ದಸರಾ: ಗಜಪಡೆಯ 2ನೇ ತಂಡ ಆಗಮನ

6

ದಸರಾ: ಗಜಪಡೆಯ 2ನೇ ತಂಡ ಆಗಮನ

Published:
Updated:
ದಸರಾ: ಗಜಪಡೆಯ 2ನೇ ತಂಡ ಆಗಮನ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆ ಎರಡನೇ ತಂಡ ಮಂಗಳವಾರ ಅರಮನೆಗೆ ಆಗಮಿಸಿತು.

‘ಶ್ರೀರಾಮ’, ‘ವಿಜಯ’, ‘ವಿಕ್ರಮ’, ‘ಹರ್ಷ’, ‘ಗೋಪಾಲ ಸ್ವಾಮಿ’, ‘ದುರ್ಗಾಪರಮೇಶ್ವರಿ’, ‘ಗೋಪಿ’ ಮತ್ತು ‘ಪ್ರಶಾಂತ’ ಸೇರಿ 8 ಆನೆಗಳು ಎರಡನೇ ತಂಡದಲ್ಲಿ ಬಂದವು. ಶಾಸಕ ಎಂ.ಕೆ. ಸೋಮಶೇಖರ್‌, ಆರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ರವಿ ಸುಬ್ರಹ್ಮಣ್ಯ ಅವರು ಸಾಂಪ್ರದಾ ಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆನೆಗಳನ್ನು ಬರಮಾಡಿ ಕೊಂಡರು. ಆನೆಗಳೊಟ್ಟಿಗೆ ಮಾವುತರ ಕುಟುಂಬಗಳೂ ಬಂದವು.55ರ ವಯೋಮಾನದ ‘ಶ್ರೀರಾಮ’ನನ್ನು ಕೆ. ಗುಡಿ ಆನೆ ಶಿಬಿರದಿಂದ ಕರೆತರಲಾಗಿದ್ದು, 1969ರಲ್ಲಿ ಕೊಡಗು ಜಿಲ್ಲೆಯ ತಿತಿಮತಿ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 16 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದೆ.56ರ ವಯೋಮಾನದ ಹೆಣ್ಣಾನೆ ‘ವಿಜಯ’ಳನ್ನು ದುಬಾರೆ ಆನೆ ಶಿಬಿರದಿಂದ ಕರೆತರಲಾಗಿದೆ. 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, 9 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದೆ.40 ವರ್ಷದ ‘ವಿಕ್ರಮ’ ದುಬಾರೆ ಆನೆ ಶಿಬಿರದಲ್ಲಿ ಇತ್ತು. 1990ರಲ್ಲಿ ದೊಡ್ಡಬೆಟ್ಟ ಅರಣ್ಯದಲ್ಲಿ ಸೆರೆ ಹಿಡಿಯಲಾಗಿದೆ. 9 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ‘ಹರ್ಷ’ ದುಬಾರೆ ಆನೆ ಶಿಬಿರದಲ್ಲಿ ಬೀಡು ಬಿಟ್ಟಿತ್ತು. 46 ವರ್ಷದ ಈ ಆನೆಯನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. 11 ಬಾರಿ ದಸರಾದಲ್ಲಿ ಪಾಲ್ಗೊಂಡ ಅನುಭವ ಇದಕ್ಕಿದೆ.57ರ ವಯೋಮಾನದ ‘ಪ್ರಶಾಂತ’ ದುಬಾರೆ ಆನೆ ಶಿಬಿರದಲ್ಲಿ ಇತ್ತು. 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕಿತ್ತು. 7 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.ದುಬಾರೆ ಆನೆ ಶಿಬಿರದಿಂದ ‘ಪ್ರಶಾಂತ’ನನ್ನು ಕರೆತರಲಾಗಿದ್ದು, ಇದಕ್ಕೆ 31ರ ಹರೆಯ. 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಮೂರು ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದೆ.‘ಗೋಪಾಲಸ್ವಾಮಿ’ಗೆ 31 ವರ್ಷ. ತಿತಿಮತಿ ಆನೆ ಶಿಬಿರದಲ್ಲಿ ಇತ್ತು. 2009ರಲ್ಲಿ ಹಾಸನ ಜಿಲ್ಲೆ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆಹಿಡಿಯಲಾಯಿತು. ಕಳೆದ ಎರಡು ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದೆ.46ರ ವಯೋಮಾನದ ‘ದುರ್ಗಾಪರಮೇಶ್ವರಿ’ ಹೆಣ್ಣಾನೆಯನ್ನು 1972ರಲ್ಲಿ ಮಡಿಕೇರಿಯ ದುಬಾರೆ ಆನೆ ಶಿಬಿರದಲ್ಲಿ ಸೆರೆ ಹಿಡಿಯಲಾಗಿತ್ತು. ಮೊದಲನೇ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ.ಮೊದಲ ತಂಡದಲ್ಲಿ ‘ಅರ್ಜುನ’, ‘ಬಲರಾಮ’, ‘ಅಭಿಮನ್ಯು’, ‘ಗಜೇಂದ್ರ’, ‘ಸರಳಾ’ ಮತ್ತು ‘ವರಲಕ್ಷ್ಮಿ’ 6 ಆನೆಗಳು ಬಂದಿದ್ದವು.

ಎರಡನೇ ತಂಡದಲ್ಲಿ 8 ಆನೆಗಳು ಸೇರಿದಂತೆ ಒಟ್ಟು 14 ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು ದಸರಾ ಸಮೀಪಿಸುತ್ತಿದ್ದಂತೆ ಜನಾಕರ್ಷಣೆಯ ಕೇಂದ್ರಬಿಂದುಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry