ದಸರಾ: ಇನ್ನೂ ಬಿಡುಗಡೆ ಆಗದ ಹಣ!

7

ದಸರಾ: ಇನ್ನೂ ಬಿಡುಗಡೆ ಆಗದ ಹಣ!

Published:
Updated:

ಮೈಸೂರು: ನಾಡಹಬ್ಬ ದಸರಾ ಆರಂಭಕ್ಕೆ ಇನ್ನು 5 ದಿನಗಳು ಮಾತ್ರ ಬಾಕಿ ಉಳಿದಿವೆ. ಕೊನೆ ಗಳಿಗೆಯಲ್ಲಿ ದಸರಾ ಉಪ ಸಮಿತಿಗಳೂ ರಚನೆಯಾಗಿವೆ. ಆದರೆ, ಇದುವರೆಗೂ ಯಾವ ಉಪ ಸಮಿತಿಗಳಿಗೂ ಹಣ ಬಿಡುಗಡೆ ಆಗಿಲ್ಲ!-ಹೌದು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ದಸರಾ ಉಪ ಸಮಿತಿ ಪದಾಧಿಕಾರಿಗಳು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಬಹಿರಂಗ ಪಡಿಸಿದರು.ಯುವಸಂಭ್ರಮ, ಮಹಿಳಾ ಮತ್ತು ಮಕ್ಕಳ ದಸರಾ, ಕಲಾಮೇಳ ದಸರಾ, ಸಾಹಸ ಕ್ರೀಡೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಉಪ ವಿಶೇಷಾಧಿಕಾರಿಗಳು ಹಾಗೂ ಉಪ ಸಮಿತಿಗಳ ಅಧ್ಯಕ್ಷರು ಸೂಕ್ತ ಅನುದಾನ ಲಭ್ಯವಾಗದ ಬಗ್ಗೆ ಆತಂಕ ವ್ಯಕ್ತಪಡಿಸಿದರು.`ಬರ ಹಾಗೂ ಕಾವೇರಿ ವಿವಾದ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಆದರೆ, ದಸರಾ ಉತ್ಸವ ಆರಂಭವಾಗಲು ಕೇವಲ ಐದು ದಿನ ಬಾಕಿ ಉಳಿದಿದ್ದು, ಇದುವರೆಗೂ ಉಪ ಸಮಿತಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ದೇಶ-ವಿದೇಶಗಳ ಮಾತಿರಲಿ, ಮೈಸೂರು ನಗರದಲ್ಲೇ ಸೂಕ್ತ ಪ್ರಚಾರ ನೀಡಲು ಸಾಧ್ಯವಾಗುತ್ತಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.`ಯುವ ಸಂಭ್ರಮಕ್ಕೆ ರೂ. 10 ಲಕ್ಷ, ಮಹಿಳಾ ಮತ್ತು ಮಕ್ಕಳ ದಸರಾಕ್ಕೆ ರೂ. 6 ಲಕ್ಷ, ಮನೆ ಮನೆ ದಸರಾಕ್ಕೆ ರೂ. 15 ಲಕ್ಷ, ಸಾಹಸ ಕ್ರೀಡೆಗಳಿಗೆ ರೂ. 5 ಲಕ್ಷ ಅನುದಾನ ನೀಡುವಂತೆ ಉಪ ಸಮಿತಿಗಳು ಮನವಿ ಸಲ್ಲಿಸಿವೆ.  ಇದುವರೆಗೂ ಒಂದು ರೂಪಾಯಿ ಅನುದಾನ ಲಭ್ಯವಾಗಿಲ್ಲ~ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.ಮನೆ ಮನೆ ದಸರಾ ಉಪ ಸಮಿತಿ ಅಧ್ಯಕ್ಷರೂ ಆದ ಮೇಯರ್ ಎಂ.ಸಿ.ರಾಜೇಶ್ವರಿ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಈ ಸಲ ಪ್ರಾಯೋಜಕತ್ವಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry