ಬುಧವಾರ, ಅಕ್ಟೋಬರ್ 16, 2019
22 °C

ದಾಂಪತ್ಯಕ್ಕೆ 86ರ ಸಂಭ್ರಮ!

Published:
Updated:

ಲಂಡನ್ (ಪಿಟಿಐ): ಇಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಜೋಡಿಗೆ ಶನಿವಾರ ಇನ್ನಿಲ್ಲದ ಹರ್ಷ. ಕಾರಣ ಅವರ ದಾಂಪತ್ಯಕ್ಕೆ ಈಗ 86 ವರ್ಷದ ಸಂಭ್ರಮ! ಮಾತ್ರವಲ್ಲದೆ, ಬ್ರಿಟನ್‌ನಲ್ಲಿ ಸದ್ಯಕ್ಕೆ ಅತ್ಯಂತ ದೀರ್ಘಾವಧಿಯ ದಾಂಪತ್ಯ ಎಂಬ ಹೆಗ್ಗಳಿಕೆಗೂ ಈ ಹಿರಿಯ ಜೋಡಿ ಪಾತ್ರವಾಗಿದೆ.

ಪಂಜಾಬ್ ಮೂಲದ ಕರಂ ಚಂದ್ (106) ಮತ್ತು ಕರ್ತಾರಿ (99)1925ರಲ್ಲಿ ವಿವಾಹವಾದರು. 1965ರಲ್ಲಿ ಬ್ರಿಟನ್‌ಗೆ ವಲಸೆ ಬಂದ ಇವರು, ಯಾರ್ಕ್‌ಶೈರ್‌ನ ಬ್ರಾಡ್‌ಪೋರ್ಡ್‌ನಲ್ಲಿ ನೆಲೆ ನಿಂತರು. ಈ ದಂಪತಿಗೆ ಎಂಟು ಮಕ್ಕಳು, 27 ಮೊಮ್ಮಕ್ಕಳು ಮತ್ತು 23 ಮರಿ ಮೊಮ್ಮಕ್ಕಳು ಇದ್ದಾರೆ.

Post Comments (+)