ಭಾನುವಾರ, ಜೂನ್ 13, 2021
26 °C
ಆರನೆಯ ಲೋಕಸಭಾ ಚುನಾವಣೆ-- – 1971

ದಾಖಲೆ ಬರೆದ ಸಿದ್ದಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಅಂಬೇಡ್ಕರ್‌ವಾದಿ ಎಸ್‌.ಎಂ. ಸಿದ್ದಯ್ಯ 1971ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಯಲ್ಲಿ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದರು.ಎರಡನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅವರು ಮೈಸೂರು ದ್ವಿಸದಸ್ಯ ಕ್ಷೇತ್ರದಿಂದಲೂ ಜಯಗಳಿಸಿ ದ್ದರು. ಹೀಗಾಗಿ, ಸಿದ್ದಯ್ಯ ಸಂಸತ್‌ ಸದಸ್ಯರಾಗಿ ನಾಲ್ಕನೇ ಬಾರಿಗೆ ಆಯ್ಕೆಯಾದ ಹಿರಿಮೆಗೆ ಪಾತ್ರರಾದರು.1971ರಲ್ಲಿ ನಡೆದ ಚುನಾವಣೆ ಯಲ್ಲಿ ಎಸ್‌.ಎಂ. ಸಿದ್ದಯ್ಯ(ಎನ್‌ಸಿಜೆ), ಎನ್‌.ಸಿ. ಬಿಳಿಗಿರಿ ರಂಗಯ್ಯ (ಎನ್‌ಸಿಎನ್‌) ಹಾಗೂ ನಂಜುಂಡಯ್ಯ (ಪಕ್ಷೇತರ) ಮೂವರು ಮಾತ್ರವೇ ಸ್ಪರ್ಧಿಸಿದ್ದರು.ಕ್ಷೇತ್ರದಲ್ಲಿ ಒಟ್ಟು 4,85,184 ಮತದಾರರು ಇದ್ದರು. ಇವರಲ್ಲಿ ಮತದಾನ ಮಾಡಿದ್ದು, 2,85,347 ಮಂದಿ ಮಾತ್ರ. ಒಟ್ಟು ಶೇ 56.81ರಷ್ಟು ಮತದಾನವಾಗಿತ್ತು.2,72,680 ಮತಗಳು ಮಾತ್ರವೇ ಸಿಂಧುಗೊಂಡಿದ್ದವು. 12,667 ಮತಗಳು ಅಸಿಂಧುಗೊಂಡಿದ್ದವು. ಸಿದ್ದಯ್ಯ 1,68,894 ಮತ ಪಡೆದರು. ಚಲಾವಣೆಗೊಂಡಿದ್ದ ಮತಗಳಲ್ಲಿ ಶೇ 61.94ರಷ್ಟು ಮತ ಪಡೆದಿದ್ದರು. ಇಷ್ಟು ಪ್ರಮಾಣದಲ್ಲಿ ಮತ ಪಡೆದು ಹೊಸ ದಾಖಲೆ ಬರೆದರು. ಇಲ್ಲಿಯವರೆಗೆ ಕ್ಷೇತ್ರದಲ್ಲಿ ಗೆದ್ದಿರುವ ಯಾವುದೇ ಅಭ್ಯರ್ಥಿ ಇಷ್ಟು ಪ್ರಮಾಣದಲ್ಲಿ ಮತ ಪಡೆದಿಲ್ಲ ಎಂಬುದು ವಿಶೇಷ. ಬಿಳಿಗಿರಿರಂಗಯ್ಯ– 96,272 ಹಾಗೂ ನಂಜುಂಡಯ್ಯ 7,514 ಮತ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.