ಮಂಗಳವಾರ, ನವೆಂಬರ್ 12, 2019
27 °C

ದಾರ್ಶನಿಕರ ಆದರ್ಶ ಮೈಗೂಡಿಸಿಕೊಳ್ಳಲು ಸಲಹೆ

Published:
Updated:

ಹಾಸನ: ಅಂಬೇಡ್ಕರ್, ಬಸವಣ್ಣ ಹಾಗೂ ಕನಕದಾಸರ ಚಿಂತನೆಗಳನ್ನು ಕೇವಲ ಒಂದು ವರ್ಗಕ್ಕೆ ಸೀಮಿತ ಮಾಡಲಾಗುತ್ತಿದೆ ಎಂದು ಎ.ವಿ.ಕೆ. ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ಎಲ್. ಮಲ್ಲೇಶ್‌ಗೌಡ ಕಳವಳ ವ್ಯಕ್ತಪಡಿಸಿದರು.ನಗರದ ಕೃಷ್ಣ ಕಾನೂನು ಕಾಲೇಜಿನಲ್ಲಿ ಈಚೆಗೆ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು `ಅಂಬೇಡ್ಕರ್ ಮತ್ತು ಬಸವಣ್ಣ ಅವರು ತಮ್ಮ ಆಲೋಚನೆಯ ಮತ್ತು ಚಿಂತನೆಗಳ ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದೆ.ಯುವಕರು ಮಹಾನ್ ದಾರ್ಶನಿಕರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು' ಎಂದು ತಿಳಿಸಿದರು.

ಪ್ರಾಂಶುಪಾಲ ವೈ.ಪಿ. ಉದಯ್‌ಕುಮಾರ್, ಸಹ ಪ್ರಾಧ್ಯಾಪಕರಾದ ಫೈರೋಜ್ ಪಾಷ್, ಶ್ರೀನಿವಾಸ್, ಚಂದ್ರಹಾಸ್, ಕೃಷ್ಣಮೂರ್ತಿ ಇತರರು ಇದ್ದರು

ಪ್ರತಿಕ್ರಿಯಿಸಿ (+)