ಸೋಮವಾರ, ಮೇ 23, 2022
21 °C

ದಸರಾ ಆನೆ ಭರತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಗೋಣಿಕೊಪ್ಪಲು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರುಗು ತರುತ್ತಿದ್ದ  ಸಾಕಾನೆ ಭರತ (45) ಶುಕ್ರವಾರ ಮೃತ ಪಟ್ಟಿತು. ತಿತಿಮತಿ ಸಮೀಪದ ಮತ್ತಿಗೋಡು ಆನೆ ಶಿಬಿರದಲ್ಲಿ ಇದ್ದ  ಗಂಡಾನೆ ಭರತ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು ಎನ್ನಲಾಗಿದೆ.1982ರಲ್ಲಿ ಎಚ್.ಡಿ.ಕೋಟೆ ಬಳಿಯ ಕಟ್ಟೇಪುರದಲ್ಲಿ ಭರತನನ್ನು ಹಿಡಿಯಲಾಗಿತ್ತು. ದಸರಾ ಆನೆಗಳಲ್ಲಿಯೇ ಅತಿ ಎತ್ತರವಾಗಿ, ದೃಢಕಾಯದಿಂದ ಬಲಿಷ್ಠವಾಗಿದ್ದ ಭರತ ಸ್ವಲ್ಪ ಮುಂಗೋಪಿಯಾಗಿತ್ತು. ಕೋಲಾರ ದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾವುತನನ್ನು ಗಾಯಗೊಳಿಸಿತ್ತು. 10 ಬಾರಿಗೂ ಮಿಕ್ಕಿ ಭರತ ದಸರಾ ಉತ್ಸವದಲ್ಲಿ ಭಾಗವಹಿಸಿತ್ತು. ಈಚಿನ ವರ್ಷಗಳಲ್ಲಿ ಭರತ ದಸರಾ ಉತ್ಸವದಲ್ಲಿ ಭಾಗವಹಿಸಿರಲಿಲ್ಲ.ಹುಣಸೂರು ವನ್ಯಜೀವಿ ವಿಭಾಗದ ವೈದ್ಯ ಶ್ರೀನಿವಾಸ್ ಶನಿವಾರ ಮೃತ ಆನೆಯ ಪರೀಕ್ಷೆ ನಡೆಸಿದರು. ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯರಂಜನ್ ಸಿಂಗ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ, ವಲಯ ಅರಣ್ಯಾಧಿಕಾರಿ ರವೀಂದ್ರ ಪರಿಶೀಲನೆ ನಡೆಸಿದರು. ಬಳಿಕ ಮತ್ತಿಗೋಡು ಅರಣ್ಯದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.