ದಸರಾ ಸರಳವಾಗಿರಲಿ

7

ದಸರಾ ಸರಳವಾಗಿರಲಿ

Published:
Updated:

ರಾಜ್ಯ ಬರದಿಂದ ತತ್ತರಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ  ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಕಾವೇರಿ ನೀರಿನ ಬಗೆಗೆ ತಗಾದೆ ಎದ್ದಿದೆ. ಈ ಕಠಿಣ ಪರಿಸ್ಥಿತಿಯನ್ನು ರಾಜ್ಯ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಮೈಸೂರು ದಸರಾವನ್ನು ವೈಭವಯುತವಾಗಿ ಆಚರಿಸುವುದು ಸಲ್ಲದು.ಸಾಂಪ್ರದಾಯಿಕವಾಗಿ ಜಂಬೂಸವಾರಿ, ಇತರ ಧಾರ್ಮಿಕ ವಿಧಿಗಳನ್ನು ಸರಳವಾಗಿ ನಡೆಸಬೇಕು. ಮಕ್ಕಳ ದಸರಾ, ಗ್ರಾಮೀಣ ದಸರಾ, ವಿದ್ವತ್ ಗೋಷ್ಠಿ, ಕವಿಗೋಷ್ಠಿ, ಯುವ ಸಂಭ್ರಮ ಮುಂತಾದ ಕಾರ್ಯಕ್ರಮಗಳನ್ನು ರದ್ದು ಮಾಡುವುದು ಒಳ್ಳೆಯದು. ಮೈಸೂರು ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಲ್ಲ ಎನ್ನುವುದು ನೆನಪಿರಲಿ. 

    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry