ಮಂಗಳವಾರ, ಜನವರಿ 28, 2020
25 °C

ದಾರಿ ತಪ್ಪಿಸುತ್ತಿರುವವರ ಸರಿಪಡಿಸುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ದಾರಿತಪ್ಪಿಸುವಂತಹ ಹೇಳಿಕೆ ನೀಡುತ್ತಿರುವ ಸಚಿವ ಮತ್ತು ಶಾಸಕರನ್ನು ಸರಿಪಡಿಸುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ತೃಪ್ತಿ ಪಡಿಸಲು ಸಚಿವ ರೇಣುಕಾಚಾರ್ಯ ಮತ್ತು ಶಾಸಕ ಸುರೇಶಗೌಡ ಅವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ಕರೆದು ಚರ್ಚಿಸಿ ಎಚ್ಚರಿಕೆ ನೀಡುವುದಾಗಿ ಹೇಳಿದರು.ಪಕ್ಷ ಸಂಘಟನೆ ಮತ್ತು ಗೊಂದಲ ನಿವಾರಣೆಗೆ ಫೆ.13 ಮತ್ತು 14ರಂದು ಬೆಂಗಳೂರಿನಲ್ಲಿ  ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಿಗೆ ಅಭ್ಯಾಸ ವರ್ಗ ಆಯೋಜಿಸಿರುವುದಾಗಿ ಹೇಳಿದರು.

ಪ್ರತಿಕ್ರಿಯಿಸಿ (+)