ದಸರಾ ಸಿದ್ಧತೆ ಪೂರ್ಣ

7

ದಸರಾ ಸಿದ್ಧತೆ ಪೂರ್ಣ

Published:
Updated:

ಮೈಸೂರು: `ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ದಸರಾ ಸಿದ್ಧತೆಗಳು ಪೂರ್ಣಗೊಂಡಿವೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.`ಚಾಮುಂಡಿಬೆಟ್ಟದಲ್ಲಿ ಬೆಳಿಗ್ಗೆ 5 ಗಂಟೆಗೆ ಭಜನೆ ಆರಂಭವಾಗಲಿದೆ. ದಕ್ಷಿಣ ಭಾರತದ ಐದು ರಾಜ್ಯಗಳು ಸೇರಿದಂತೆ ನೂರಾರು ಮಹಿಳೆಯರು ಭಜನೆ ಮಾಡುವರು. ಬೆಳಿಗ್ಗೆ 10.42 ಗಂಟೆಗೆ ಬಿಜಾ ಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ~ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ಜಿಲ್ಲಾ ಎಸ್ಪಿ     ಆರ್.ದಿಲೀಪ್ ಇದ್ದರು.ಇನ್ನುಳಿದ ವಿವರ ಹೀಗಿವೆ:

* ನಗರದ 18 ಉದ್ಯಾನಗಳಲ್ಲಿ 60 ಪ್ರಶಸ್ತಿ ವಿಜೇತ ಚಿತ್ರಗಳು ಸೇರಿದಂತೆ ಒಟ್ಟು 110 ಚಿತ್ರಗಳ ಪ್ರದರ್ಶನ.* ರಾಷ್ಟ್ರಮಟ್ಟದ ಕುಸ್ತಿಯಲ್ಲಿ 100 ಪುರುಷರು, 60 ಮಹಿಳೆಯರು, ರಾಜ್ಯಮಟ್ಟದ ನಾಡಕುಸ್ತಿಯಲ್ಲಿ 120 ಪುರುಷರು, ಪಾಯಿಂಟ್ ಕುಸ್ತಿಯಲ್ಲಿ 150 ಪುರುಷರು ಹಾಗೂ 70 ಮಹಿಳೆಯರು ಭಾಗಿ.* ಎಲ್ಲ ವೃತ್ತಗಳಲ್ಲಿ ದೀಪಾಲಂಕಾರ. ಎಲ್‌ಇಡಿ ಬಲ್ಬ್‌ಗಳ ಬಳಕೆ. ಓಂ, ತ್ರಿಶೂಲ, ಸ್ವಾಮಿ ವಿವೇಕಾನಂದ, ಸರ್ ಎಂ.ವಿಶ್ವೇಶ್ವರಯ್ಯ, ಮಹಾರಾಜರ ಚಿತ್ರಗಳ ದೀಪಾಲಂಕಾರ.* ಲಲಿತಮಹಲ್ ಹೆಲಿಪ್ಯಾಡ್ ಆವರಣದಲ್ಲಿ ವಾಯು ಕ್ರೀಡೆ.* ಅ. 19ರಂದು ಕೋತಿ ರಾಮನಿಂದ ಬ್ರಿಗೇಡ್ ಹೊರೈಜನ್ ಕಟ್ಟಡ ಏರುವ ಸಾಹಸ.* ಎಂ.ಆರ್.ಶ್ರೀನಿವಾಸ್ ಅವರಿಂದ ವಿದ್ವತ್‌ಗೋಷ್ಠಿ ಉದ್ಘಾಟನೆ. 250 ಮಂದಿ ಸಂಶೋಧನಾ ವಿದ್ಯಾರ್ಥಿಗಳು ಭಾಗಿ.* ಯುವ ಸಂಭ್ರಮ- 130 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.* ರೂ. 5.5 ಕೋಟಿ ಪೈಕಿ ರಸ್ತೆ ಕಾಮಗಾರಿಗಳಿಗೆ ರೂ. 2.5 ಕೋಟಿ ಬಳಕೆ. 21 ಕಾಮಗಾರಿ ಪೂರ್ಣ.* ಅ. 22 ರಂದು ಕಬಿನಿ ನೀರು ಪೂರೈಕೆ. 60 ಎಂಎಲ್‌ಡಿ ನೀರು ಲಭ್ಯ.* ಉದ್ಯಾನ ಸೇವಾ ಕೇಂದ್ರ ಆರಂಭ. ಉದ್ಯಾನ ಪ್ರಿಯರಿಗೆ ಸಲಹೆ, ಸೂಚನೆ, ಪರಿಕರ ವಿತರಣೆ. ಮಾಹಿತಿಗೆ ದೂ. 0821-2438572.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry