ಮಂಗಳವಾರ, ಜೂನ್ 22, 2021
27 °C
‘ಸಿಎಡಿ’ ಇಳಿಕೆ, ‘ಎಫ್‌ಐಐ’ ಹೂಡಿಕೆ ಪರಿಣಾಮ

ದಾಖಲೆ ಮಟ್ಟಕ್ಕೇರಿದ ಸೂಚ್ಯಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ದೇಶದ ಎರಡೂ ಪ್ರಮುಖ ಷೇರುಪೇಟೆಗಳಲ್ಲಿನ ಸೂಚ್ಯಂಕಗಳು ಗುರುವಾರ ಸಾರ್ವಕಾ ಲಿಕ ಗರಿಷ್ಠ ಮಟ್ಟಕ್ಕೇರಿ ದಾಖಲೆ ನಿರ್ಮಿಸಿದವು. ಮುಂಬೈ ಷೇರು ವಿನಿಮಯ ಕೇಂದ್ರದ(ಬಿಎಸ್‌ಇ) ಸಂವೇದಿ ಸೂಚ್ಯಂಕ 21,513.87 ಅಂಶಗಳಿಗೆ ಹಾಗೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ‘ನಿಫ್ಟಿ’ 6401.15 ಅಂಶಗಳಿಗೇರಿ ಇತಿಹಾಸ ನಿರ್ಮಿಸಿದವು.ಚಾಲ್ತಿ ಖಾತೆ ಕೊರತೆ(ಸಿಎಡಿ) ಗಣ ನೀಯ ಪ್ರಮಾಣದಲ್ಲಿ ಇಳಿಕೆಯಾಗಿ ರುವುದರ ಪರಿಣಾಮ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಖರೀದಿಸಲಾರಂಭಿಸಿದ್ದರಿಂದ ಗುರು ವಾರ ಷೇರುಪೇಟೆ ವಹಿವಾಟಿನಲ್ಲಿ ದಿಢೀರ್‌ ತೇಜಿ ಕಂಡುಬಂದಿತು.ದಿನದ ವಹಿವಾಟಿನ ಒಂದು ಹಂತದಲ್ಲಿ ಸಂವೇದಿ ಸೂಚ್ಯಂಕ 21,525.14 ಅಂಶಗಳ ಗರಿಷ್ಠ ಮಟ್ಟಕ್ಕೇರಿತ್ತು. ನಂತರ 237.01 ಅಂಶಗಳ ಏರಿಕೆಯೊಂದಿಗೆ ದಿನದಂತ್ಯ ಕಂಡಿತು. ಜ. 23ರಂದು ಸೂಚ್ಯಂಕ 21,373.66ಕ್ಕೆ ಬಂದಿದ್ದುದೇ ಇದಕ್ಕೂ ಮುಂಚಿನ ದಾಖಲೆಯಾಗಿತ್ತು.ಇನ್ನೊಂದೆಡೆ ‘ನಿಫ್ಟಿ’ ಸಹ 72.50 ಅಂಶಗಳ ಏರಿಕೆಯೊಂದಿಗೆ 6401.15 ಅಂಶಗಳಲ್ಲಿ ವಹಿವಾಟು ಕೊನೆಗೊಳಿ ಸಿತು.

ಡಿ. 9ರಂದು 6,363.90 ಅಂಶಗಳಿಗೇರಿದ್ದೇ ‘ನಿಫ್ಟಿ’ಯ ಈ ಮೊದಲಿನ ಗರಿಷ್ಠ ಮಟ್ಟವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.