ದಸರಾ ಕ್ರೀಡಾಕೂಟ: ವಿಜಯ್ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರಶಸ್ತಿ

7

ದಸರಾ ಕ್ರೀಡಾಕೂಟ: ವಿಜಯ್ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರಶಸ್ತಿ

Published:
Updated:

ಹುನಗುಂದ: ನಗರದ ಸರ್ಕಾರಿ ಡಿಇಡಿ ಕಾಲೇಜು ಮೈದಾನದಲ್ಲಿ ನಡೆದ ಪುರುಷರ ಖೋ ಖೋ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಗರದ ವಿಜಯ್ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಜಿಲ್ಲಾ ಕುಸ್ತಿ ತರಬೇತಿದಾರ ರಾಜು ಫಳಕೆ ಬಹುಮಾನ ವಿತರಿಸಿದರು.ಫೈನಲ್ ಪಂದ್ಯ ಹುನಗುಂದ ವಿಜಯ್ ಸ್ಪೋರ್ಟ್ಸ್ ಕ್ಲಬ್ ಮತ್ತು ಅಮರಾವತಿ ಅಮರ್ ಸ್ಪೋರ್ಟ್ಸ್ ಕ್ಲಬ್ ಮಧ್ಯೆ ನಡೆಯಿತು.ಹುನಗುಂದ ತಂಡ 18 ಪಾಯಿಂಟ್ ಪಡೆಯುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.ಸೂಳೇಭಾವಿ, ಚಿಕ್ಕಯರನಕೇರಿ, ಹುನಗುಂದ ಮತ್ತು ಅಮರಾವತಿಯ ಎಂಟು ತಂಡಗಳು ಪಾಲ್ಗೊಂಡಿದ್ದವು.ಅಂತರರಾಷ್ಟ್ರೀಯ ಪ್ರಶಸ್ತಿ

ಮುಧೋಳ:
  ಪಟ್ಟಣದ ಸ್ಯಾಮುವೆಲ್ ಆಂಗ್ಲ ಮಾಧ್ಯಮ  ಶಾಲೆಯ 6 ನೇ ವರ್ಗದ ವಿದ್ಯಾರ್ಥಿ  ಮೇಘಾ ಜೈನರ ಅವರಿಗೆ ಪ್ರಬಂಧ ಸ್ಪರ್ಧೆಯಲ್ಲಿ ರಾಯಲ್ ಕಾಮನ್ ವೆಲ್ತ್ ಫೆಡರೇಷನ್ ಲಂಡನ್ ಅವರಿಂದ ಕಂಚಿನ ಪದಕ ಲಭಿಸಿದೆ.ದೇಶದ 55 ದೇಶಗಳ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನ.30 ರಂದು ಲಂಡನ್‌ನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿಜಯಕುಮಾರ ತೇಗೂರ ತಿಳಿಸಿದ್ದಾರೆ.   ಶಾಲೆಯ ಜಾಯ್ಸ ಎಂಬ ಶಿಕ್ಷಕರು ಈ ವಿದ್ಯಾರ್ಥಿಗೆ ತರಬೇತಿ ನೀಡಿದ್ದರು. ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry