ಮಂಗಳವಾರ, ಮೇ 24, 2022
30 °C

ದಸರೆಯ ಸಡಗರದಲ್ಲಿ ಮಿಂದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ತಾಲ್ಲೂಕಿನಾದ್ಯಂತ  ದಸರಾ ಮಹೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು.

ನವರಾತ್ರಿ ಉತ್ಸವದ ಅಂಗವಾಗಿ ನೇತೇನಹಳ್ಳಿನೇತೇನಹಳ್ಳಿ ಬಳಿ  ಚಾಮುಂಡೇಶ್ವರಿ ಅಮ್ಮನವರ ಉತ್ಸವ ನಡೆಸಿ, ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಪ್ರಧಾನ ಅರ್ಚಕ ರವಿ ಬನ್ನಿ ಮರಕ್ಕೆ ಪೂಜೆ ನೆರವೇರಿಸಿದರು.ದೇವಿಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು. ಹೊಂಬಾಳಮ್ಮನಪೇಟೆ, ಮಾಗಡಿ, ತಿರುಮಲೆ ಮುಖ್ಯರಸ್ತೆಗಳಲ್ಲಿ ಚಾಮುಂಡೇಶ್ವರಿ ದೇವಿಯ ಅಲಂಕೃತ ಉತ್ಸವಮೂರ್ತಿಯ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.ಪೂಜಾ ಕುಣಿತ, ಮಕ್ಕಳ ಕೋಲಾಟ ವಾದ್ಯವೃಂದದ ನಡುವೆ ದೇವಿಯ ಮೆರವಣಿಗೆ ವೈಭವದಿಂದ ನಡೆಯಿತು. ದೇವಾಲಯ ಸಂಸ್ಥಾಪಕಿ ಕಮಲಮ್ಮ, ವಾಣಿಜಯಸಿಂಹ, ಜಯರಾಮ್, ನೇತೇನಹಳ್ಳಿ ಗಣಪತಿ ದೇವಾಲಯದ ವ್ಯವಸ್ಥಾಪಕ ಯಾಲಕ್ಕಯ್ಯ ಇತರರು ಭಾಗವಹಿಸಿದ್ದರು. ಬೆಂಗಳೂರಿನ ಕಾಮಾಕ್ಷಿಪಾಳ್ಯ, ಶಿವನಗರ, ಸುಂಕದಕಟ್ಟೆ, ವೃಷಭಾವತಿ ನಗರ, ಸುತ್ತಮುತ್ತಲ ಸಹಸ್ರಾರು ಜನರು ಚಾಮುಂಡೇಶ್ವರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.ದಸರಾ ಮಹೋತ್ಸವ: ತಾಲ್ಲೂಕಿನ ಶ್ರೀಪತಿಹಳ್ಳಿ ದೇವರಹಟ್ಟಿ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ದಸರಾ ಹಬ್ಬದ ಅಂಗವಾಗಿ ವಿಶೇಷ ಪೂಜೆ ನೆರವೇರಿತು.ಸಾವನದುರ್ಗದ ಲಕ್ಷ್ಮಿನರಸಿಂಹಸ್ವಾಮಿ, ಕಲ್ಲೂರಿನ ಆಂಜನೇಯಸ್ವಾಮಿ, ಮೋಟಗೊಂಡನಹಳ್ಳಿಯ ಚಂದ್ರಮೌಳೇಶ್ವರ, ಹೊಸಪೇಟೆಯ ಜಲಗೇರಮ್ಮ, ತಿರುಮಲೆಯ ಮುಳಕಟ್ಟಮ್ಮದೇವಿ, ಕುದೂರಿನ ಲಕ್ಷ್ಮೀದೇವಿಅಮ್ಮನವರು, ಕೆಂಚನಹಳ್ಳಿ ಲಕ್ಷ್ಮಿದೇವಿ ಅಮ್ಮನವರು, ಪಟ್ಟಣದ ಕಾಳಿಕಾಂಬ, ತಿರುಮಲೆಯ ರಂಗನಾಥಸ್ವಾಮಿಯ ಬೇಟೆರಾಯ ಉತ್ಸವ, ಬನ್ನಿಮಂಟಪದ ಬಳಿ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ನಿರಂಜನಬಾಬು ಬನ್ನಿ ಪೂಜೆ ನೇರವೇರಿಸಿದರು. ತಾಲ್ಲೂಕಿನಾದ್ಯಂತ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜೆ, ಅಲಂಕಾರ, ಉತ್ಸವಾದಿಗಳನ್ನು ಏರ್ಪಡಿಸಲಾಗಿತ್ತು.ಪಟ್ಟಣದ ಕಾಳಿಕಾಂಬ ಅಮ್ಮನವರ ದುರ್ಗಾ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ವಿಜಯದಶಮಿ ಉತ್ಸವ, ಶಮೀಪೂಜಾ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.ಪುರಸಭಾ ಸದಸ್ಯ ಎನ್.ಗಂಗಯ್ಯ ಮತ್ತು ಚಿಕ್ಕಣ್ಣ ಉಯ್ಯಾಲೆ ಉತ್ಸವಕ್ಕೆ ಚಾಲನೆ ನೀಡಿದರು. ಕಾಳಿಕಾಂಬಾ ಅಮ್ಮನವರಿಗೆ ಮಹಿಷಾಸುರ ಮರ್ದಿನಿ ಅಲಂಕಾರ ಏರ್ಪಡಿಸಲಾಗಿತ್ತು. ಪಟ್ಟಣದ ಭಕ್ತರೆಲ್ಲರೂ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.