ಶುಕ್ರವಾರ, ಸೆಪ್ಟೆಂಬರ್ 20, 2019
28 °C

ದಸರಾ ಕ್ರೀಡಾಕೂಟ: ಓಟದಲ್ಲಿ ಸೋಪಾನ್, ಭುವನೇಶ್ವರಿ ಮೇಲುಗೈ

Published:
Updated:

ಬೀದರ್: ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಸೋಪಾನ್ ನಾಮದೇವ ಆಣದೂರು ಹಾಗೂ ಮಹಿಳೆಯರ ವಿಭಾಗದಲ್ಲಿ ಭುವನೇಶ್ವರ ಅಂಬಣ್ಣ ಮೇಲುಗೈ ಸಾಧಿಸಿದ್ದಾರೆ.ಸೋಪಾನ್ 800 ಮೀಟರ್, 1,500 ಮೀಟರ್ ಓಟ ಹಾಗೂ 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಭುವನೇಶ್ವರಿ 100 ಮೀಟರ್, 200 ಮೀಟರ್ ಓಟ, 4*100 ಮೀಟರ್ ರಿಲೇ ಮತ್ತು 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ನಿಮಿತ್ತ ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಹೆಸರು ಹೀಗಿವೆ.ಬಾಲಕರ ವಿಭಾಗ -ಅಥ್ಲೆಟಿಕ್ಸ್:

100 ಮೀಟರ್ ಓಟ: ಎಂ.ಡಿ. ಮುಜಿಬ್‌ಖಾನ್ ಬೀದರ್ (ಪ್ರಥಮ) ಮತ್ತು ಸ್ಯಾಮಸನ್ ಸುಧಾಕರ ಬೀದರ್ (ದ್ವಿತೀಯ).200 ಮೀಟರ್ ಓಟ: ಉಮರ್ ಅಲಿ, ಸರ್ಕಾರಿ ಪ್ರೌಢ ಶಾಲೆ, ಸಂಗೋಳಗಿ (ಪ್ರಥಮ) ಹಾಗೂ ನಿತೀಶ ಸುರೇಶ (ದ್ವಿತೀಯ).400 ಮೀಟರ್ ಓಟ: ಸಂಜುಕುಮಾರ ಶಿವರಾಜ ಹುಮನಾಬಾದ್ (ಪ್ರಥಮ) ಮತ್ತು ಅರುಣ ಭೀಮಷ್ಯಾ ಬೀದರ್ (ದ್ವಿತೀಯ).800 ಮೀಟರ್ ಓಟ: ಸೋಪಾನ ನಾಮದೇವ ಆಣದೂರು (ಪ್ರಥಮ) ಹಾಗೂ ಬಸವ ಗಣಪತಿ ಬೀದರ್ (ದ್ವಿತೀಯ).1,500 ಮೀಟರ್ ಓಟ: ಸೋಪಾನ ನಾಮದೇವ ಆಣದೂರು (ಪ್ರಥಮ) ಮತ್ತು ಮತೀನ್ ಅಹಮ್ಮದ್ ಮನ್ನಾಎಖ್ಖೆಳ್ಳಿ (ದ್ವಿತೀಯ).5,000 ಮೀಟರ್ ಓಟ: ಮಾರುತಿ ವೀರಪ್ಪ ಎಖ್ಖೆಳ್ಳಿಕರ್ (ಪ್ರಥಮ) ಹಾಗೂ ಏವನ್ ಕಾಶಿನಾಥ ಬೀದರ್ (ದ್ವಿತೀಯ). 110 ಹರ್ಡಲ್ಸ್: ಸೋಮಪ್ಪ ಸಿ. ರಾಠೋಡ್ (ಪ್ರಥಮ) ಮತ್ತು ಎಂ.ಡಿ. ನಜೀಬ್‌ಖಾನ್ (ದ್ವಿತೀಯ).

4*100 ಮೀ. ರಿಲೇ: ಸೈಯದ್ ಸೈಬಾಜ್ ಅಲಿ, ರೋಹಿತ್, ಸೈಯದ್ ಸೊಹೆಬ್ ಹಾಗೂ ಪ್ರಹ್ಲಾದ್ (ಪ್ರಥಮ).4*400 ಮೀ. ರಿಲೇ: ಸೋಪಾನ್ ನಾಮದೇವ, ಅರುಣಕುಮಾರ ಭೀಮಷ್ಯಾ, ಶಿವಕುಮಾರ ಕಲ್ಲಪ್ಪ ಮತ್ತು ಬಸವರಾಜ ರಾಮಣ್ಣ (ಪ್ರಥಮ). ಬಾಲಕರ ವಿಭಾಗ -ಗುಂಪು ಸ್ಪರ್ಧೆ:

ಕಬಡ್ಡಿ: ಔರಾದ್ ತಂಡ ಪ್ರಥಮ (ತಂಡದ ಸದಸ್ಯರು- ಸೋಮನಾಥ, ಅಮೃತ, ಸುರೇಶ,  ತಬರೇಜ್ ಮುಧೋಳ್, ಭೀಮ, ಸಂತೋಷ, ಚಂದ್ರಕಾಂತ, ಕರೀಮ್, ಸಂಜುಕುಮಾರ, ವಿಜಯಕುಮಾರ, ಶಿವಲಿಂಗಯ್ಯ ಮತ್ತು ಸೂರ್ಯಕಾಂತ). ಔರಾದ್ ತಂಡ ದ್ವಿತೀಯ.ಬಾಲ್ ಬ್ಯಾಡ್ಮಿಂಟನ್: ಪಿ.ಡಬ್ಲೂ.ಡಿ. ಬಿ.ಬಿ. ಕ್ಲಬ್ ಪ್ರಥಮ (ತಂಡದ ಸದಸ್ಯರು- ಸಿರಾಜ್ದ್ದೊದೀನ್, ರಾಯರೆಡ್ಡಿ, ರಾಜಕುಮಾರ, ಮಕ್ಬುಲ್, ನರೇಶ, ನವೀನ, ಜಹೀರ್, ಸಾಜೀದ್ ಹಾಗೂ ಸುರೇಶ).

ದ್ವಿತೀಯ ಸ್ಥಾನ ಪಡೆದ ತಂಡದ ಸದಸ್ಯರು- ಪ್ರಶಾಂತ, ರಿತೇಶ್, ಸಂದೀಪ್, ಶ್ರೀವಾತ್ಸವ್, ಸಂತೋಷ, ಅನಂತರೆಡ್ಡಿ ಮತ್ತು ಮಾಣಿಕರಾವ.ಟೇಬಲ್ ಟೆನ್ನಿಸ್: ಬೀದರ್ ತಂಡ ಪ್ರಥಮ (ತಂಡದ ಸದಸ್ಯರು- ನರೇಶ, ವಿಶಾಲ್, ಸಂದೀಪ್, ಸಂಜಯ್, ಲ್ಯಾಂಬಟ್ ಹಾಗೂ ಅನುಪಮ್‌ಕುಮಾರ).  ಶಟಲ್ ಬ್ಯಾಡ್ಮಿಂಟನ್: ಬೀದರ್ ತಂಡ ಪ್ರಥಮ (ತಂಡದ ಸದಸ್ಯರು- ಅದ್ನಾನ್ ಫಾರೂಕ್, ನಾಗರಾಜ್ ಎಚ್. ಆದಿಲ್ ಮತ್ತು ರಾಹುಲ್). ಮಹಿಳೆಯರ ವಿಭಾಗ (ಆಥ್ಲೆಟಿಕ್ಸ್):

100 ಮೀಟರ್ ಓಟ: ಭುವನೇಶ್ವರಿ ಅಂಬಣ್ಣ (ಪ್ರಥಮ) ಹಾಗೂ ಭಾಗ್ಯಶ್ರೀ (ದ್ವಿತೀಯ).200 ಮೀಟರ್ ಓಟ: ಭುವನೇಶ್ವರಿ ಅಂಬಣ್ಣ (ಪ್ರಥಮ) ಮತ್ತು ಬೇಬಾವತಿ (ದ್ವಿತೀಯ).400 ಮೀಟರ್ ಓಟ: ಸರಿತಾ ವೈಜಿನಾಥ (ಪ್ರಥಮ) ಹಾಗೂ ರೇಖಾ ಚಂದ್ರಕಾಂತ (ದ್ವಿತೀಯ).800 ಮೀಟರ್ ಓಟ: ಪೂಜಾ ಧನರಾಜ (ಪ್ರಥಮ) ಮತ್ತು ಲಕ್ಷ್ಮಿ ಮಾರುತಿ (ದ್ವಿತೀಯ).1,500 ಮೀಟರ್ ಓಟ: ಸುನೀತಾ ಶಿವರಾಜ ಬೀದರ್ (ಪ್ರಥಮ) ಹಾಗೂ ರಾಣಿ ಬಸವರಾಜ ಭಾಲ್ಕಿ (ದ್ವಿತೀಯ).5,000 ಮೀಟರ್ ಓಟ: ಪೂಜಾ ಗುರುನಾಥ ಬೀದರ್ (ಪ್ರಥಮ) ಮತ್ತು ಸಂತೋಷಿ ರಾಜಕುಮಾರ (ದ್ವಿತೀಯ).4*100 ಮೀಟರ್ ರಿಲೇ: ಭುವನೇಶ್ವರಿ, ಪೂಜಾ, ಶಿವನಂದಾ ಹಾಗೂ ಮೀನಾಕ್ಷಿ (ಪ್ರಥಮ).4*400 ಮೀಟರ್ ರಿಲೇ: ಭುವನೇಶ್ವರಿ, ಪೂಜಾ, ಶಿವನಂದಾ ಮತ್ತು ಮೀನಾಕ್ಷಿ (ಪ್ರಥಮ).  ಬಾಲಕಿಯರ ವಿಭಾಗ (ಗುಂಪು ಸ್ಪರ್ಧೆ): ಕಬಡ್ಡಿ: ಬೀದರ್ ತಂಡ ಪ್ರಥಮ (ತಂಡದ ಸದಸ್ಯರು- ಮಂಜುಳಾ, ತ್ರಿವೇಣಿ, ಸವೀತಾ, ಕಲಾವತಿ, ಸುವರ್ಣಾ, ಜ್ಯೋತಿ, ರೇಣುಕಾ, ಶ್ವೇತಾ, ವಾಣಿ, ಪರಮೇಶ್ವರಿ ಹಾಗೂ ರಾಗಿಣಿ).ಹುಮನಾಬಾದ್ ತಂಡ ದ್ವಿತೀಯ (ತಂಡದ ಸದಸ್ಯರು- ಕರೀಮಾ, ಮಾಲಾಶ್ರೀ, ಶಿಲ್ಪಾರಾಣಿ, ಪೂಜಾ, ವಿಜಯಲಕ್ಷ್ಮಿ, ಅಂಬಿಕಾ, ಜಯಶ್ರೀ, ಗಂಗಮ್ಮಾ, ಪದ್ಮಾವತಿ, ಅಶ್ವಿನಿ, ಅನಸೂಯಾ ಮತ್ತು ರೇಖಾ).     ಮಹಿಳೆಯರ ವಿಭಾಗ (ಗುಂಪು ಸ್ಪರ್ಧೆಗಳ ವಿಭಾಗ):

ಟೇಬಲ್ ಟೆನ್ನಿಸ್: ಬೀದರ್ ತಂಡ ಪ್ರಥಮ (ತಂಡದ ಸದಸ್ಯರು- ಸೌಮ್ಯ, ಸೀಮಾ, ಸೌಮ್ಯದೇವಿ, ದೀಪಿಕಾ ಹಾಗೂ ರಶ್ಮಿ).  ಮಹಿಳೆಯರ ವಿಭಾಗ (ಗುಂಪು ಸ್ಪರ್ಧೆ): ಶಟಲ್ ಬ್ಯಾಡ್ಮಿಂಟನ್: ಬೀದರ್ ತಂಡ ಪ್ರಥಮ (ತಂಡದ ಸದಸ್ಯರು- ರಶ್ಮಿ, ಸುಮತಿ ಜಿ.ಎಂ., ಪ್ರಿಯಂಕಾ, ಪೂಜಾ ಮತ್ತು ದಿವ್ಯ).

Post Comments (+)