ಮಂಗಳವಾರ, ಮಾರ್ಚ್ 9, 2021
23 °C

ದಸರಾ ಮಹೋತ್ಸವಕ್ಕೆ ಗಜೇಂದ್ರ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಸರಾ ಮಹೋತ್ಸವಕ್ಕೆ ಗಜೇಂದ್ರ ಖಚಿತ

ಮೈಸೂರು: ಈ  ಬಾರಿ ದಸರಾ ಮಹೋತ್ಸವದಲ್ಲಿ ‘ಗಜೇಂದ್ರ’ ಆನೆ ಪಾಲ್ಗೊಳ್ಳುವುದು ನಿಶ್ಚಯವಾಗಿದೆ. ಆ. 21ರಂದು ಚಾಮರಾಜನಗರದ ಕೆ.ಗುಡಿ ಆನೆ ಶಿಬಿರದಿಂದ ಪ್ರಯಾಣ ಬೆಳೆಸಲಿದೆ. ಅಂದೇ ನಗರಕ್ಕೆ ಬರಲಿದೆ.ಆಕ್ರಮಣಕಾರಿ ಪ್ರವೃತ್ತಿಯಿಂದ ಗಜೇಂದ್ರನನ್ನು ಕಳೆದ ವರ್ಷ ದಸರಾ ಮಹೋತ್ಸವದಿಂದ ದೂರ ಇಡಲಾಗಿತ್ತು. ಒಟ್ಟು 14 ಬಾರಿ ದಸರೆಯಲ್ಲಿ ಪಾಲ್ಗೊಂಡಿದ್ದ ಗಜೇಂದ್ರನಿಗೆ ಹಲವು ಬಾರಿ ಪಟ್ಟದ ಆನೆಯ ಗೌರವವನ್ನೂ ನೀಡಲಾಗಿತ್ತು.ಏಕೆ ದೂರ?: 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದ ಗಜೇಂದ್ರ ಆನೆಗೆ ಚಾಮರಾಜನಗರ ಕೆ.ಗುಡಿ ಶಿಬಿರದಲ್ಲಿದ್ದಾಗ ಕಳೆದ ವರ್ಷ ಮಾರ್ಚಿ ತಿಂಗಳಲ್ಲಿ ಮದವೇರಿತ್ತು. ಆಗ ಕಾವಾಡಿ ಗಣಪತಿ ಮತ್ತು ಶ್ರೀರಾಮ ಎಂಬ ಆನೆಯನ್ನು ಕೊಂದುಹಾಕಿತ್ತು. ಇದರಿಂದ ವಿಚಲಿತರಾದ ಅರಣ್ಯಾಧಿಕಾರಿಗಳು ಕಳೆದ ವರ್ಷದ ದಸರೆಯಿಂದ ದೂರ ಇಟ್ಟಿ ದ್ದರು. ಇದೀಗ ಮತ್ತೆ ಗಜೇಂದ್ರನ ಗಜನಡಿಗೆ ಆರಂಭವಾಗಲಿದೆ.ಅಪಾಯವಿಲ್ಲ: ಎಲ್ಲಾ ಗಂಡಾನೆಗಳಿಗೂ ಆಗುವ ರೀತಿಯಲ್ಲಿಯೇ ಗಜೇಂದ್ರನಿಗೂ ಕಳೆದ ವರ್ಷ ಮದವೇರಿತ್ತು. ಆಗ ಜತೆಗಿದ್ದ ಮತ್ತೊಂದು ಆನೆ ಶ್ರೀರಾಮನ ಜತೆ ಕಾಳಗಕ್ಕೆ ಇಳಿದಿತ್ತು. ಇದನ್ನರಿಯದೆ ಮೇವು ನೀಡಲು ಮುಂದಾದ ಕಾವಾಡಿ ಬಲಿಯಾಗಬೇಕಾಯಿತು. ಈಗ ಗಜೇಂದ್ರ ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ಆಪಾಯ ಉಂಟಾಗುವುದಿಲ್ಲ ಎಂದು ಅರಣ್ಯಾಧಿಕಾರಿಗಳು ಭರವಸೆ ನೀಡುತ್ತಾರೆ.ಯಾವ ಆನೆ, ಎಲ್ಲಿಂದ?: 12 ಆನೆಗಳ ಪೈಕಿ 6 ಆನೆಗಳು ಮೊದಲ ಹಂತದಲ್ಲಿ ಬರಲಿವೆ. ಮತ್ತಿಗೂಡು ಶಿಬಿರದಿಂದ ಬಲರಾಮ, ಅಭಿಮನ್ಯು, ದುಬಾರೆಯಿಂದ ವಿಜಯಾ, ಕಾವೇರಿ, ಬಳ್ಳೆ ಶಿಬಿರದಿಂದ ಅರ್ಜುನ ಹಾಗೂ ಕೆ.ಗುಡಿಯಿಂದ ಗಜೇಂದ್ರ ಬರಲಿದೆ. ನಂತರ, ಎರಡನೇ ಹಂತದಲ್ಲಿ ಮತ್ತಿಗೂಡುವಿನಿಂದ ಗೋಪಾಲಸ್ವಾಮಿ, ಕೆ.ಗುಡಿಯಿಂದ ದುರ್ಗಾಪರಮೇಶ್ವರಿ, ದುಬಾರೆಯಿಂದ ವಿಕ್ರಮ್, ಹರ್ಷಾ, ಗೋಪಿ, ಪ್ರಶಾಂತ ಬರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.