ದಾರಿ ತಪ್ಪಿಸಲು ರಾಜೀನಾಮೆ

ಶುಕ್ರವಾರ, ಮೇ 24, 2019
28 °C

ದಾರಿ ತಪ್ಪಿಸಲು ರಾಜೀನಾಮೆ

Published:
Updated:

ಮೈಸೂರು: `ರಾಜ್ಯದ ಜನರ ದಾರಿ ತಪ್ಪಿಸುವ ಸಲುವಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ~ ಎಂದು ವಿಧಾನಸಭಾ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

`ಶ್ರೀರಾಮುಲು ತಮ್ಮ  ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬ ನೆಪ ಹೇಳುತ್ತಿದ್ದಾರೆ.ಇಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬರುವ ಪ್ರಶ್ನೆಯೇ ಇಲ್ಲ. ಅಕ್ರಮ ಗಣಿಗಾರಿಕೆ  ಕುರಿತು ಲೋಕಾಯುಕ್ತರು  ಸಲ್ಲಿಸಿರುವ ಅಂತಿಮ ಗಣಿ ವರದಿಯಲ್ಲಿ ಇವರ ಹೆಸರಿದೆ. ಇವರು ತಪ್ಪನ್ನೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ರೆಡ್ಡಿ ಸಹೋದರರು ಆಪ್ತ ಶಾಸಕರೊಂದಿಗೆ ವಿದೇಶ ಪ್ರವಾಸ ಹೋಗಿ ಬಂದ ನಂತರ ರಾಜ್ಯದ ರಾಜಕೀಯದಲ್ಲಿ ಇಂತಹ ಬೆಳವಣಿಗೆ ಆಗುತ್ತಿದೆ~ ಎಂದು ಭಾನುವಾರ  ಮಾಧ್ಯಮದ ಪ್ರತಿನಿಧಿಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry