ದಸರಾ ಕ್ರೀಡಾಕೂಟ: ಮೈಸೂರು ವಿಭಾಗಕ್ಕೆ ಸಮಗ್ರ ಪ್ರಶಸ್ತಿ

7

ದಸರಾ ಕ್ರೀಡಾಕೂಟ: ಮೈಸೂರು ವಿಭಾಗಕ್ಕೆ ಸಮಗ್ರ ಪ್ರಶಸ್ತಿ

Published:
Updated:
ದಸರಾ ಕ್ರೀಡಾಕೂಟ: ಮೈಸೂರು ವಿಭಾಗಕ್ಕೆ ಸಮಗ್ರ ಪ್ರಶಸ್ತಿ

ಮೈಸೂರು: ಆತಿಥೇಯ ಮೈಸೂರು ವಿಭಾಗದ ತಂಡವು ಬುಧವಾರ ಮುಕ್ತಾಯವಾದ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕಳೆದ ಮೂರು ದಿವಸಗಳಿಂದ ನಡೆದ ಕ್ರೀಡಾಕೂಟದಲ್ಲಿ 133 ಅಂಕಗಳನ್ನು ಗಳಿಸಿದ ಮೈಸೂರು ವಿಭಾಗ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಕಳೆದ ಬಾರಿಯೂ ಮೈಸೂರು ವಿಭಾಗವೇ ಚಾಂಪಿಯನ್ ಆಗಿತ್ತು.ಪುರುಷರ ವಿಭಾಗದಲ್ಲಿ ತಲಾ ಹತ್ತು ಅಂಕಗಳನ್ನು ಗಳಿಸಿದ ಮೈಸೂರಿನ ಸೋನಿತ್ ಮೆಂಡನ್, ಶರತ್‌ರಾಜ್ ಮತ್ತು ಬೆಂಗಳೂರು ನಗರ ತಂಡದ ವಿಶ್ವಂಭರ ವೈಯಕ್ತಿಕ ಪ್ರಶಸ್ತಿಯನ್ನು ಹಂಚಿಕೊಂಡರು. ಮಹಿಳೆಯರ ವಿಭಾಗದ ವೈಯಕ್ತಿಕ ಪ್ರಶಸ್ತಿಗೆ ತಲಾ ಹತ್ತು ಅಂಕ ಗಳಿಸಿದ ಮೈಸೂರಿನ ಬೀಬಿ ಸುಮಯಾ ಮತ್ತು ಬೆಂಗಳೂರು ನಗರದ ಕೆ.ಸಿ. ಶ್ರುತಿ ಪಾಲುದಾರರಾದರು.ಕೊನೆಯ ದಿನ ಐದು ದಾಖಲೆಗಳು:

ಬುಧವಾರ ಮಹಿಳೆಯರ ವಿಭಾಗದಲ್ಲಿ ಐದು ನೂತನ ಕೂಟ ದಾಖಲೆಗಳಾದವು.  ಈ ಎಲ್ಲ ದಾಖಲೆಗಳೂ ಆತಿಥೇಯ ಮೈಸೂರು ತಂಡದ ವನಿತೆಯರಿಂದಲೇ ಆಗಿದ್ದು ವಿಶೇಷ.3000 ಮೀಟರ್ ಓಟದಲ್ಲಿ ತಿಪ್ಪವ್ವ ಸಣ್ಣಕ್ಕಿ (ನೂತನ:10ನಿ,22.7ಸೆ) ಅವರು ಕಳೆದ ವರ್ಷ ಶ್ರದ್ಧಾರಾಣಿ ದೇಸಾಯಿ (ಹಳೆಯದು: 10ನಿ,25.1ಸೆ) ಮಾಡಿದ್ದ ದಾಖಲೆಯನ್ನು ಅಳಿಸಿಹಾಕಿದರು. ಇದೇ ಸಂದರ್ಭದಲ್ಲಿ ಶ್ರದ್ಧಾರಾಣಿ  ಬೆಳ್ಳಿ ಪದಕ ಪಡೆದರು. 400 ಮೀಟರ್ ಓಟದಲ್ಲಿ ರೀನಾ ಜಾರ್ಜ್ (ನೂತನ: 56.50ಸೆ;) 2009ರಲ್ಲಿ ಮೈಸೂರಿನ ಸುಶ್ಮಿತಾ ದಾಸ್ 57.3 ಸೆಕೆಂಡುಗಳಲ್ಲಿ ಮಾಡಿದ್ದ ದಾಖಲೆಯನ್ನು ಮುರಿದರು. ಜಾವೆಲಿನ್ ಥ್ರೋನಲ್ಲಿ ಇದ್ದ 21 ವರ್ಷಗಳ ಹಿಂದೆ ಬಿ.ಎಂ. ಭಾಗೀರಥಿ (43.84ಮೀಟರ್) ಮಾಡಿದ್ದ ಸಾಧನೆಯನ್ನು  ಶಹಜಹಾನಿ (44.25ಮೀಟರ್) ಮೀರಿ ನಿಂತರು.4x100 ಮೀಟರ್ ರಿಲೆಯಲ್ಲಿ 1990ರಲ್ಲಿ ಮೈಸೂರು ತಂಡವು ಮಾಡಿದ್ದ (49.1ಸೆ) ದಾಖಲೆಯನ್ನು ಆತಿಥೇಯ ತಂಡದ ಎಸ್,ಜಿ. ಪ್ರಿಯಾಂಕ, ಎಫ್.ಕೆ. ಅರ್ಚನಾ, ರೀನಾ ಜಾರ್ಜ್, ಸುಪ್ರಿಯಾ ಅಳಿಸಿಹಾಕಿದರು.ವಿಜೇತರಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ ಪಟೇಲ್, ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಪ್ರಶಸ್ತಿ ವಿತರಿಸಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸುರೇಶ್, ದಸರಾ ಕ್ರೀಡೆ ಉಪಸಮಿತಿ ಅಧ್ಯಕ್ಷ ಮೋಹನಕುಮಾರ್, ಉಪಾಧ್ಯಕ್ಷ ಗುರುರಾಜ್ ಮತ್ತಿತರರು ಹಾಜರಿದ್ದರು.

ಫಲಿತಾಂಶಗಳು:ಪುರುಷರು:400 ಮೀಟರ್ ಓಟ: ವಿಶ್ವಂಭರ (ಬೆಂಗಳೂರು ನಗರ)-1, ಕೆ.ಎಸ್. ಜೀವನ್ (ಬೆಂಗಳೂರು ನಗರ)-2, ಗಣೇಶ್ ನಾಯಕ (ಬೆಳಗಾವಿ)-3, ಕಾಲ: 48.7ಸೆ;  5000 ಮೀ: ಬಿ. ರಾಹುಲ್ (ಬೆಂಗಳೂರು ನಗರ)-1, ಎಸ್.ಎಚ್. ಶಿವಾನಂದ (ಬೆಂಗಳೂರು ಗ್ರಾಮಾಂತರ)-2, ಮಹಾಂತೇಶ್ ಕಶ್ವಿ (ಬೆಳಗಾವಿ)-3, ಕಾಲ: 16ನಿ,12.0ಸೆ;

 

4x100 ಮೀ ರಿಲೆ: ಬೆಂಗಳೂರು ನಗರ ವಿಭಾಗ (ಜಿ.ಎನ್. ಬೋಪಣ್ಣ, ಜಗದೀಶ್, ಆದಿತ್ಯ, ವಿಲಾಸ್ ನೀಲಗುಂದ)-1, ಮೈಸೂರು ವಿಭಾಗ (ಸೋನಿತ್ ಮೆಂಡನ್, ಭಾವೇಶ್, ಸಮರ್ಥ, ಅಕ್ಷಯ್ ಎಸ್. ಕುಮಾರ್) -2, ಬೆಂಗಳೂರು ಗ್ರಾಮಾಂತರ ವಿಭಾಗ (ಸುಮಂತ್, ಜೆ. ಅಭಿಷೇಕ್, ಎಂ.ಕೆ. ಸುಮಂತ್ ಮೋಹನಕುಮಾರ್)-3, ಕಾಲ: 42.35ಸೆ;

 

ಟ್ರಿಪಲ್ ಜಂಪ್: ಕಾರ್ಲ ಬ್ರಿಟ್ಟೋ (ಬೆಂಗಳೂರು ನಗರ)-1, ಬಸವರಾಜ ಹಿರೇಮಠ (ಬೆಳಗಾವಿ)-2, ಟಿ.ಎಚ್. ಪ್ರತೀಶ್ (ಮೈಸೂರು)-3, ದೂರ: 14.62ಮೀ:

 

ಜಾವೆಲಿನ್ ಥ್ರೋ: ಶರತ್ ರಾಜ್ (ಮೈಸೂರು)-1, ಪಿ.ಜೆ. ಪುರಂದರ (ಬೆಂಗಳೂರು ನಗರ)-2, ಗಣೇಶಗೌಡ (ಬೆಳಗಾವಿ)-3, ದೂರ: 66.14ಮೀ.ಮಹಿಳೆಯರು: 400 ಮೀಟರ್ ಓಟ: ರೀನಾ ಜಾರ್ಜ್ (ಮೈಸೂರು)-1, ಎಂ.ಜಿ. ಪದ್ಮಿನಿ (ಬೆಂಗಳೂರು ನಗರ)-2, ಆರ್. ಮಹಾಲಕ್ಷ್ಮೀ (ಬೆಂಗಳೂರು ನಗರ)-3, ಕಾಲ: ನೂತನ ದಾಖಲೆ: 56.50ಸೆ, (ಹಳೆಯದು: 57.3ಸೆ);

3000 ಮೀ: ತಿಪ್ಪವ್ವ ಸಣ್ಣಕ್ಕಿ (ಮೈಸೂರು)-1, ಶ್ರದ್ಧಾರಾಣಿ ದೇಸಾಯಿ (ಮೈಸೂರು)-2, ಪ್ರತೀಕ್ಷಾ (ಬೆಂಗಳೂರು ನಗರ)-3 ಕಾಲ: ನೂತನ ದಾಖಲೆ: 10ನಿ,22.70ಸೆ, (ಹಳೆಯದು: 10ನಿ,25.1ಸೆ);4x100 ಮೀ ರಿಲೆ: ಮೈಸೂರು ವಿಭಾಗ (ಎಸ್,ಜಿ. ಪ್ರಿಯಾಂಕ, ಎಫ್.ಕೆ. ಅರ್ಚನಾ, ರೀನಾ ಜಾರ್ಜ್, ಸುಪ್ರಿಯಾ)-1, ಬೆಂಗಳೂರು ನಗರ ವಿಭಾಗ (ಪ್ರಣಿತಾ ಪ್ರದೀಪ್, ಮೇಘನಾ ಶೆಟ್ಟಿ, ಪ್ರಜ್ಞಾ ಪ್ರಕಾಶ್, ವಿವೇಕತಾ ಶೆಟ್ಟಿ) -2, ಬೆಳಗಾವಿ ವಿಭಾಗ (ಮಂಜುಶ್ರೀ, ಸುರೇಖಾ ಪಾಟೀಲ, ಪ್ರತಿಮಾ ಕುಲಕರ್ಣಿ, ಚಂದ್ರವ್ವ) -3, ಕಾಲ: ನೂತನ ದಾಖಲೆ 48.29ಸೆ, (ಹಳೆಯದು: 49.1ಸೆ).

 

ಟ್ರಿಪಲ್ ಜಂಪ್: ಜಾಯಲಿನ್ ಲೋಬೋ (ಬೆಂಗಳೂರು ನಗರ)-1, ಸುರೇಖಾ ಜೆ. ಪಾಟೀಲ (ಬೆಳಗಾವಿ)-2, ಎಸ್. ಚಂದ್ರಿಕಾ (ಬೆಳಗಾವಿ)-3, ದೂರ: 12 ಮೀಟರ್.

 

ಜಾವೆಲಿನ್ ಥ್ರೋ:  ಶಹಜಹಾನಿ (ಮೈಸೂರು)-1, ಆರ್.ಎ. ಮಂಜುಶ್ರೀ (ಬೆಳಗಾವಿ)-2, ಪವಿತ್ರ (ಮೈಸೂರು)-3, ದೂರ: ನೂತನ ದಾಖಲೆ: 44.25ಮೀ (ಹಳೆಯದು: 43.84ಮೀ).ಸಮಗ್ರ ಪ್ರಶಸ್ತಿ: ಮೈಸೂರು ವಿಭಾಗ (133 ಅಂಕಗಳು): ವೈಯಕ್ತಿಕ ಪ್ರಶಸ್ತಿ: ಪುರುಷರು: ಸೋನಿತ್ ಮೆಂಡನ್ (ಮೈಸೂರು; 10 ಅಂಕ), ವಿಶ್ವಂಭರ (ಬೆಂಗಳೂರು ನಗರ; 10 ಅಂಕ), ಶರತ್‌ರಾಜ್ (ಮೈಸೂರು; 10 ಅಂಕ).

ಮಹಿಳೆಯರು: ಬೀಬಿ ಸುಮಯಾ (ಮೈಸೂರು; 10 ಅಂಕ), ಕೆ.ಸಿ. ಶ್ರುತಿ (ಬೆಂಗಳೂರುನಗರ, 10 ಅಂಕ).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry