ಶನಿವಾರ, ಮೇ 15, 2021
25 °C

ದಸರಾ ಸಾಹಸ ಕ್ರೀಡೆಗಳು 29ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಮಹೋತ್ಸವದ ಸಾಹಸ ಕ್ರೀಡಾ ಉಪಸಮಿತಿ ಆಶ್ರಯದಲ್ಲಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 4ರವರೆಗೆ  ಸಾಹಸ ಕ್ರೀಡೆಗಳು ನಡೆಯಲಿವೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಸಮಿತಿ ಕಾರ್ಯಾಧ್ಯಕ್ಷ ಎಂ.ಎನ್. ನಟರಾಜ್,  `ಕ್ರೀಡಾಪಟುಗಳಿಗೆ ಯಾವುದೇ ಅಪಾಯವಾಗದಂತೆ ಎಲ್ಲ ಮುಂಜಾಗ್ರತೆಗಳನ್ನೂ ಕೈಗೊಳ್ಳಲಾಗಿದೆ. ಅಲ್ಲದೇ ಅವರಿಗೆ ಗುಂಪು ವಿಮೆ ಮಾಡಿಸಲಾಗಿದೆ. ಜಲ ಸಾಹಸ ಕ್ರೀಡೆಗಳು, ಪ್ಯಾರಾ ಸೈಲಿಂಗ್, ಹಾಟ್ ಏರ್ ಬಲೂನಿಂಗ್, ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಹತ್ತುವ ಸ್ಪರ್ಧೆ, ಜಾರ್‌ಬಿಂಗ್, ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಮುಕ್ತ ಸೈಕ್ಲಿಂಗ್, ಕೃತಕ ಗೋಡೆ ಹತ್ತುವ ತರಬೇತಿ, ಸೈಕಲ್ ಪೋಲೋ, ಡರ್ಟ್ ಟ್ರ್ಯಾಕ್ ಮೋಟಾರ್ ಸೈಕಲ್ ರೇಸ್‌ಗಳು ನಡೆಯಲಿವೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ (ಜೇತನಾ) ಸಹಯೋಗ ನೀಡಲಿದೆ~ ಎಂದು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.