೂರಿನ ಡಿವೈಎಸ್‌ಎಸ್ ವಸತಿ ನಿಲಯದ ಅಥ್ಲೀಟ್.  ಫಲಿತಾಂಶಗಳು: ಪುರುಷರು: 100 ಮೀ ಓಟ: ಸೋನಿತ್ ಮೆಂಡನ್ (ಮೈಸೂರು)-1, ಜಿ.ಎನ್. ಬೋಪಣ್ಣ (ಬೆಂಗಳೂರು ನಗರ)-2, ಕೆ.ಎಂ. ಅಯ್ಯಪ್ಪ (ಬೆಂಗಳೂರುನಗರ)-3;  ಕಾಲ: 10.70ಸೆ;

800 ಮೀ: ಎನ್. ವಿಶ್ವಾಂಬರ (ಬೆಂಗಳೂರು ನಗರ)-1, ಸಿ.ಎನ್. ನವೀನ್ (ಬೆಂಗಳೂರು ನಗರ)-2, ಸಿ.ಟಿ. ಸುನಿಲಕುಮಾರ್ (ಬೆಂಗಳೂರು ಗ್ರಾಮಾಂತರ)-3,  ಕಾಲ: 2ನಿ, 04.85ಸೆ;

 

ಶಾಟ್‌ಪಟ್: ಎಂ.ಆರ್. ನಂದೀಶ್ (ಮೈಸೂರು)-1, 15.57ಮೀ; ಎಂ.ಆರ್. ಮೋಹನಕುಮಾರ್ (ಮೈಸೂರು)-2, ನೂಮನ್ ಮೋದಿ (ಬೆಳಗಾವಿ)-3;ಲಾಂಗ್‌ಜಂಪ್: ಮೋಹಿತ್ ಕುಮಾರ್ (ಬೆಂಗಳೂರು ನಗರ)-1, ದೂರ: 6.86ಮೀ ಡಿ. ಭಾವೇಶ್ ಕಾರ್ವೇಕರ್ (ಮೈಸೂರು)-2, ಶಿವಶಂಕರ್ (ಬೆಳಗಾವಿ)-3;

 

4x400 ಮೀ ರಿಲೆ: ಬೆಂಗಳೂರು ನಗರ (ಕೆ.ಎಸ್. ಜೀವನ್, ಸಿ. ನವೀನ್, ಯರಯ್ಯ, ಎ.ಕೆ. ರಘು,)-1 ( ಕಾಲ: 3ನಿ,26ಸೆ) -1, ಬೆಳಗಾವಿ (ಆಕಾಶ ಮೆಂಡವಲ್ಕರ್, ಧವಳ್ ಪಟೇಲ್, ಆರ್. ಆಕಾಶ್, ಗಣೇಶ್ ನಾಯಕ್) -2, ಬೆಂಗಳೂರು ಗ್ರಾಮಾಂತರ (ಎಸ್.ಜೆ. ಸುಮಿತ್, ತರುಣ್ ಶೇಖರ್,ಪ್ರೇಮಕುಮಾರ್, ಆರ್.ಕೆ. ರಾಹುಲ್ ಹೆಗಡೆ) -3 ಮಹಿಳೆಯರು: 100 ಮೀ ಓಟ: ಬೀಬಿ ಸುಮಯಾ (ಮೈಸೂರು)-1,  ಮಂಜುಶ್ರೀ (ಬೆಳಗಾವಿ)-2, ಪ್ರಣಿತಾ ಪ್ರದೀಪ್ (ಬೆಂಗಳೂರು ನಗರ)-3, ಕಾಲ: 12.60ಸೆ;  800ಮೀ: ಕೆ.ಸಿ. ಶ್ರುತಿ (ಬೆಂಗಳೂರು ನಗರ)-1, ಫರೀನ್ ಶೇಖ್ (ಬೆಳಗಾವಿ)-2, ಸಿ.ಪೂರ್ಣಿಮಾ (ಮೈಸೂರು)-3 ಕಾಲ: 2ನಿ, 23.15ಸೆ;

 

ಶಾಟ್‌ಪಟ್: ಪಿ.ಎಸ್. ಉಮಾ (ಮೈಸೂರು)-1, ಎಸ್. ಸುಷ್ಮಾ (ಮೈಸೂರು)-2, ಪಿ. ನಿವೇದಿತಾ ಸಾವಂತ್ (ಬೆಳಗಾವಿ)-3, ದೂರ: 10.89ಮೀ:  ಲಾಂಗ್‌ಜಂಪ್: ಮಂಜುಶ್ರೀ (ಬೆಳಗಾವಿ)-1,  ಸುರೇಖಾ ಪಾಟೀಲ (ಬೆಳಗಾವಿ)-2, ಪ್ರಣಿತಾ ಪ್ರದೀಪ್ (ಬೆಂಗಳೂರು ನಗರ)-3, ದೂರ: 5.62;

 4x400 ಮೀ ರಿಲೆ: ಮೈಸೂರು (ಎಸ್.ಕೆ. ಅಫ್ಸಾನಾ, ಶ್ರದ್ಧಾರಾಣಿ ಎಸ್. ದೇಸಾಯಿ, ಬೀಬಿ ಸುಮಯಾ, ರೀನಾ ಜಾರ್ಜ್, ನೂತನ ದಾಖಲೆ: 3ನಿ,58.47ಸೆ; ಹಳೆಯ ದಾಖಲೆ: 4ನಿ, 00.4ಸೆ)-1, ಬೆಳಗಾವಿ (ಫರೀನಾ ಶೇಖ, ಎಂ. ಪ್ರೀತಿ, ಪೂನಂ ವಿ. ಸಾವಂತ್, ಅಪೇಕ್ಷಾ ಎಸ್. ನಾಯಕ)-2, ಬೆಂಗಳೂರು ಗ್ರಾಮಾಂತರ -3.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry