ದಾಲ್ಮಿಯಾ ವಿರೋಧಿಸಿ ಜಿಲ್ಲಾಧಿಕಾರಿಗೆ ಘೇರಾವ್‌

7

ದಾಲ್ಮಿಯಾ ವಿರೋಧಿಸಿ ಜಿಲ್ಲಾಧಿಕಾರಿಗೆ ಘೇರಾವ್‌

Published:
Updated:

ಗೋಕಾಕ: ಇಲ್ಲಿಗೆ ಸಮೀಪದ ಯಾದವಾಡ ಗ್ರಾಮದಲ್ಲಿ ದಾಲ್ಮಿಯಾ ಸಿಮೆಂಟ್‌ ಕಂಪೆನಿಗೆ ಸುಣ್ಣದ ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಮುನ್ನ ಶುಕ್ರವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ರೈತರು ಅನುಮತಿ ನೀಡದಂತೆ ಆಕ್ರೋಶ ವ್ಯಕ್ತಪಡಿಸಿ ಸಭೆಯ ಅಧ್ಯಕ್ಚತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್‌. ಜಯರಾಂ  ಅವರನ್ನು ಘೇರಾವ್‌ ಮಾಡಿದ ಘಟನೆ ನಡೆಯಿತು.ಪೊಲೀಸರ ಬಂದೋಬಸ್ತ್‌ನಲ್ಲಿ ಜಿಲ್ಲಾಧಿಕಾರಿಗಳನ್ನು ಸಭೆಯಿಂದ ಹೊರಗೆ ಕರೆತರಬೇಕಾಯಿತು. ಸಭೆಯ ನಡಾವಳಿಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಯಾದವಾಡ ಗ್ರಾಮದಲ್ಲಿ ಈಗಾಗಲೇ ದಾಲ್ಮಿಯಾ ಕಂಪೆನಿಯ ಸಿಮೆಂಟ್‌ ಘಟಕ ಕಾರ್ಯ ನಿರ್ವಹಿಸುತ್ತಿದ್ದು ಸುಣ್ಣದ ಗಣಿಗಾರಿಕೆಗೆ ಅನುಮತಿ ಕೋರಿ ಕಂಪೆನಿಯು ಅರ್ಜಿ ಸಲ್ಲಿಸಿತ್ತು. ಅನುಮತಿ ನೀಡುವ ಕುರಿತಾಗಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಳಗಾವಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಶುಕ್ರವಾರ ಸಾವರ್ಜನಿಕ ಅಹವಾಲು ಸಭೆಯನ್ನು ಏರ್ಪಡಿಸಿತ್ತು.ಸಭೆಯಲ್ಲಿ ರೈತರ ಪರವಾಗಿ ಮಾತನಾಡಿದ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ’ರೈತರನ್ನು ದೇಶದ ಬೆನ್ನೆಲುಬು ಎಂದು ಬಣ್ಣಿಸುವ ಸರ್ಕಾರ ಆತನ ಉಸಿರಾಗಿರುವ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಉದಾರವಾಗಿ ಅನುಮತಿ ನೀಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಕಟಕಿಯಾಡಿದರು.ಈ ಭಾಗದ ರೈತರ ಭೂಮಿಗೆ ಈಗ ತಾನೆ ಘಟಪ್ರಭಾ ಬಲದಂಡೆ ಕಾಲುವೆ ನೀರು ಬಂದು ತಲುಪಿದೆ. ನೀರಾವರಿ ಸೌಲಭ್ಯ ಪಡೆದು ಬೆಳೆ ಬೆಳೆಯಲು ಮುಂದಾಗಿರುವ ರೈತರಿಗೆ ಅಡ್ಡಿಪಡಿಸಿದರೆ ತೊಂದರೆ ಆದೀತು ಎಂದು ಅವರು ಎಚ್ಚರಿಸಿದರು.

2013ರಲ್ಲಿ ಭೂ ಸಾ್ವಧೀನ ಪ್ರಕಿ್ರಯೆಗೆ ತಂದಿರುವ ತಿದ್ದುಪಡಿ ಪ್ರಕಾರ ರೈತರ ವಿರೋಧವಿದ್ದರೆ ಭೂಮಿಯನ್ನು ಸಾ್ವಧೀನ ಪಡಿಸಿಕೊಳ್ಳುವಂತಿಲ್ಲ ಎಂದು ಅವರು ಹೇಳಿದರು.ಸಭೆಯಲ್ಲಿ ಮಾತನಾಡಿದ ರೈತ ಮುಖಂಡರಾದ ಈಶ್ವರ ಕತ್ತಿ, ಭಜಂತಿ್ರ  ಮತು್ತ ಶಿವಪುತ್ರಪ್ಪ ಜಕಬಾಳ, ದಾಲ್ಮಿಯಾ ಕಾರ್ಖಾನೆ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತಿ್ತದ್ದು ಕೂಡಲೇ ರೈತರ ಭೂಮಿಯನ್ನು ಮರಳಿಸಿ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡ ಭೀಮಶಿ ಗಡಾದ, ರೈತರನ್ನು ಪುಸಲಾಯಿಸಿ ಕಡಿಮೆ ದರದಲ್ಲಿ ಕೃಷಿ ಭೂಮಿಯನ್ನು ಕಾರ್ಖಾನೆಗೆ ಮಾರಾಟ ಮಾಡಿಸುವ ಹುನ್ನಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತಿ್ತರುವ ಈ ಸಂಸೆ್ಥಯ ವಕೀಲರ ವಿರುದ್ಧ ಹರಿಹಾಯ್ದರು. ದಾಲ್ಮಿಯಾ ಕಂಪೆನಿಯ ಪ್ರತಿನಿಧಿ ಮಾತನಾಡಿ, ಸರ್ಕಾರದ ಆಹ್ವಾನದ ಮೇಲೆ ಸಂಸೆ್ಥ ಇಲ್ಲಿ ಕಾಲಿಟ್ಟಿದೆ. ಕೃಷಿಕರು ತಮ್ಮ ಹೋರಾಟವನ್ನು ಕಾರ್ಖಾನೆ ವಿರುದ್ಧ ನಡೆಸುವುದು ಸರಿಯಲ್ಲ ಎಂದರು.ಜಿಲ್ಲಾಧಿಕಾರಿ ಎನ್‌.ಜಯರಾಂ ಅವರು ಮಾತನಾಡಿ, ಸಭೆಯ ನಡಾವಳಿಗಳನ್ನು ಕೂಡಲೇ ಸರ್ಕಾರಕೆ್ಕ ರವಾನೆ ಮಾಡುವುದಾಗಿ ಭರವಸೆ ನೀಡಿ ಸಭೆ ಮೊಟಕುಗೊಳಿಸಿ, ಹೊರನಡೆದಾಗ ಅವರ ವಾಹನಕ್ಕೆ ರೈತರು ಮುತ್ತಿಗೆ ಹಾಕಿ ತಮ್ಮ ಆಕೊ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry