ದಾದಿಗೆ ಕಾದಿದೆ ನೌಕರಿ

7

ದಾದಿಗೆ ಕಾದಿದೆ ನೌಕರಿ

Published:
Updated:

ಆರೋಗ್ಯ ರಕ್ಷಣೆ ಕ್ಷೇತ್ರ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಉದ್ಯೋಗ ವಲಯ. ಕಾರ್ಮಿಕ ಇಲಾಖೆ  ಅಂಕಿ ಸಂಖ್ಯೆಗಳ ಪ್ರಕಾರ 2008 ರಿಂದ 2018ರ ವರೆಗಿನ ದಶಕದಲ್ಲಿ ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಳ್ಳುವ ನರ್ಸ್‌ಗಳ ಪ್ರಮಾಣ ಶೇ 22ರಷ್ಟು ಹೆಚ್ಚಲಿದೆ, 25 ಲಕ್ಷಕ್ಕೂ ಹೆಚ್ಚು ನರ್ಸ್‌ಗಳಿಗೆ ಉದ್ಯೋಗ ದೊರೆಯಲಿದೆ.ಆರ್ಥಿಕ ಹಿಂಜರಿತದ ನಡುವೆಯೂ ಆರೋಗ್ಯ ರಕ್ಷಣೆ ಕ್ಷೇತ್ರ ನಿರಂತರವಾಗಿ ವಿಸ್ತಾರಗೊಳ್ಳುತ್ತಿದೆ. ನರ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಏಕೆಂದರೆ ಆಸ್ಪತ್ರೆ, ಕ್ಲಿನಿಕ್ ಮತ್ತು ವೈದ್ಯಕೀಯ ಸಂಬಂಧಿ ಕ್ಷೇತ್ರಗಳಲ್ಲಿ ಕೌಶಲ್ಯಭರಿತ ನರ್ಸ್‌ಗಳ ಕೊರತೆಯಿದೆ.ಈಗ ಪ್ರಚಲಿತದಲ್ಲಿ ಇರುವ ಆಧುನಿಕ ನರ್ಸಿಂಗ್ ವ್ಯವಸ್ಥೆಗೆ ಮೊದಲು ಸನ್ಯಾಸಿಗಳು ಮತ್ತು ಸೇನಾ ಕ್ಷೇತ್ರದವರು ನರ್ಸಿಂಗ್ ಸೇವೆ ಒದಗಿಸುತ್ತಿದ್ದರು. ಧಾರ್ಮಿಕ ಮತ್ತು ಮಿಲಿಟರಿ ನರ್ಸಿಂಗ್ ಇವತ್ತಿಗೂ ಕೆಲ ದೇಶಗಳಲ್ಲಿ ಸಾಕ್ಷಿಯಾಗಿ ಉಳಿದಿದೆ.ಉದಾಹರಣೆಗೆ ಇಂಗ್ಲೆಂಡ್‌ನಲ್ಲಿ ಹಿರಿಯ ಮಹಿಳಾ ದಾದಿಯರನ್ನು ಸಿಸ್ಟರ್ಸ್‌ ಎಂದು ಕರೆಯುತ್ತಾರೆ. ಕ್ರೈಮನ್, ವಾರ್ ನರ್ಸಿಂಗ್ ಇತಿಹಾಸದಲ್ಲಿ ಒಂದು ಮಹತ್ತರ ಮೈಲುಗಲ್ಲು. ಫ್ಲಾರೆನ್ಸ್ ನೈಟಿಂಗೇಲ್ ವೃತ್ತಿಪರ ನರ್ಸಿಂಗ್‌ಗೆ ಅಸ್ತಿಭಾರ ಹಾಕಿದವರು.ಸಾಮಾನ್ಯವಾಗಿ ನರ್ಸಿಂಗ್ ಕ್ಷೇತ್ರದ ಭವಿಷ್ಯ ಚರ್ಚಿಸುವ ಮೊದಲು ನರ್ಸಿಂಗ್ ಕುರಿತಾಗಿ ತಿಳಿದುಕೊಳ್ಳಬೇಕು. ಎಎನ್‌ಎ (ಅಮೆರಿಕನ್ ನರ್ಸ್ ಒಕ್ಕೂಟ) ವ್ಯಾಖ್ಯಾನದ ಪ್ರಕಾರ `ನರ್ಸಿಂಗ್ ಎಂದರೆ ಆರೋಗ್ಯದ ರಕ್ಷಣೆ, ಉತ್ತೇಜನ ಮತ್ತು ಆರೋಗ್ಯ ಸಾಮರ್ಥ್ಯಗಳ ನಿರ್ವಹಣೆ, ಅನಾರೋಗ್ಯ ಮತ್ತು ಗಾಯದ ನಿವಾರಣೆ, ಮಾನವೀಯ ಜವಾಬ್ದಾರಿಯಲ್ಲಿ ಚಿಕಿತ್ಸೆ ನೀಡುವುದು, ವೈಯಕ್ತಿಕ, ಕುಟುಂಬ, ಸಮುದಾಯ ಮತ್ತು ಜನಸಮುದಾಯದ ಆರೈಕೆ~.ನರ್ಸಿಂಗ್ ಉದ್ಯಮ ನಾನಾ ವಿಧದ  ಸೇವೆ ನೀಡುತ್ತದೆ. ನಾನಾ ಬಗೆಯ ನರ್ಸ್‌ಗಳಿದ್ದಾರೆ, ನರ್ಸಿಂಗ್‌ಗೆ ಭಿನ್ನ ದಾರಿಗಳಿವೆ. ನರ್ಸ್‌ಗಳು, ವೈದ್ಯರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ರೋಗಿಯ ಆರೋಗ್ಯ ರಕ್ಷಣೆ ತಂಡದ ಆಂತರಿಕ ಭಾಗವಾಗಿರುತ್ತಾರೆ. ವೈದ್ಯರು ಚಿಕಿತ್ಸೆ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗನರ್ಸ್‌ಗಳು ಇರುತ್ತಾರೆ.ಗೌರವಯುತ ವೃತ್ತಿ

ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ  ನರ್ಸಿಂಗ್ ವ್ಯಕ್ತಿಯ, ಕುಟುಂಬದ,  ಸಮುದಾಯದ ಆರೈಕೆಯತ್ತ ದೃಷ್ಟಿ ಹಾಯಿಸಿದೆ. ಆರೋಗ್ಯ ಗುಣಮಟ್ಟದ ಸುಧಾರಣೆ  ಇದರ ಪ್ರಮುಖ ಧ್ಯೇಯ. ಈ ಕ್ಷೇತ್ರ ಪ್ರಮುಖವಾಗಿ ಮಾನವೀಯತೆ ಆಧಾರದಲ್ಲಿ ನಿಂತಿದೆ. ವ್ಯಕ್ತಿಗಳಿಗೆ ಸಹಾಯ ಮಾಡುವುದು, ಆರೋಗ್ಯದ ಆರೈಕೆ ಮೊದಲಾದ ಚಟುವಟಿಕೆಗಳಿಂದ ಕೂಡಿದೆ. ಗೌರವಯುತ ವೃತ್ತಿಯಾದ ಇದು ಇವತ್ತಿನ ಆಧುನಿಕ ತಂತ್ರಜ್ಞಾನ, ಸಂಶೋಧನೆಯಲ್ಲಿ ಸವಾಲಿನ ವೃತ್ತಿಯೂ ಹೌದು.ದಾದಿಯರು ಜನರಿಗೆ ಪ್ರತಿ ಹಂತದಲ್ಲಿ  ಸಹಾಯ ಮಾಡುತ್ತಾರೆ. ಆಸ್ಪತ್ರೆಯಿಂದ  ಹಿಡಿದು ಕಾರ್ಪೊರೇಟ್ ವಲಯದವರೆಗೆ ನರ್ಸ್ ವೃತ್ತಿ ವ್ಯಾಪಿಸಿದೆ. ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗೆ ಒಂದಲ್ಲ ಒಂದು ಹಂತದಲ್ಲಿ ದಾದಿಯ ಸಹಾಯ ಬೇಕೇಬೇಕು.ಅವಕಾಶಗಳ ಸಾಗರ

ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಂತೆ ಭಾರತದಲ್ಲೇ 24 ಲಕ್ಷ ನರ್ಸ್‌ಗಳ ಅವಶ್ಯಕತೆಯಿದೆ. ಮುಂಚೂಣಿ ಶಿಕ್ಷಣ, ತರಬೇತಿ ಪಡೆದ ನರ್ಸ್‌ಗಳಿಗೆ ಅವಕಾಶ ವಿಪುಲವಾಗಿದೆ. ವೃತ್ತಿಪರ ನರ್ಸ್ ಆಗಿ ಜ್ಞಾನ ಮತ್ತು ಅನುಭವವನ್ನು ನಾನಾ ವಿಧಗಳಲ್ಲಿ ವ್ಯಕ್ತಪಡಿಸಬಹುದು. ಇಂದು ನರ್ಸಿಂಗ್ ಒಂದು ವೃತ್ತಿಯಾಗಿದೆ.

 

ಆರೋಗ್ಯ ಕ್ಷೇತ್ರದ ಸುಧಾರಣೆ, ರೋಗಿಗಳಿಗೆ ಮಾಹಿತಿ, ರೋಗದ ಕುರಿತು ಜಾಗೃತಿ ಮೂಡಿಸುವಲ್ಲಿ, ಉತ್ತಮ ಆರೋಗ್ಯದಲ್ಲಿ ನರ್ಸ್‌ಗಳ ಪಾಲಿದೆ. ಆಸ್ಪತ್ರೆಗಳ ಆಡಳಿತ ಮಂಡಳಿಯ ನಿರ್ದೇಶಕರಾಗಿಯೂ ಅವರು ಭಾಗವಹಿಸಬಹುದು. ಅಷ್ಟರ ಮಟ್ಟಿಗೆ ನರ್ಸಿಂಗ್ ಉದ್ಯಮ ಬೆಳವಣಿಗೆ ಸಾಧಿಸಿದೆ.ನರ್ಸ್‌ಗಳಿಗೆ ನಾನಾ ಹಂತದ  ಶಿಕ್ಷಣವಿದೆ. ನರ್ಸಿಂಗ್‌ನಲ್ಲಿ ಡಿಪ್ಲೊಮಾ, ಬಿಎಸ್‌ಸಿ, ಎಂಎಸ್‌ಸಿ, ಎಂಫಿಲ್, ಡಾಕ್ಟರಲ್, ಪೋಸ್ಟ್ ಡಾಕ್ಟರಲ್ ಡಿಗ್ರಿ ಕಲಿಯಲು ಅವಕಾಶವಿದೆ.

ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿದ್ದರೂ, ನರ್ಸಿಂಗ್ ಉನ್ನತ ಉದ್ಯೋಗ ಅವಕಾಶ ಮತ್ತು ಭದ್ರತೆ ಒದಗಿಸುತ್ತದೆ. ಜವಾಬ್ದಾರಿಯಲ್ಲೂ ಸಾಕಷ್ಟು ಹಂತಗಳಿವೆ. ನರ್ಸಿಂಗ್‌ನಲ್ಲಿ ನೀವು ನಾಯಕತ್ವದ ಗುಣವನ್ನು ಚೆನ್ನಾಗಿ ಮೈಗೂಡಿಸಿಕೊಳ್ಳಬಹುದು.ವೇತನ

ನರ್ಸಿಂಗ್‌ನಲ್ಲಿ ವೇತನ ಕೂಡ ಉತ್ತಮವಾಗಿದೆ. ಕೆಲಸ ಮಾಡುವ ಸ್ಥಳ, ಶಿಕ್ಷಣ, ನಿರ್ವಹಿಸುವ ಜವಾಬ್ದಾರಿ ಮೊದಲಾದ ಅಂಶಗಳು ವೇತನವನ್ನು ನಿರ್ಧರಿಸುತ್ತವೆ. ರಾತ್ರಿ ಮತ್ತು ವಾರದ ರಜೆ ಪಾಳಿಗಳಿಗೆ ಹೆಚ್ಚುವರಿ ಭತ್ಯೆ ಸಿಗುತ್ತದೆ. ಆರೋಗ್ಯ ವಿಮೆ, ರಜೆ, ರಜೆ ಭತ್ಯೆ, ಪಿಂಚಣಿ ಮೊದಲಾದ ಹೆಚ್ಚುವರಿ ಲಾಭಗಳಿವೆ. ಕ್ಲಿನಿಕಲ್ ನರ್ಸ್ ಸ್ಪೆಷಲಿಸ್ಟ್ ಮತ್ತು ಹೆಚ್ಚಿನ ಪದವಿ ಹೊಂದಿದ ನರ್ಸ್‌ಗಳಿಗೆ ಆಕರ್ಷಕ ವೇತನವಿದೆ.ಇತರರ ನೋವಿಗೆ ನೀವು ಸ್ಪಂದಿಸುವವರಾದರೆ, ಮಾನವೀಯ ಗುಣಗಳು ನಿಮ್ಮಲ್ಲಿ ಇದ್ದರೆ, ಬೇರೆಯವರ ಬದುಕಿನಲ್ಲಿ ಬದಲಾವಣೆ ಕಾಣಲು ಬಯಸುವುದಾದರೆ ನರ್ಸಿಂಗ್ ಉತ್ತಮ ವೃತ್ತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry