ಭಾನುವಾರ, ಮೇ 22, 2022
28 °C

ದಸರಾ ಹಬ್ಬಕ್ಕೆ ಶಂಕ್ರನ ಹಾಡುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್.ಸುರೇಶ್ ನಿರ್ಮಿಸುತ್ತಿರುವ ‘ಶಂಕ್ರ’ ಚಿತ್ರದ ಹಾಡುಗಳ ಧ್ವನಿಮುದ್ರಣ ದಸರೆಯ ಶುಭ ಸಂದರ್ಭದಲ್ಲಿ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಆರಂಭವಾಯಿತು. ಸಾರಕ್ಕಿ ಮಂಜು ರಚನೆಯ ‘ಅಕ್ಷರವಿರದ ಭಾಷೆ ಇದು ಅಧರಗಳು ಆಳುವ ದೇಶವಿದು’ ಎಂಬ ಗೀತೆಯನ್ನು ಸಂಗೀತ ನಿರ್ದೇಶಕ ರಾಜ ಈ ಸಂದರ್ಭದಲ್ಲಿ ಧ್ವನಿಮುದ್ರಿಸಿಕೊಂಡರು. ರಾಜೇಶ್‌ಕೃಷ್ಣನ್ ಮತ್ತು ಶಮಿತಾ ಮಲ್ನಾಡ್ ಈ ಗೀತೆಯನ್ನು ಹಾಡಿದ್ದಾರೆ. ಆರ್.ಮಾಲತೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ತಿರುಮಲರಾವ್ ಅವರ ಛಾಯಾಗ್ರಹಣವಿದೆ. ನವೀನ್‌ಕೃಷ್ಣ ನಾಯಕನಾಗಿ ನಟಿಸುತ್ತಿರುವ ‘ಶಂಕ್ರ’ ಚಿತ್ರಕ್ಕೆ ಲಿಂಗರಾಜ್ ಸಂಕಲನ, ಸಾರಕ್ಕಿ ಮಂಜು ಸಂಭಾಷಣೆ, ಹ್ಯಾರಿಸ್‌ಡ್ಯಾನಿ ಸಾಹಸ, ಪಾಪಣ್ಣ ನಿರ್ಮಾಣ ನಿರ್ವಹಣೆ ಹಾಗೂ ಕೊಟ್ರೇಶ್ ಅವರ ನಿರ್ಮಾಣ ಸಾರಥ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.