ದಾಬೋಳ್ಕರ್ ಹತ್ಯೆ: ಎನ್‌ಐಎಗೆ ಪ್ರಕರಣ ವರ್ಗಾಯಿಸಲು ಪಿಐಎಲ್

7

ದಾಬೋಳ್ಕರ್ ಹತ್ಯೆ: ಎನ್‌ಐಎಗೆ ಪ್ರಕರಣ ವರ್ಗಾಯಿಸಲು ಪಿಐಎಲ್

Published:
Updated:

ಮುಂಬೈ (ಪಿಟಿಐ): ಮೂಢನಂಬಿಕೆ ಮತ್ತು ಅಂಧಾನುಕರಣೆ ವಿರೋಧಿ ಕಾರ್ಯಕರ್ತ  ನರೇಂದ್ರ ದಾಬೋಳ್ಕರ್ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾಯಿ­ಸಲು ಕೋರಿ ಬಾಂಬೆ ಹೈಕೋರ್ಟ್‌ಗೆ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆ­ಯಾಗಿದೆ.ಪತ್ರಕರ್ತ ಕೇತನ್ ತಿರ್ಡೋಕರ್ ಎಂಬುವವರು ಪಿಐಎಲ್ ಸಲ್ಲಿಸಿದ್ದು, ನಾಳೆ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ‘ದಾಬೋಳ್ಕರ್ ಹತ್ಯೆ ಕುರಿತು ಪುಣೆ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಅಲ್ಲದೆ, ತನಿಖೆಯ ದಿಕ್ಕು ತಪ್ಪಿ­ಸು­ತ್ತಿ­ದ್ದಾರೆ. ಹಾಗಾಗಿ ಈ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿ­ಸಬೇಕು’ ಎಂದು ಕೇತನ್ ಅರ್ಜಿಯಲ್ಲಿ ಕೋರಿದ್ದಾರೆ.ಮೂಢನಂಬಿಕೆ ಮತ್ತು ಅಂಧಾನು­ಕರಣೆ ವಿರುದ್ಧ ಸಮರ ಸಾರುವ ಮೂಲಕ ಸಂಪ್ರದಾಯವಾದಿಗಳ ಕೆಂಗ­ಣ್ಣಿಗೆ ಗುರಿ ಯಾಗಿದ್ದ ದಾಬೋಳ್ಕರ್ ಅವ­ರನ್ನು, ಆಗಸ್ಟ್ 2ರಂದು ಅಪರಿಚಿತರು ಗುಂಡಿಟ್ಟು ಹತ್ಯೆಗೈದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry