ಮಂಗಳವಾರ, ಮಾರ್ಚ್ 2, 2021
31 °C

ದಾದಾಗೆ ಅಶೋಕ, ನಿರಂಜನ್‌ಗೆ ಶೌರ್ಯ ಚಕ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾದಾಗೆ ಅಶೋಕ, ನಿರಂಜನ್‌ಗೆ ಶೌರ್ಯ ಚಕ್ರ

ನವದೆಹಲಿ (ಪಿಟಿಐ): ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ನುಸುಳಿದ ಉಗ್ರರ ವಿರುದ್ಧದ ಹೋರಾಡಿ, ಮೂವರನ್ನು ಕೊಂದು, ಹುತಾತ್ಮರಾದ ಹವಾಲ್ದಾರ್ ಹಂಗಾಪನ್ ದಾದಾ ಅವರಿಗೆ ಅಶೋಕ ಚಕ್ರ ಘೋಷಿಸಲಾಗಿದೆ.ಯುದ್ಧವಲ್ಲದ ಸಂದರ್ಭಗಳಲ್ಲಿ ಯೋಧರು ಮೆರೆಯುವ ಶೌರ್ಯಕ್ಕೆ ನೀಡುವ ಅತ್ಯುನ್ನತ ಪದಕ ಇದು.ಪಠಾಣ್‌ಕೋಟ್‌ ವಾಯುನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ವೇಳೆ ಹುತಾತ್ಮರಾದ, ಎನ್‌ಎಸ್‌ಜಿಯ ಬಾಂಬ್‌ ನಿಷ್ಕ್ರಿಯ ದಳದ ಮುಖಂಡ ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ಇ.ಕೆ. ನಿರಂಜನ್‌ ಅವರಿಗೆ ಶೌರ್ಯ ಚಕ್ರ ಘೋಷಿಸಲಾಗಿದೆ.ಯುದ್ಧವಲ್ಲದ ಸಂದರ್ಭಗಳಲ್ಲಿ ಯೋಧರು ಮೆರೆಯುವ ಶೌರ್ಯಕ್ಕೆ ನೀಡುವ ಮೂರನೆಯ ಅತ್ಯುನ್ನತ ಪದಕ ಇದು. ರಕ್ಷಣಾ ಪಡೆ ಮತ್ತು ಅರೆಸೇನಾ ಪಡೆಗಳ ಒಟ್ಟು 82 ಜನರಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪದಕಗಳನ್ನು ಘೋಷಿಸಿದ್ದಾರೆ.ಈ ಬಾರಿ 14 ಜನರಿಗೆ ಶೌರ್ಯ ಚಕ್ರ, 63 ಜನರಿಗೆ ಸೇನಾ ಪದಕ, ತಲಾ ಇಬ್ಬರಿಗೆ ನವ (ನೌಕಾ) ಸೇನೆ ಮತ್ತು ವಾಯು ಸೇನೆ ಪದಕಗಳನ್ನು ಘೊಷಿಸಲಾಗಿದೆ.ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನೌಗಾಮ್‌ ವಲಯದಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ನಾಲ್ಕು ಜನ ಭಯೋತ್ಪಾದಕರನ್ನು ಹಿಡಿಯುವ ಹೊಣೆ ದಾದಾ ಮತ್ತು ಅವರ ತಂಡದ ಮೇಲಿತ್ತು. ಮೂವರು ಭಯೋತ್ಪಾದಕರನ್ನು ಕೊಂದ ದಾದಾ, ನಾಲ್ಕನೆಯವ ಹಾರಿಸಿದ ಗುಂಡಿಗೆ ಬಲಿಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.