ದಾಖಲೆ ಬರೆದ ಚಿಕ್ಕರಂಗಪ್ಪ

7

ದಾಖಲೆ ಬರೆದ ಚಿಕ್ಕರಂಗಪ್ಪ

Published:
Updated:

ಬೆಂಗಳೂರು: ಅಮೋಘ ಪ್ರದರ್ಶನ ತೋರಿದ ಸ್ಥಳೀಯ ಯುವ ಪ್ರತಿಭೆ ಚಿಕ್ಕರಂಗಪ್ಪ ಅವರು ಇಲ್ಲಿ ನಡೆದ 48ನೇ ಅಖಿಲ ಭಾರತ ಜೂನಿಯರ್ ಗಾಲ್ಫ್ ಟೂರ್ನಿಯ ಸೀನಿಯರ್ ಪುರುಷರು ಮತ್ತು ಜೂನಿಯರ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಚಿಕ್ಕರಂಗಪ್ಪ 15ರಿಂದ 17 ವರ್ಷದೊಳಗಿನವರ ಬಾಲಕರ ಎ ಮತ್ತು ಬಿ ವಿಭಾಗದಲ್ಲಿ (ಸ್ಕೋರ್: 75, 71, 74, 66; ಒಟ್ಟು 286) ಮೊದಲ ಸ್ಥಾನ ಪಡೆದರೆ, ಸಾಧಿಕ್ ಅಹ್ಮದ್ (74, 78, 71, 66; ಒಟ್ಟು 289) ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.50 ವರ್ಷದ ಭಾರತದ ಗಾಲ್ಫ್ ಕ್ರೀಡಾ ಇತಿಹಾಸದಲ್ಲಿ ಸೀನಿಯರ್ ಪುರುಷರ ಮತ್ತು ಜೂನಿಯರ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದ ಮೊದಲ ಆಟಗಾರ ಎನ್ನುವ ಕೀರ್ತಿಗೆ ಚಿಕ್ಕರಂಗಪ್ಪ ಪಾತ್ರರಾದರು.ಬಾಲಕರ 13ರಿಂದ 14 ವರ್ಷದೊಳಗಿನವರ ‘ಬಿ’ ವಿಭಾಗದಲ್ಲಿ ರಿಗಲ್ ಫರ್ನಾಂಡಿಸ್ (72, 71, 78, 70; ಒಟ್ಟು 291), 11ರಿಂದ 12 ವರ್ಷದೊಳಗಿನವರ ಸಿ ವಿಭಾಗದಲ್ಲಿ ಪ್ರಭಾಕರ್ ಅಸ್ವಾ (73, 74, 68, 73 ಒಟ್ಟು 288), 10 ವರ್ಷದೊಳಗಿನವರ ಡಿ ವಿಭಾಗದಲ್ಲಿ ಕ್ಷಿತಿಜ್ ನಾವೇದ್ ಕೌಲ್ (78, 80, 72 ಒಟ್ಟು 230) ಗಳಿಸಿ ಗೆಲುವು ಪಡೆದರು. ಬಾಲಕಿಯರ ಎ ಮತ್ತು ಬಿ ವಿಭಾಗದಲ್ಲಿ ಗುರ್ದನಿ ಸಿಂಗ್ (74, 79, 71; ಒಟ್ಟು 224), ಸಿ ವಿಭಾಗದಲ್ಲಿ ರಿಧಿಮಾ ದಿಲ್ವಾರಿ ಒಟ್ಟು (78, 80, 72; ಒಟ್ಟು 230), ಡಿ. ವಿಭಾಗದಲ್ಲಿ ಅನ್ಸಿಕಾ ಸಿಂಗ್ (91, 90, 91; ಒಟ್ಟು 272) ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry