ಶುಕ್ರವಾರ, ನವೆಂಬರ್ 22, 2019
22 °C

ದಾಖಲೆ ರಹಿತ ರೂ.1.13 ಲಕ್ಷ ಜಪ್ತಿ

Published:
Updated:

ಗುಲ್ಬರ್ಗ: ವಾಹನದಲ್ಲಿ ಕೊಂಡೊಯ್ಯುತ್ತಿದ್ದ ದಾಖಲೆ ರಹಿತ ರೂ.1,13,800 ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಶಪಡಿಸಿಕೊಂಡ ಹಣವನ್ನು ಗುಲ್ಬರ್ಗ ತಹಶೀಲ್ದಾರರಿಗೆ ಒಪ್ಪಿಸಲಾಗಿದೆ. ಪರಿಶೀಲನೆ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)