ದಾಳಿಂಬೆ ಬೆಳೆದ ರೈತರನ್ನು ರಕ್ಷಿಸಿ

7

ದಾಳಿಂಬೆ ಬೆಳೆದ ರೈತರನ್ನು ರಕ್ಷಿಸಿ

Published:
Updated:

ಕರ್ನಾಟಕದ 13 ಜಿಲ್ಲೆಗಳಲ್ಲಿ ಸುಮಾರು 33 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆಗೆ 2004ರಲ್ಲಿ ದುಂಡಾಣು ಅಂಗಮಾರಿ ರೋಗ ತಗುಲಿ ಬೆಳೆ ಸಂಪೂರ್ಣ ನಾಶವಾಯಿತು. ಅಂದಿನಿಂದ ಇಂದಿನವರೆಗೂ ದಾಳಿಂಬೆ ರೈತರು ಆತಂಕದ ಜೀವನ ನಡೆಸುತ್ತಿದ್ದಾರೆ.ದಾಳಿಂಬೆ ಬೆಳೆಯಲು ಎಕರೆಗೆ 50 ರಿಂದ 60 ಸಾವಿರ ರೂ ಖರ್ಚು ಮಾಡಿದ್ದರು. ಅನೇಕರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಸಾಲದ ಬಡ್ಡಿಯನ್ನೂ ಅನೇಕರು ಪಾವತಿ ಮಾಡಿಲ್ಲ.ರೋಗದ ಹಾವಳಿಯಿಂದಾಗಿ ರೈತರಿಗೆ ಸಾಲ ತೀರಿಸಲು ಸಾಧ್ಯವಾಗಿಲ್ಲ. ಸಾಲ ಮನ್ನಾ ಮಾಡಬೇಕೆಂದು ಸರ್ಕಾರಗಳಿಗೆ ರೈತರು ಮನವಿ ಸಲ್ಲಿಸುತ್ತಲೇ ಇದ್ದಾರೆ.

 

ಈ ಸಮಯದಲ್ಲೇ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ಜಾರಿ ಮಾಡಿ, ಸಾಲದ ಕಂತು ಮತ್ತು ಬಡ್ಡಿ ತುಂಬುವಂತೆ ಒತ್ತಾಯಿಸುತ್ತಿವೆ. ಸರ್ಕಾರ ಈ ಬಜೆಟ್‌ನಲ್ಲಿ ಸಾಲ ಮನ್ನಾ ಮಾಡುವ ನಿರ್ಧಾರ ಪ್ರಕಟಿಸಿ  ನೆರವಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry