ಭಾನುವಾರ, ನವೆಂಬರ್ 17, 2019
29 °C

ದಾಖಲೆ ಪ್ರಮಾಣ ಮೀನು ಹಿಡುವಳಿ

Published:
Updated:

ಕಾರವಾರ:  ಕಳೆದೊಂದು ದಶಕಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಮೀನು ಹಿಡುವಳಿಯಲ್ಲಿ ಹೆಚ್ಚಳ ಆಗಿರುವುದು ಕಂಡುಬಂದಿದೆ.

2010-11ನೇ ಸಾಲಿನಲ್ಲಿ ಒಟ್ಟು 88,000 ಮೆಟ್ರಿಕ್ ಟನ್ ಮೀನು ಹಿಡುವಳಿಯಾಗಿದ್ದು ರೂ.34.15 ಕೋಟಿ ವಹಿವಾಟು ನಡೆದಿದೆ.

ಕಳೆದ ಸಾಲಿನಲ್ಲಿ 59,000 ಮೆಟ್ರಿಕ್ ಟನ್ ಮೀನು ಹಿಡುವಳಿಯಾಗಿದ್ದು ಅಂದಾಜು ರೂ.25 ಕೋಟಿ ವಹಿವಾಟು ನಡೆದಿತ್ತು.  ಇಡೀ ಮೀನುಗಾರಿಕೆ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್ ತಿಂಗಳಿನಲ್ಲಿ 10,911 ಮೆಟ್ರಿಕ್ ಟನ್ ಮೀನು ಹಿಡುವಳಿಯಾಗಿದ್ದು ರೂ.33.50 ಲಕ್ಷ ವಹಿವಾಟು ನಡೆದಿದೆ.

ಮೀನುಗಾರಿಕೆ ಇಲಾಖೆಯ ದಾಖಲೆಯಲ್ಲಿರುವ 132 ಮೀನು ತಳಿಗಳ ಪೈಕಿ ಈ ಬಾರಿ ಅತಿ ಹೆಚ್ಚು ಅಂದರೆ 53 ಮೀನು ತಳಿಯ ಮೀನುಗಳು ಮೀನುಗಾರರ ಬಲೆಗೆ ಬಿದ್ದಿವೆ.

ಪ್ರತಿಕ್ರಿಯಿಸಿ (+)