ದಸರಾ ಮೆರುಗಿಗೆ ಕುಂದು ಬೇಡ

7

ದಸರಾ ಮೆರುಗಿಗೆ ಕುಂದು ಬೇಡ

Published:
Updated:

ಮೈಸೂರು ದಸರಾಕ್ಕೆ ಮೆರುಗು ತಂದುಕೊಡುವುದೇ ಆನೆ ಮೇಲಿನ ಚಿನ್ನದ ಅಂಬಾರಿಯ ಮೆರವಣಿಗೆ. ಈ ಕುರಿತು ಎದ್ದಿರುವ ವಿರೋಧ ಅತಿ ನಾಸ್ತಿಕತೆಯ ಸಂಕೇತವಷ್ಟೇ. ಮೆರವಣಿಗೆಯನ್ನು ವೀಕ್ಷಿಸಿದ ಯಾರಿಗಾದರೂ ಅಂಬಾರಿ, ಆನೆಗೆ ಭಾರ ಅನಿಸುವುದಿಲ್ಲ ಎಂಬುದು ಮನವರಿಕೆಯಾಗುತ್ತದೆ. ಗಜಪಡೆಯ ಗಾಂಭೀರ್ಯಕ್ಕೆ ಸಂದ ಗೌರವ ಎನಿಸುತ್ತದೆ.ಶಕ್ತಿಶಾಲಿ ಆನೆಗೆ 750 ಕೆ.ಜಿ ತೂಕದ ಅಂಬಾರಿ ಹೊರುವುದು ಹಿಂಸೆ ಆಗಲಾರದು. ಅದು ಆನೆಯ ಶಕ್ತಿಸಾಮರ್ಥ್ಯಕ್ಕೆ ಸಲ್ಲುವ ಗೌರವವೆಂದೇ ಹೇಳಬಹುದು. ಪರಂಪರೆಯ ಒಳ್ಳೆಯ ಅಂಶಗಳನ್ನು ಗೌರವಿಸೋಣ. ಎಲ್ಲದಕ್ಕೂ ಕ್ಯಾತೆ ತೆಗೆದರೆ ಕೊನೆಗೆ ಉಳಿಯುವುದಾದರೂ ಏನು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry