ಸೋಮವಾರ, ಡಿಸೆಂಬರ್ 16, 2019
17 °C

`ದಾರ್ಶನಿಕರ ಆದರ್ಶ ಪಾಲನೆ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನ್ವಿ: ಮನುಕುಲದ ಏಳಿಗೆ ಹಾಗೂ ಧರ್ಮಗಳ ಸಂರಕ್ಷಣೆಗಾಗಿ ಶ್ರಮಿಸಿದ ದಾರ್ಶನಿಕರನ್ನು ಸ್ಮರಿಸಿಕೊಂಡು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ರಾಯಚೂರಿನ ಉಪನ್ಯಾಸಕ ಪರಮೇಶ್ವರ ಸಾಲಿಮಠ ಹೇಳಿದರು.ಭಾನುವಾರ ಪಟ್ಟಣದ ಕಲ್ಮಠದ ಗುರುಭವನದಲ್ಲಿ ತಾಲ್ಲೂಕು ಬೇಡ ಜಂಗಮ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಧರ್ಮ ಜಾಗೃತಿ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.ಎ.ಬಿ.ಉಪ್ಪಳಮಠ ವಕೀಲ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಒತ್ತಾಯಿಸಿದರು.ರೌಡಕುಂದದ ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಮರಿದೇವರು ಹಾಗೂ ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಂದೇಶ ನೀಡಿದರು.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬೇಡ ಜಂಗಮ ಸಮಾಜದ ಗಣ್ಯರನ್ನು ಸತ್ಕರಿಸಲಾಯಿತು.

ರಾಯಚೂರಿನ ಕಿಲ್ಲಾ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು.ಬಸವರಾಜಯ್ಯ ಸ್ವಾಮಿ ಹರವಿ, ಜಾಗಟಗಲ್‌ನ ಬಸಲಿಂಗಯ್ಯ ಸ್ವಾಮಿ, ಶಂಕ್ರಯ್ಯ ಸ್ವಾಮಿ ಹಾಗೂ ಬೆಟ್ಟಯ್ಯ ಸ್ವಾಮಿ, ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಬಸವರಾಜಯ್ಯ ಸ್ವಾಮಿ, ಗೌರವಾಧ್ಯಕ್ಷ ದಕ್ಷಿಣಾಮೂರ್ತಿ ಸ್ವಾಮಿ, ಡಾ.ವಿ.ಜಿ.ಶರ್ಮಾ, ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಪರ್ವತಯ್ಯ ಸ್ವಾಮಿ ಕವಿತಾಳ, ಉಪಾಧ್ಯಕ್ಷ ಎಂ.ಬಿ.ಸಿದ್ರಾಮಯ್ಯ ಸ್ವಾಮಿ, ಮೃತ್ಯುಂಜಯ ಸ್ವಾಮಿ ಗೂಗೇಬಾಳ, ಭೂ ದಾನಿ ಬಸವಲಿಂಗಯ್ಯ ಸ್ವಾಮಿ ಕೆಳಗಡೆಮಠ, ಘನಮಠದಯ್ಯ ಮಸ್ಕಿ, ಮಿಲ್ಟ್ರಿ ಶಿವಯ್ಯ ಸ್ವಾಮಿ, ಮರಿಸ್ವಾಮಿ ವಟಗಲ್‌ಇದ್ದರು.ತಾಲ್ಲೂಕು ಬೇಡ ಜಂಗಮ ಸಮಾಜದ ಯುವ ಅಧ್ಯಕ್ಷ ಶಿವಶಂಕ್ರಯ್ಯ ಸ್ವಾಮಿ ಮೂಲೆಮಠ ಸ್ವಾಗತಿಸಿದರು. ವಿರೂಪಾಕ್ಷಯ್ಯ ವಂದಲಿ ಗವಾಯಿ ಪ್ರಾರ್ಥನೆ ಗೀತೆ ಹಾಡಿದರು. ಕಿಡಿಗಣ್ಣಯ್ಯ ಸ್ವಾಮಿ ಉಮಳಿಹೊಸೂರು ನಿರೂಪಿಸಿದರು. ಮಲ್ಲಿಕಾರ್ಜುನ ಮಾಚನೂರು ವಂದಿಸಿದರು.

ಪ್ರತಿಕ್ರಿಯಿಸಿ (+)