ಭಾನುವಾರ, ನವೆಂಬರ್ 17, 2019
29 °C

ದಾಳಿಂಬೆ ಬೆಳೆ ನಾಶ: ವಿಷ ಕುಡಿದ ರೈತ

Published:
Updated:

ಪಾವಗಡ: ವಿಷ ಕುಡಿದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಬೆಳ್ಳಿಬಟ್ಲು ಗ್ರಾಮದಲ್ಲಿ ಬುಧವಾರ ನಡೆದಿದೆ.ಗ್ರಾಮದ ಬಸವರಾಜು (50) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಪಟ್ಟಣದ ಎಸ್‌ಬಿಎಂ ಬ್ಯಾಂಕ್‌ನಲ್ಲಿ ದಾಳಿಂಬೆ ಬೆಳೆಯಲು ರೂ 5.50 ಲಕ್ಷ ಸಾಲ ಪಡೆದಿದ್ದರು. ಬೆಳೆಗೆ ವೈರಸ್ ಬಂದು ಸಂಪೂರ್ಣ ನಾಶವಾಗಿತ್ತು.ಇದರಿಂದ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. 

ಪ್ರತಿಕ್ರಿಯಿಸಿ (+)