ದಾರಿ ತಪ್ಪಿಸುವ ಕುತಂತ್ರ

7

ದಾರಿ ತಪ್ಪಿಸುವ ಕುತಂತ್ರ

Published:
Updated:

ಏಪ್ರಿಲ್ 23 ರಂದು ಶಿವಮೊಗ್ಗದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಾಡಾಗಿದ್ದ ಶಿವಾಜಿ ಜಯಂತಿ ಆಚರಣೆ ಸಂದರ್ಭದ ವೇದಿಕೆಯನ್ನು ಬಿಜೆಪಿಯ ಕೆಲವು ನಾಯಕರು ತಮ್ಮ ಕೋಮುವಾದಿ ಅಜೆಂಡಾವನ್ನು ಜನರ ಮೇಲೆ ಹೇರಲು  ಬಳಸಿಕೊಂಡಿದ್ದು ಅತ್ಯಂತ ದುರದೃಷ್ಟಕರ. `ಛತ್ರಪತಿ ಶಿವಾಜಿ ಹಿಂದೂ ಧರ್ಮದ ರಕ್ಷಣೆಗಾಗಿಯೇ ಜೀವ ತಳೆದರು. ಹಿಂದೂ ಧರ್ಮದ ರಕ್ಷಣೆ ಅವರ  ಒಂದಂಶದ ಕಾರ್ಯಕ್ರಮವಾಗಿತ್ತು. ಮುಸ್ಲಿಮರಿಂದ ನಮ್ಮ ದೇಶವನ್ನು ಕಾಪಾಡಿದರು ಇತ್ಯಾದಿ ಹಸಿ ಹಸಿ ಸುಳ್ಳುಗಳನ್ನು ಹೇಳಿದರು.ಅದೇ ನಾಯಕರು ಮರುದಿನ ಬಸವ ಜಯಂತಿಯ ಕಾರ್ಯಕ್ರಮದಲ್ಲಿ ಜಾತ್ಯಾತೀತತೆ, ವಿಶ್ವಮಾನವತೆಯ ಬಗ್ಗೆ ಮಾತನಾಡಿದರು. ಇಂತಹ ಇಬ್ಬಗೆಯ ಮಾತುಗಳನ್ನಾಡಲು ಬಿಜೆಪಿ ಮುಖಂಡರಿಂದ ಮಾತ್ರ ಸಾಧ್ಯ.ಇದು ಜನರನ್ನು ದಾರಿ ತಪ್ಪಿಸುವ ಕುತಂತ್ರ. ತಮ್ಮ ಪಕ್ಷದ ಸ್ವಾರ್ಥಕ್ಕಾಗಿ ಎಲ್ಲರನ್ನೂ, ಎಲ್ಲವನ್ನೂ ಬಳಸಿಕೊಳ್ಳುವ ಬಿಜೆಪಿ ಮುಖಂಡರಿಗೆ ಬಸವಣ್ಣನವರ  ಹೆಸರು ಹೇಳುವ ಅರ್ಹತೆ ಇಲ್ಲ.ಇತಿಹಾಸದ ಅರಿವಿಲ್ಲದ ಮುಗ್ಧ ಜನರು ಇವರ ಮಾತುಗಳನ್ನು ಕೇಳುತ್ತಾ ಶಿವಾಜಿಯನ್ನೂ  ಇವರಂತೆ ಕೋಮುವಾದಿ ಎಂದು ನಂಬಿಸುವ ಕೆಲಸ ನಡೆಯುತ್ತಿದೆ. ಪ್ರಜ್ಞಾವಂತರೆಲ್ಲರೂ  ಇದನ್ನು ವಿರೋಧಿಸಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry