ದಸರಾ: ಶ್ರೀಕಂಠದತ್ತ ಒಡೆಯರ್‌ಗೆ ರೂ. 25 ಲಕ್ಷ ಗೌರವಧನ?

7

ದಸರಾ: ಶ್ರೀಕಂಠದತ್ತ ಒಡೆಯರ್‌ಗೆ ರೂ. 25 ಲಕ್ಷ ಗೌರವಧನ?

Published:
Updated:

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸುವ ರಾಜವಂಶಸ್ಥ ಶ್ರೀಕಂಠ­ದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ನೀಡುವ ಗೌರವಧನವನ್ನು ಈ ಬಾರಿ ರೂ. 25 ಲಕ್ಷ ಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ.ಕಳೆದ ವರ್ಷ ರೂ. 20 ಲಕ್ಷ ನೀಡ­ಲಾಗಿತ್ತು. ಈ ಬಾರಿ ಯೂ ರೂ. 20 ಲಕ್ಷ ನೀಡಲು ದಸರಾ ಮಹೋತ್ಸವ ಸಮಿತಿ ನಿರ್ಧರಿಸಿತ್ತು. ‘ಆದರೆ ರಾಜ ವಂಶಸ್ಥ­ರಾದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಆರ್ಥಿಕವಾಗಿ ತೊಂದರೆ­ಯಲ್ಲಿ ಇರುವುದರಿಂದ ಈ ಬಾರಿ ರೂ. 25 ಲಕ್ಷ ನೀಡಬೇಕೆಂದು ಅಂದುಕೊಂಡಿ­ದ್ದೇವೆ. ಈ ಕುರಿತು ಸೆ. 20ರಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವ­ರೊಂದಿಗೆ ಚರ್ಚಿಸಿ ಪ್ರಕಟಿಸುತ್ತೇವೆ’ ಎಂದು ಜಿಲ್ಲಾ ಉಸ್ತು ವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಗುರುವಾರ ತಿಳಿಸಿದರು.‘ಸೆ. 20ರಂದು ಸಂಜೆ 3.50 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರನ್ನು ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಆಹ್ವಾನಿಸ ಲಾಗುತ್ತದೆ. ರಾತ್ರಿ 9 ಗಂಟೆಗೆ ದಸರಾ ಮಹೋ ತ್ಸವ ಉದ್ಘಾಟಿ­ಸಲು  ಸಾಹಿತಿ ಡಾ.­ಚಂದ್ರಶೇಖರ ಕಂಬಾರ ಅವರನ್ನು ಆಹ್ವಾನಿಸಲಾಗುತ್ತದೆ.  ಸೆ. 21ರಂದು ಬೆಳಿಗ್ಗೆ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್ ಅವರನ್ನು ಆಹ್ವಾನಿ­ಸುತ್ತೇವೆ. ಈ ಸಂದರ್ಭದಲ್ಲಿ ಮೈಸೂರು ಪಾಲಿಕೆ ಮೇಯರ್‌ ಎನ್‌.ಎಂ. ರಾಜೇಶ್ವರಿ, ಜಿಲ್ಲಾಧಿಕಾರಿ ಸಿ. ಶಿಖಾ ಮೊದಲಾದವರು ಹಾಜರಿರುತ್ತಾರೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry