ಸೋಮವಾರ, ಆಗಸ್ಟ್ 19, 2019
28 °C

ದಾರಿ ಏಕೆ ಕೊಟ್ಟಿಲ್ಲ?

Published:
Updated:

ಸೂರ್ಯನಗರ 2ನೇ ಹಂತದಲ್ಲಿ ಎಂಐಜಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. (377-ಎಂಐಜಿ ಸೆಕ್ಟರ್-ಬಿ ಆದರೆ, ಈ ಮನೆಗಳನ್ನು ಪಡೆದುಕೊಂಡವರು ದಿನವೂ ಹಾರುವ ಸಾಹಸಕ್ಕೆ ಕೈ ಹಾಕಬೇಕಿದೆ. ಕಾರಣ: ಮನೆಯ ಒಳಗೆ ಹೋಗಲು ಮನೆಯ ಮುಂದಿರುವ ಡ್ರೈನೇಜ್ ಜಿಗಿಯಬೇಕು. ಅದಕ್ಕೆ ಮುಚ್ಚಳವೇ ಇಲ್ಲ. ಜಿಗಿಯುವಾಗ ಆಯತಪ್ಪಿದರೆ ಅದರೊಳಕ್ಕೆ ಬೀಳುವ ಅಪಾಯ.ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಮುಚ್ಚಳ ಇನ್ನೂ ಮಂಜೂರಾಗಿಲ್ಲ ಎಂಬ ಸಿದ್ಧ ಉತ್ತರ ಸಿಗುತ್ತದೆ. ಇಲ್ಲಿನ ಎಲ್ಲ ಮನೆಗಳ ಬಾಗಿಲು ಮುಂದೆಯೂ ತೆರೆದ ಚರಂಡಿ ಇದೆ. ಇದು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಆದ್ದರಿಂದ ನಾಗರಿಕರ ಆರೋಗ್ಯದ ದೃಷ್ಟಿಯಿಂದಲಾದರೂ ಸಂಬಂಧಿಸಿದವರು ತೆರೆದ ಒಳಚರಂಡಿ ಮೇಲೆ ಮುಚ್ಚಳ ಹಾಕಿಸಿ ಕೊಡಬೇಕೆಂದು ವಿನಂತಿ.

 

Post Comments (+)